Popular Posts

‘ರಾಜದ್ರೋಹಿ’ ಚಿತ್ರವಿಮರ್ಶೆ – ಫ್ಯಾಮಿಲಿಯಲ್ಲಿ ಪಾಲಿಟಿಕ್ಸ್ ಎಂಟ್ರಿಯಾದಾಗ..

(ರೇಟಿಂಗ್: 3.5 star)

ಸಿನಿಮಾ ಒಂದು ಪ್ರಬಲ ಮಾಧ್ಯಮ.ಶೀಘ್ರ ಸಮಯದಲ್ಲಿ ಜನರನ್ನು ತಲುಪಲು ಇದಕ್ಕಿಂತ ಸರಳ ಮಾರ್ಗ ಬೇರೊಂದಿಲ್ಲ. ಚಿತ್ರರಂಗಕ್ಕೂ ರಾಜಕೀಯ ಕ್ಷೇತ್ರಕ್ಕೂ ಮೊದಲಿನಿಂದಲೂ ನಂಟಿದೆ. ರಾಜಕಾರಣಿಗಳ ಅವ್ಯವಹಾರ, ಬಣ್ಣವನ್ನು ಬಯಲು ಮಾಡಲು ಹೋದ ನಿರ್ದೇಶಕನ ಹಾಗೂ ಪ್ರಾಮಾಣಿಕ ಕುಟುಂಬವೊಂದರಲ್ಲಿ ರಾಜಕೀಯ ಪ್ರವೇಶಿಸಿದಾಗ ಏನಾಗಬಹುದು ಎಂಬ ಎರಡೂ ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ಸಮರ್ಥರಾಜ್ ಅವರು ಈ ವಾರ ತೆರೆಕಂಡಿರುವ ರಾಜದ್ರೋಹಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

ಫ್ಯಾಮಿಲಿ ಸೆಂಟಿಮೆಂಟ್, ಪಾಲಿಟಿಕ್ಸ್, ಕ್ರೈಮ್ ಹೀಗೆ ವಿಭಿನ್ನ ಅಂಶಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕನೊಬ್ಬ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಿಂದ ಪ್ರೇರಿತನಾಗಿ ಅದನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಡುತ್ತಾನೆ. ಆತ ಯಾವುದೇ ಸೆಲಬ್ರಟಿ ತಪ್ಪು ಮಾಡಿದ್ದರೂ ಅದನ್ನು ಇದ್ದಹಾಗೆ ತೋರಿಸೋ ನಿಷ್ಠೂರವಾದಿ. ಆಗ ಆತನ ಚಿತ್ರದ ನೆಗೆಟಿವ್‌ಗಳನ್ನು ಸುಟ್ಟು ಹಾಕೋ ಕೆಲಸವೂ ನಡೆಯುತ್ತದೆ.

