Popular Posts

ಡಿ. 22ಕ್ಕೆ ವಿಜಯ್ ದೇವರಕೊಂಡ ಅಭಿನಯದ ‘SVC 59’ ಟೈಟಲ್ ಗ್ಲಿಂಪ್ಸ್

ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣದ ಚಿತ್ರಕ್ಕೆ ರವಿ ಕಿರಣ್ ಕೋಲಾ ಆಕ್ಷನ್ ಕಟ್

ಹೈದರಾಬಾದ್: ಯಶಸ್ವಿ ಚಿತ್ರಗಳನ್ನು ನೀಡುತ್ತ ಬಂದಿರುವ ಪ್ರತಿಷ್ಠಿತ ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ, ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರ ‘SVC 59’ ಅನೌನ್ಸ್ ಆಗಿದೆ. ದಿಲ್ ರಾಜು ಮತ್ತು ಶಿರೀಶ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ಗ್ಲಿಂಪ್ಸ್ ಡಿಸೆಂಬರ್ 22 ರಂದು ಸಂಜೆ 07:29 ಕ್ಕೆ ಬಿಡುಗಡೆಯಾಗಲಿದೆ.

‘ರಾಜ ವಾರು ರಾಣಿ ಗಾರು’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರವಿ ಕಿರಣ್ ಕೋಲಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರೋಮೋದಲ್ಲಿ ನಾಯಕನ ವ್ಯಕ್ತಿತ್ವದ ಬಗ್ಗೆ ನಿರ್ದೇಶಕರು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದರು.

ಈ ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ರವಿ ಕಿರಣ್‌ ಕೋಲಾ, “ಒಬ್ಬ ವ್ಯಕ್ತಿಯ ಬಗ್ಗೆ ಕಥೆ ಹೇಳಲು ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ. ಆ ಪಾತ್ರ ನನ್ನ ನೆನಪಿನಲ್ಲೇ ಇತ್ತು. ಅವನನ್ನು ನಾನು ನೋಡುತ್ತಲೇ ಬೆಳೆದಿದವನು. ಅವನು ಪರಿಪೂರ್ಣನಲ್ಲ, ಆದರೆ ವಾಸ್ತವಕ್ಕೆ ಹತ್ತಿರವಾಗಿದ್ದಾನೆ. ಕೋಪಿಷ್ಟ ಮತ್ತು ಘಾಸಿಗೊಳಗಾದವನು. ಅವನನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ನಾನು ಪ್ರೀತಿಸಿದ್ದೇನೆ. ಈ ಕಥೆಯನ್ನು ಹೇಳಲೇಬೇಕಿತ್ತು, ಶೀಘ್ರದಲ್ಲೇ ನೀವು ಅವನನ್ನು ಭೇಟಿಯಾಗಲಿದ್ದೀರಿ,” ಎಂದು ಪಾತ್ರದ ತೀವ್ರತೆಯನ್ನು ವಿವರಿಸಿದ್ದಾರೆ.

ಹಳ್ಳಿಯ ಬ್ಯಾಕ್‌ಡ್ರಾಪ್‌ನಲ್ಲಿ ಮಾಸ್ ಆಕ್ಷನ್ ಡ್ರಾಮಾ ಶೈಲಿಯ ಚಿತ್ರ ಇದಾಗಿದ್ದು, ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಪಕರು ತೆರೆಗೆ ತರಲಿದ್ದಾರೆ. ವಿಜಯ್ ದೇವರಕೊಂಡ ಅವರ ಜತೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ‘SVC 59’ ಚಿತ್ರದ ಕಿರು ಪ್ರೋಮೋ ಝಲಕ್‌ ಹೊರಬಿದ್ದಿದ್ದು, ಅಂತ್ಯದಲ್ಲಿ ವಿಜಯ್ ದೇವರಕೊಂಡ ಅವರ ರಕ್ತಸಿಕ್ತ ಕೈ ಮಾತ್ರ ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ದಿಲ್ ರಾಜು, ಶಿರೀಶ್ ಈ ಚಿತ್ರದ ನಿರ್ಮಾಪಕರಾಗಿದ್ದು, ಕಥೆ ಬರೆದು ರವಿ ಕಿರಣ್ ಕೋಲಾ ಆಕ್ಷನ್ ಕಟ್ ಹೇಳಲಿದ್ದಾರೆ.

Leave a Reply

Your email address will not be published. Required fields are marked *