Popular Posts

AI ತಂತ್ರಜ್ಞಾನದಲ್ಲಿ “ಕೊರಗಜ್ಜ” ಚಿತ್ರದ ಶ್ರೇಯಾ ಘೋಷಾಲ್ ಹಾಡು

ಸುಧೀರ್ ಅತ್ತಾವರ್ ಅವರ ನಿರ್ದೇಶನದ, ಶ್ರೇಯಾ ಘೋಷಾಲ್ ಹಾಡಿರುವ “ಕೊರಗಜ್ಜ” ಚಿತ್ರದ ಎರಡನೆಯ ಹಾಡು ಬಿಡುಗಡೆಯಾಗುತ್ತಿದೆ .

ಅಂತಾರಾಷ್ಟ್ರೀಯ ಫುಟ್‌ಬಾಲ್ ತಾರೆ ಲಿಯೊನಲ್ ಮೆಸ್ಸಿ ಇತ್ತೀಚಿನ ಭಾರತಕ್ಕೆ ಭೇಟಿ ನೀಡಿದಾಗ “ಮೈದಾನಂ ಮೀದಾ…ಒಕ್ಕ ವೀರುಡು…” ಎಂಬ ಎಐ ಹಾಡನ್ನು ಕ್ರಿಯೇಟ್ ಮಾಡಿದವರೇ ಇದೀಗ “ಕೊರಗಜ್ಜ” ಚಿತ್ರದಲ್ಲಿ ಶ್ರೇಯಾ ಘೋಷಾಲ್ ಹಾಡನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಿದ್ದಾರೆ, ಸುಧೀರ್ ಅತ್ತಾವರ್ ರಚನೆಯ ‘ಗಾಳಿ ಗಂಧ…ತೀಡಿ ತಂದ’ ಎಂಬ ಹಾಡಿಗೆ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈ ಹಾಡಿನ ಟ್ರ‍್ಯಾಕ್ ಕೇಳಿ ಶ್ರೆಯಾ ಘೋಷಾಲ್ ಹಾಡಲು ಒಪ್ಪಿಕೊಂಡದ್ದು ಹಾಡಿನ ಬಗ್ಗೆ ಇರುವ ಕುತೂಹಲವನ್ನು ಹೆಚ್ಚಿಸಿದೆ.

ಇತ್ತೀಚೆಗೆ ಈ ಹಾಡಿನ ಸಾಹಿತ್ಯ ಬಿಡುಗಡೆಗೊಳಿಸಿದ್ದ ಚಿತ್ರತಂಡ ಈಗ ಹಾಡಿನಲ್ಲಿ ಬರುವ ಮುಗ್ಧ ಪ್ರೇಮಿಗಳ ಸ್ಟನ್ನಿಂಗ್ ಸ್ಟಿಲ್ ನ್ನು ಬಿಡುಗಡೆಗೊಳಸಿ, ಚಿತ್ರಕ್ಕೆ ಹೊಸ ಆಯಾಮ ಇರುವುದನ್ನು ತೋರಿಸಿದೆ. “ಕೊರಗಜ್ಜ” ಚಿತ್ರದಲ್ಲಿ ಪ್ರಣಯದ ಸನ್ನಿವೇಶವೇ ಎಂದು ಕೆಲವರು ಮೂಗು ಮುರಿಯಬಹುದು. ಆದರೆ ಎಲ್ಲದಕ್ಕೂ “ಕೊರಗಜ್ಜ” ಚಿತ್ರ ಬಿಡುಗಡೆಯ ನಂತರವೇ ಉತ್ತರ ದೊರಕಲಿದೆ.

Leave a Reply

Your email address will not be published. Required fields are marked *