Popular Posts

ಬಿಂಗೋ ಕೋಟಿ ಕೋಟಿ ಹಣ ಸಂಕಷ್ಟಗಳ ಹೂರಣ

ಚಿತ್ರ: ಬಿಂಗೋ
ನಿರ್ಮಾಣ: ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ, ಮನನ (ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್)
ನಿರ್ದೇಶನ- ಶಂಕರ್ ಕೋನಮಾನಹಳ್ಳಿ,
ಛಾಯಾಗ್ರಹಣ: ನಟರಾಜ್ ಮುದ್ದಾಲ್, ಸಂಗೀತ: ಹಿತನ್ ಹಾಸನ್,
ಹಿನ್ನೆಲೆ ಸಂಗೀತ: ಅಂಜನ್ ಪೂಜಾರಿ
ಸಂಕಲನ: ವೆಂಕಿ U D V,
ತಾರಾಗಣ: ಆರ್.ಕೆ. ಚಂದನ್ (ಕಥೆ-ನಾಯಕ), ರಕ್ಷಾ ನಿಂಬರ್ಗಿ, ರಾಗಿಣಿ ದ್ವಿವೇದಿ (2 ಶೇಡ್ ವಿಶೇಷ ಪಾತ್ರ), ರಾಜೇಶ್ ನಟರಂಗ, ಮಜಾ ಟಾಕೀಸ್ ಪವನ್

ರೇಟಿಂಗ್: 4 / 5

ಇದೇ ಶುಕ್ರವಾರ ತೆರೆಕಂಡಿರುವ ಬಿಂಗೋ ಒಂದು ಕ್ರೈಮ್, ಥ್ರಿಲ್ಲರ್ ಚಿತ್ರ. ಮನುಷ್ಯ ಹಣದ ಹಿಂದೆ ಹೋದರೆ ಏನಾಗಬಹುದು ಎಂಬುದನ್ನು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ.

ಸಾಮಾನ್ಯ ಹುಡುಗನ ಕನಸುಗಳ ಸುತ್ತ ನಡೆಯವ ಕಥೆಯಿದು. ಪ್ರೀತಿಸುವ ಹುಡುಗಿ ರಿಜೆಕ್ಟ್ ಮಾಡಿದ ಕಾರಣದಿಂದ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ ನಾಯಕ ರಾಜ (ಆರ್.ಕೆ. ಚಂದನ್) ನೂರು-ಇನ್ನೂರು ರೂಪಾಯಿಗೆ ಕಷ್ಟಪಡುತ್ತಿರುತ್ತಾನೆ. ಅಂಥವನು ಹಠಾತ್ತನೆ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಸಿಲುಕಿಕೊಳ್ಳುತ್ತಾನೆ. ಅವನ ಬಳಿ ಅಷ್ಟೊಂದು ಹಣ ಹೇಗೆ ಬಂತು? ಅವನು ಅಪರಾಧಿನಾ ಅಥವಾ ಅಮಾಯಕನಾ? ಎಂದು ಪೊಲೀಸರು ಅವನ ತಾಯಿ, ಆತನ ಮಾಜಿ ಪ್ರೇಯಸಿ ಹಾಗೂ ಸ್ನೇಹಿತನನ್ನು ವಿಚಾರಣೆ ಮಾಡುವ ಮೂಲಕ ಬಿಂಗೋ ಚಿತ್ರದ ಕಥೆ ತೆರೆದುಕೊಳ್ಳುತ್ತೆ.

2022ರ ಸಮಯದಲ್ಲಿ ನಡೆಯುವ ಕಥೆಯಿದು. ನಿರ್ದೇಶಕರು ಎಲ್ಲಿಯೂ ಸಮಯ ವ್ಯರ್ಥ ಮಾಡದೆ ಪಟಪಟನೆ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ. ಯಾವುದೇ ಅನಗತ್ಯ ಹಾಡು, ಫೈಟ್ ಕೂಡ ಈ ಚಿತ್ರದಲ್ಲಿಲ್ಲ. ಮಧ್ಯಂತರದವರೆಗೂ ನಸಯಕ ರಾಜ ಏನು ಮಾಡಿದ? ಎಂಬ ಕುತೂಹಲ ಹಿಡಿದಿಡುತ್ತದೆ. ಇದರ ಜತೆ ಒಂದು ಲವ್ ಟ್ರಾಕ್ ಕೂಡ ಇದೆ. ಅದೇ ಸೋಮಾರಿಯಾಗಿದ್ದ ರಾಜ ಡಿಲವರಿ ಬಾಯ್ ಆಗಲು ಕಾರಣ. ನಾಯಕಿಯ ಕಾರಣದಿಂದಲೇ ಆತ ದುಡ್ಡು ಸಂಪಾದಿಸಲು ಮುಂದಾಗುತ್ತಾನೆ. ಮುಂದೆ ನಡೆಯುವುದೇ ರೋಚಕ ಕಹಾನಿ. ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಹೆಚ್ಚು ಇಷ್ಟವಾಗುತ್ತೆ. ಶ್ರಮವಿಲ್ಲದೆ ಹಣ ಗಳಿಸಬೇಕೆಂಬ ಯುವಕರಿಗೆ ಸಂದೇಶ ಕೂಡ ಬಿಂಗೋ ಚಿತ್ರದಲ್ಲಿದೆ.
ನಟ ಚಂದನ್ ಅವರೇ ಕಥೆ ಬರೆದಿದ್ದು ನಿರ್ದೇಶಕ ಶಂಕರ್ ಚಿತ್ರಕಥೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಚಂದನ್ ಅವರ ಡಿಲವರಿ ಬಾಯ್ ಆಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಗಿಣಿ ದ್ವಿವೇದಿ ಅವರ ಪರಿಪಕ್ವ ನಟನೆ ಚಿತ್ರದ ಪ್ಲಸ್ ಪಾಯಿಂಟ್.

Leave a Reply

Your email address will not be published. Required fields are marked *