Popular Posts

ಹೊಸಬರ ಕನಸಿಗೆ ಧ್ರುವ ಸರ್ಜಾ ಸಾಥ್ ‘ಮಗ್ನೇ’ ಮಾಸ್ ಆಲ್ಬಂ ಸಾಂಗ್ ರಿಲೀಸ್

ಸಿನಿಮಾ ರಂಗದ ಕನಸು ಹೊತ್ತು ಚಿತ್ರರಂಗದಲ್ಲಿ ಸಾಧಿಸಬೇಕು ಎಂದು ಲಕ್ಷಾಂತರ ಜನ ಬರ್ತಾರೆ. ಆ ಲಕ್ಷಾಂತರ ಜನರಲ್ಲಿ ಕೆಲವರನ್ನ ಮಾತ್ರ ಪ್ರೇಕ್ಷಕರು ಲಕ್ಷವಿಟ್ಟು ನೋಡ್ತಾರೆ. ಕಾರಣ ಅವರಲ್ಲಿ ಅಡಗಿರುವ ಪ್ರತಿಭೆ. ಇಲ್ಲೊಬ್ಬ ಪ್ರತಿಭಾವಂತನನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರೋತ್ಸಾಹಿಸಿದ್ದಾರೆ, ಆತನ ಪ್ರಯತ್ನಕ್ಕೆ ಬೆನ್ತಟ್ಟಿ ಭೇಷ್ ಎಂದಿದ್ದಾರೆ. ಆತನೇ ವಾಲೀಸ್ ಸಂತೋಷ್.ಎನ್.

ವಾಲೀಸ್ ಸಂತೋಷ್ ಪ್ರತಿಭಾವಂತ ನೃತ್ಯಪಟು. ಡ್ಯಾನ್ಸ್ ಕೊರಿಯೋಗ್ರಾಫರ್. ಮಾಗಡಿಯ ರೈತಾಪಿ ಕುಟುಂಬದಲ್ಲಿ ಜನಿಸಿದ ವಾಲೀಸ್ ಸಂತೋಷ್ ಸಿನಿಮಾ ರಂಗದ ಕನಸು ಹೊತ್ತು‌ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅನೇಕ ನೃತ್ಯಸಂಯೋಜಕರ ಜೊತೆ ಡ್ಯಾನ್ಸರ್ ಆಗಿ, ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿದ್ದಲ್ಲದೆ, ಕನ್ನಡದ ಡಿಕೆಡಿ, ತೆಲುಗಿನ ಡಿ ಶೋ ಜೊತೆಗೆ ತಮಿಳಿನ ರಿಯಾಲಿಟಿ ಶೋಗಳಲ್ಲಿ ಕೊರಿಯೋಗ್ರಫರ್ ಆಗಿಯೂ ಕೆಲಸ ಮಾಡಿರುವ ವಾಲೀಸ್ ಸಂತೋಷ್ ಈಗ ಆಲ್ಬಂ ಸಾಂಗ್ ಒಂದನ್ನು ಮಾಡಿದ್ದಾರೆ.

ತಾವೇ ತಂಡವೊಂದನ್ನು ಕಟ್ಟಿ ಗೋಡೆಯ ಹಾಗೆ ನಿಲ್ಲಬೇಕು ಅಂತ ವಾಲೀಸ್ ಫ್ಲಿಕ್ಸ್ ಎಂಬ ಸಂಸ್ಥೆಯನ್ನು ಕಟ್ಟಿ ಮಗ್ನೇ ಚಟ್ವಂತ ಕೊಟ್ರೆ ಮುಟ್ ನೋಡಬೇಕು ಅನ್ನೋ ಮಾಸ್ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದಾರೆ. ಇವರ ಪ್ರಯತ್ನಕ್ಕೆ ಹನುಮ ಭಕ್ತ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಸಾಂಗ್ ಲಾಂಚ್ ಮಾಡಿ ತುಂಬಾ ಚೆನ್ನಾಗಿದೆ ಎಂದು ಶುಭ ಹಾರೈಸಿದ್ದಾರೆ.

ಈಚೆಗೆ ನಡೆದ ಮಗ್ನೇ ಹಾಡು ಬಿಡುಗಡೆ ಸಮಾರಂಭದಲ್ಲಿ ಈ ವಿಚಾರವನ್ನು ಪತ್ರಿಕಾ ಮಿತ್ರದ ಜತೆ ಹಂಚಿಕೊಂಡ ವಾಲೀಸ್ ಸಂತೋಷ್ ಮುಂದೆ ಹೀರೋ ಆಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋ ಕನಸಿನ ಯೋಜನೆಯಲ್ಲಿದ್ದಾರೆ. ತನ್ನದೇ ಆದ ಡ್ಯಾನ್ಸ್ ಕ್ಲಾಸ್ಗಳನ್ನು ನಡೆಸುತ್ತಿರುವ ವಾಲೀಸ್ ಯುವ ತಂತ್ರಜ್ಞರ ತಂಡವೊಂದನ್ನು ಕಟ್ಟಿದ್ದಾರೆ. ತನ್ನ ಜೀವನದಲ್ಲಿ ಆದಂಥ ಅವಮಾನವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಾಧಿಸಿ ತೋರಿಸಿದ್ದಾರೆ.

ಮಗ್ನೇ ಆಲ್ಬಂ ಸಾಂಗ್ ವಾಲೀಸ್ ಸಂತೋಷ್ ಅವರ ಸಿನಿಮಾ ಎಂಟ್ರಿಗೆ ಪ್ಲಾಟ್ ಫಾರಂ ಆಗಿದೆ. ಮಾರುತಿ ರಾವ್ ಅವರ ಸಂಕಲನ ಮತ್ತು ಛಾಯಾಗ್ರಹಣ ಮಗ್ನೇ ಆಲ್ಬಂ ಸಾಂಗ್ ಗಿದೆ. ಧ್ರುವ ಕೇಶವ್ ಅವರ ಸಂಗೀತ, ತೇಜಸ್ ಕುಮಾರ್ ಅವರ ಸಾಹಿತ್ಯ ಈ ಹಾಡಿಗಿದೆ. ಪಕ್ಕಾ ಮಾಸ್ ಸ್ಟೈಲ್ ನಲ್ಲಿ ಕಮರ್ಶಿಯಲ್ ಹೀರೋ ಗೆ ನೀಡುವ ಬಿಲ್ಡಪ್ ಸಾಂಗ್ ರೀತಿ ಮಗ್ನೇ ಹಾಡು ಮೂಡಿಬಂದಿದ್ದು ಹಿಪಪ್ ಶೈಲಿಯ ಟಚ್ ಇದೆ. Wallis Flics Youtube ಚಾನೆಲ್ ನಲ್ಲಿ ಈ ಹಾಡು ಲಭ್ಯವಿದೆ.

Leave a Reply

Your email address will not be published. Required fields are marked *