1
1
ಕನ್ನಡದ ಪ್ರತಿಭಾವಂತ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ಬಿಂಗೋ ಸೆ.25ರಂದು ಅಂದರೆ, ನಾಳೆ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಅಪ್ಪಟ ಕನ್ನಡದ ಪ್ರತಿಭೆ, ಯುವ ನಟ ಆರ್.ಕೆ.ಚಂದನ್ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಆರ್.ಕೆ.ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಅಡಿ ಲಲಿತಾಸ್ವಾಮಿ ಆರ್.ಪರಾಂಕುಶ ಅವರ ನಿರ್ಮಾಣದ ಈ ಚಿತ್ರದಲ್ಲಿ ನಟಿ ರಕ್ಷಾ ನಿಂಬರ್ಗಿ ನಾಯಕಿಯಾಗಿ ನಟಿಸಿದ್ದಾರೆ.
ಅಲ್ಲದೆ ನಟಿ ರಾಗಿಣಿ ದ್ವಿವೇದಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಪಾತ್ರವು ಎರಡು ಶೇಡ್ ಗಳಲ್ಲಿ ಮೂಡಿಬರಲಿದ್ದು ತುಂಬಾ ವೇರಿಯೇಶನ್ಸ್ ಇದೆ, ಮನಿ, ಫೇಮ್, ಸಕ್ಸಸ್ನಂಥ ವಿಷಯಗಳನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದು, ಮಿಸ್ಟೀರಿಯಸ್ ಎಲಿಮೆಂಟ್ಸ್ ಈ ಚಿತ್ರದಲ್ಲಿದೆ ಎಂದವರು ಹೇಳಿದ್ದಾರೆ.
ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಮಾತನಾಡುತ್ತ ಬಿಂಗೋ ಎನ್ನುವ ಟೈಟಲ್ ಯಾಕೆ ಅಂತ ಸಿನಿಮಾ ನೋಡುವಾಗ ಚಿತ್ರ ನೋಡುವಾಗ ಗೊತ್ತಾಗುತ್ತೆ, ರಾಜ್ಯದ ಎಲ್ಲಾ ನಗರಗಳಲ್ಲಿ ನಮ್ಮ ಟೀಮ್ ಪ್ರಚಾರ ಮಾಡಿದ್ದು, ಜನತೆ ಕೂಡ ಚಿತ್ರದ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ.

ಈಚೆಗೆ ಬಿಡುಗಡೆಯಾದ ಚಿತ್ರದ ಟೈಲರ್ಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಚಂದನ್ ಅವರ ಜತೆ ಕಿರುತೆರೆಯಲ್ಲಿ ಕೆಲಸ ಮಾಡಿದ್ದೆ, ಒಂದೊಳ್ಳೇ ಕಥೆಯನ್ನು ಅವರು ಮಾಡಿದ್ದಾರೆ. ನಟಿ ರಾಗಿಣಿ ಅವರ ಪಾತ್ರಕ್ಕೆ ಎರಡು ಶೇಡ್ ಇದೆ. ಕಥೆಯ ಬಹುಮುಖ್ಯ ಘಟ್ಟದಲ್ಲಿ ಬರುವಂಥ ಪಾತ್ರವದು. ಚಂದನ್ ಅವರ ಪಾತ್ರ ಎಲ್ಲರ ಗಮನ ಸೆಳೆಯಲಿದೆ ಎಂದು ಹೇಳಿದರು.
ನಾಯಕನಟ ಆರ್.ಕೆ.ಚಂದನ್ ಮಾತನಾಡುತ್ತ ಈ ಹಿಂದೆ ಕಿರುತೆರೆ ಅಲ್ಲದೆ ಆದಿತ್ಯ ಅವರ ಜತೆ ಕಿಯೋಸ್ ಚಿತ್ರದಲ್ಲಿ ನಟಿಸಿದ್ದೆ. ಇದು ನನ್ನ ಎರಡನೇ ಚಿತ್ರ. ಲೈಫಲ್ಲಿ ತುಂಬಾ ಆಂಬಿಷನ್ಸ್ ಇಟ್ಟುಕೊಂಡಿರುವ ಸಾಮಾನ್ಯ ಜನರಿಗೆ ಹತ್ತಿರವಾದ ಹುಡುಗನ ಪಾತ್ರ ನನ್ನದು. ಜೀವನದಲ್ಲಿ ಎಲ್ಲವೂ ಗ್ಯಾಂಬ್ಲಿಂಗ್ ಆಗಿದೆ. ನಾನು ನೋಡಿ ಕೇಳಿದಂಥ ನೈಜ ಘಟನೆಗಳನ್ನು ಇಟ್ಟುಕೊಂಡು ನಾನೇ ಈ ಕಥೆ ಮಾಡಿದ್ದೇನೆ, ನಮ್ಮ ಸಹೋದರ ಪುನೀತ್ ನನಗೆ ತಂದೆಯ ಸ್ಥಾನದಲ್ಲಿದ್ದು ಸಪೋರ್ಟ್ ಮಾಡ್ತಿದ್ದಾರೆ.

ನನ್ನ ಭಾವ ಪರಾಂಕುಶ್ ಅವರೂ ಸಹ ನಿರ್ಮಾಣದಲ್ಲಿ ಜತೆಯಾಗಿದ್ದಾರೆ. ಈಗಾಗಲೇ ಎಲ್ಲಾ ಕಡೆಗೂ ನಮ್ಮ ಚಿತ್ರಕ್ಕೆ ಉತ್ತಮ ಪ್ರಚಾರ
ಸಿಕ್ಕಿದೆ, ಚಿತ್ರದ ಕಂಟೆಂಟ್ ಎಲ್ಲರಿಗೂ ಅದರಲ್ಲೂ ಈಗಿನ ಕಾಲದ ಯೂಥ್ ಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದರು.
ಈ ಚಿತ್ರಕ್ಕೆ ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣ, ಹಿತನ್ ಹಾಸನ್ ಅವರ ಸಂಗೀತ ಸಂಯಜನೆ ಹಾಗೂ ವೆಂಕಟೇಶ್ ಯುವಿಡಿ ಅವರ ಸಂಕಲನವಿದೆ. ರಾಜೇಶ್ ನಟರಂಗ, ಮಜಾಟಾಕೀಸ್ ಪವನ್, ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಹಾಗೂ ಇತರರು ಉಳಿದ ತಾರಾಗಣದಲ್ಲಿದ್ದಾರೆ.