ಇನ್ನೊಂದು ಟ್ರ‍್ಯಾಕ್‌ನಲ್ಲಿ ನಾಯಕ ಶಿವು(ಪಟ್ರೆ ಅಜಿತ್) ವೀಸಾ ಮಾಡಿಸಲು ಚೆನ್ನೆ`ಗೆ ಹೋದಾಗ ವೀಸಾ ಕಛೇರಿಯಲ್ಲಿ ಕೆಲಸ ಮಾಡುವ ಪ್ರಿಯಾ(ಮಾನಸಿ)ಳ ಪರಿಚಯವಾಗುತ್ತದೆ, ಬಸ್ಸಿನಲ್ಲಿ ಬ್ಯಾಗ್ ವಿನಿಮಯದಿಂದ ಪ್ರಾರಂಭವಾಗುವ ಪರಿಚಯ ನಂತರ ಪ್ರೇಮಕ್ಕೆ ತಿರುಗುತ್ತದೆ, ಪ್ರಿಯಾ ಶಿವುನನ್ನು ಮನಸಾರೆ ಲವ್ ಮಾಡುತ್ತಾಳೆ, ಆದರೆ ಶಿವುಗೆ ಅದು ಗೊತ್ತಿರಲ್ಲ, ಅದೇ ಕಾರಣದಿಂದ ವೀಸಾ ರೆಡಿಯಾಗಿದ್ರೂ, ಕೊಡದೆ ಸತಾಯಿಸುತ್ತಾಳೆ, ಚಿತ್ರದ ಮತ್ತೊಂದು ಟ್ರ‍್ಯಾಕ್‌ನಲ್ಲಿ ಅನಂತನಾಗ್ ಹಾಗೂ ಲಕ್ಷ್ಮಿ ಅವರ ಕಥೆ ತೆರೆದುಕೊಳ್ಳುತ್ತದೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ ಜಯಕ್ಕ ಹಾಗೂ ಆಕೆಯ ಇಬ್ಬರು ಮಕ್ಕಳಾದ ಜಯರಾಮ(ಅಭಿಜಿತ್) ಹಾಗೂ ಗೌಡ್ರು(ಅಚ್ಯುತ್‌ಕುಮಾರ್) ಕಥೆ ತೆರೆದುಕೊಳ್ಳುತ್ತದೆ, ಹಿರಿಮಗನ ಪತ್ನಿ ಕಾವೇರಿ (ವೀಣಾ ಪೊನ್ನಪ್ಪ) ಊರಜನರ ಪ್ರೀತಿಗೆ ಪಾತ್ರಳಾಗಿರುತ್ತಾಳೆ, ಕಾವೇರಿ ಮಗುವೊಂದರ ತಾಯಿ ಕೂಡ, ಪುಡಿ ರಾಜಕಾರಣಿ ನಾಜೂಕಯ್ಯ(ಪಲ್ಲಕ್ಕಿ ರಾಧಾಕೃಷ್ಣ) ಕಾವೇರಿಯ ಜನಪ್ರಿಯತೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳಲು, ಆಕೆಯ ಮೈದುನ ಜಯರಾಮನಿಗೆ ಪಕ್ಷದಿಂದ ಟಿಕೆಟ್ ಕೊಡಿಸಿ, ಮೈದುನ ಪರವಾಗಿ ಕಾವೇರಿ ಜನರಲ್ಲಿ ಮತಯಾಚಿಸಬೇಕು ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಕಾವೇರಿಯ ಕುಟುಂಬದ ಮೇಲೆ ಹಲ್ಲೆ ಮಾಡುತ್ತಾನೆ, ತಲೆಗೆ ಬಿದ್ದ ತೀವ್ರ ಪೆಟ್ಟಿನಿಂದಾಗಿ ಹಿಂದಿನದೆಲ್ಲ ಮರೆತ ಕಾವೇರಿ ಏನಾದಳು, ಸಹೋದರ, ತಾಯಿಯ ಕೊಲೆ ಕೊಲೆ ಆರೋಪದಡಿ ಜೈಲು ಸೇರಿದ ಗೌಡ್ರು ಕಥೆ ಏನಾಯಿತು. ಕಾವೇರಿಯ ಪುಟ್ಟ ಮಗು ಏನಾಯಿತು ಇದಕ್ಕೆಲ್ಲ ಉತ್ತರ ಬೇಕಂದ್ರೆ ಇವತ್ತೇ ಹತ್ತಿರದ ಥೇಟರಿಗೆ ತೆರಳಿ ರಾಜದ್ರೋಹಿ ಚಿತ್ರ ವೀಕ್ಷಿಸಿ.

ನಾಯಕ ಶಿವು ಯಾರು,? ಆತನ ಹಿನ್ನೆಲೆ ಏನು ಎನ್ನುವುದಕ್ಕೂ ಕ್ಲೈಮ್ಯಾಕ್ಸ್ ನಲ್ಲಿ ಉತ್ತರವಿದೆ. ಚಿತ್ರರಂಗದಲ್ಲಿ ಪ್ರಾಮಾಣಿಕ ನಿರ್ದೇಶಕ, ನಿರ್ಮಾಪಕರು ಎದುರಿಸುವ ಸಂಕಷ್ಟಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ವೇಗವಾಗಿ ನಿರೂಪಿಸಿಕೊಂಡು ಹೋಗಿದ್ದು ಸ್ವಲ್ಪ ಅತ್ತಿತ್ತ ತಿರುಗಿದರೂ ಕಥೆ ಅರ್ಥವಾಗಲ್ಲ, ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಉತ್ತಮವಾಗಿ ಮೂಡಿಬಂದಿದ್ದು ಎರಡು ಹಾಡುಗಳು ಗುನುಗುವಂತಿವೆ, ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿದೆ, ಶಿವು ಪಾತ್ರದಲ್ಲಿ ಅಜಿತ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಂತನಾಗ್ ಲಕ್ಷ್ಮಿ ಅವರು ಹೆಚ್ಚು ಸೀನ್‌ಗಳಲ್ಲಿಲ್ಲದಿದ್ರೂ, ಅವರ ಪಾತ್ರಗಳು ಸದಾ ನೆನಪಲ್ಲುಳಿಯುತ್ತವೆ, ನಾಯಕನ ಗೆಳೆಯನಾಗಿ ಶರಣ್ ಕಾಮಿಡಿ ಪಾತ್ರ ನೆನಪಲ್ಲುಳಿಯುತ್ತದೆ, ಒಂದೇ ಜನರೇಶನ್ ಕಥೆಯನ್ನು ನಿರ್ದೇಶಕ ಸಮರ್ಥರಾಜ್ ಮೂರು ವರ್ಷನ್‌ನಲ್ಲಿ ನಿರೂಪಿಸಿದ್ದಾರೆ.

Leave a Reply

Your email address will not be published. Required fields are marked *