Popular Posts

‘ಸಿಟಿ ಲೈಟ್ಸ್’ ಕಂದಮ್ಮನ ಹಾಡು

ವಿಜಯಕುಮಾರ್(ದುನಿಯಾ ವಿಜಯ್) ತಮ್ಮ ನಿರ್ದೇಶನದ ಮೂರನೇ ಚಿತ್ರ ‘ಸಿಟಿಲೈಟ್ಸ್‌’ ಮೂಲಕ ಮತ್ತೊಬ್ಬ ಪುತ್ರಿ ಮೋನಿಷಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಸಿಟಿಲೈಟ್ಸ್‌ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ಬಾವ ಬಾವ ಎಂಬ ರ್ಯಾಪರ್ ಸಾಂಗ್ ಮೂಲಕ ಗಮನ ಸೆಳೆದಿದ್ದ ದುನಿಯಾ ವಿಜಯ್‌ ಇದೀಗ ಮೆಲೋಡಿ ಸಾಂಗ್ ಮೂಲಕ ಮೆಲೋಡಿ ಪ್ರಿಯರನ್ನು ರಂಜಿಸುತ್ತಿದ್ದಾರೆ. ಈ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಜಯಕುಮಾರ್ ಶೂಟಿಂಗ್ ಮುಗಿದ ಮೇಲೆ ನಿರ್ದೇಶಕರಿಗೆ ಮತ್ತೆ ಜೀವ ತುಂಬುವುದು ಸಂಗೀತ ನಿರ್ದೇಶಕ ಮತ್ತು ಸಾಹಿತಿ. ಸಲಗ ಚಿತ್ರದಿಂದಲೂ ಚರಣ್ ರಾಜ್ ಮತ್ತು ನಾಗಾರ್ಜುನ ಶರ್ಮಾ ಉತ್ತಮ ಸಾಹಿತ್ಯ-ಸಂಗೀತ ನೀಡುತ್ತಿದ್ದಾರೆ, ತುಂಬಾ ಕಷ್ಟಪಟ್ಟು ಈ ಚಿತ್ರವನ್ನು ಮಾಡಿದ್ದೇವೆ. ಬೇಗನೇ ರಿಲೀಸ್ ಡೇಟ್ ಪ್ರಕಟಿಸುತ್ತೇವೆ. ಈ ಹಿಂದೆ ಕ್ರೈಮ್, ಡ್ರಗ್ಸ್ ಕುರಿತು ಚಿತ್ರ ಮಾಡಿದ್ದೆ. ಈಗ ನಗರ ಜೀವನದ ಜತೆಗೆ ಸಮಾಜದಲ್ಲಿ ಮಂಗಳಮುಖಿಯರನ್ನು ಗೌರವಯುತವಾಗಿ ನೋಡಬೇಕು ಎಂದು ಹೇಳಿದ್ದೇವೆ ಎಂದರು.

ನಾಯಕ ವಿನಯ್‌ ರಾಜ್‌ ಕುಮಾರ್‌ ಮಾತನಾಡಿ ನನಗೆ ತುಂಬಾ ಇಷ್ಟವಾದ ಹಾಡಿದು. ಸಂಚಿತ್ ಹೆಗಡೆ ಅವರ ಗಾಯನ ಹಾಗೂ ಅದರ ಭಾವನೆಗಳು ಅದ್ಭುತವಾಗಿವೆ. ನಾಗಾರ್ಜುನ, ಚರಣ್, ಸಂಚಿತ್ ಮೂರು ಜನ ಸೇರಿದರೆ ಒಳ್ಳೆ ಸಾಂಗ್ ಬಂದೇ ಬರುತ್ತೆ ಎಂದರು. ಸಾಹಿತಿ ನಾಗಾರ್ಜುನ ಶರ್ಮ ಮಾತನಾಡಿ ಸಿಟಿ ಲೈಟ್ಸ್ ನಲ್ಲಿ ಗ್ರೇ ಶೇಡ್ ಜತೆಗೊಂದು ಮುಗ್ದತೆಯೂ ಇರುತ್ತದೆ. ಆ ಮುಗ್ಧತೆಯ ಭಾಗವೇ ಕಂದಮ್ಮ ಹಾಡು ಎಂದರು.

ನಾಯಕಿ ಮೋನಿಷಾ ವಿಜಯ್‌ ಕುಮಾರ್‌ ಮಾತನಾಡಿ ಈ ಹಾಡಿನ ಸಾಹಿತ್ಯ ಅರ್ಥಗರ್ಭಿತವಾಗಿದೆ. ಬೇಡ ಕಂದ ನಿನಗೆ ಅಲಂಕಾರ, ನೀನೆ ತಾನೆ ಬಂಗಾರ ಎಂಬ ಲೈನ್ ತುಂಬಾ ಇಷ್ಟವಾಯಿತು. ವಿನಯ್‌ ರಾಜ್‌ ಕುಮಾರ್‌ ಜೊತೆ ಅಭಿನಯಿಸಿದ್ದು ಖುಷಿ ಕೊಟ್ಟಿದೆ ಎಂದರು.

‘ಸಿಟಿ ಲೈಟ್ಸ್’ನಲ್ಲಿ ಚಿತ್ರಕ್ಕೆ ಜವಾಬ್ ದಾರಿ…ದೀಪಗಳು ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರಕ್ಕೆ ಶಿವಸೇನಾ ಅವರ ಛಾಯಾಗ್ರಹಣ, ದೀಪು ಎಸ್.ಕುಮಾರ್ ಅವರ ಸಂಕಲನ, ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್‌ ಹಾಗೂ ಯಂತ್ರೋದ್ದಾರಕ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕುಮಾರ್‌ ಹಾಗೂ ವಿಕ್ರಂ ಆರ್ಯಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಹಾಡಿನ ದೃಶ್ಯಾವಳಿಯಲ್ಲಿ ಮಕ್ಕಳಿಗೆ ಜಂಕ್ ಫುಡ್ ಹಾಗೂ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಸಣ್ಣ ಸಂದೇಶವನ್ನೂ ಸೇರಿಸಲಾಗಿದೆ.

Leave a Reply

Your email address will not be published. Required fields are marked *