Popular Posts

ಅದ್ದೂರಿಯಾಗಿ ನೆರವೇರಿತು “ಅಪ್ಪು ಕಪ್ ಸೀಸನ್ 4″ರ ಜರ್ಸಿ ಅನಾವರಣ* .

ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK studio ಸಂಸ್ಥೆಯ ಸಹಯೋಗದೊಂದಿಗೆ
“ಅಪ್ಪು ಕಪ್”(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ನಾಲ್ಕನೇ ಸೀಸನ್ ಪಂದ್ಯಗಳು ಇದೇ ಜುಲೈ 24, 25, 26 ರಂದು ನಡೆಯಲಿದೆ. “ಅಪ್ಪು ಕಪ್ ಸೀಸನ್ 4” ಜರ್ಸಿ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ ಟಿ.ಎ ಶರವಣ ಹಾಗೂ ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜರ್ಸಿ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಮೆನ್, ವುಮೆನ್ ಐಕಾನ್ ಗಳು, ತಂಡದ ರಾಯಭಾರಿಗಳು, ನಾಯಕರು,‌‌ ಮಾಲೀಕರು ‌ಹಾಗೂ ಆಟಗಾರರು ಉಪಸ್ಥಿತರಿದ್ದರು.

“ಚೇತನ್ ಸೂರ್ಯ ಅವರ ನೇತೃತ್ವದಲ್ಲಿ ” “ಅಪ್ಪು ಕಪ್” 3 ಸೀಸನ್ ಗಳು ಅದ್ದೂರಿಯಾಗಿ ನಡೆದಿದೆ. ಈಗ ನಾಲ್ಕನೇ ಸೀಸನ್ ಆರಂಭವಾಗಲಿದೆ. ಇದು ಇಷ್ಟು ಅದ್ದೂರಿಯಾಗಿ ನಡೆಯಲು ಕಾರಣ. ಪುನೀತ್ ರಾಜಕುಮಾರ್ ಅವರ ಹೆಸರಿಗಿರುವ ಬಲ. ಕಳೆದವರ್ಷ ನಾವು ಫೈನಲ್ ಅನ್ನು ಗೋವಾದಲ್ಲಿ ಆಯೋಜಿಸಿದ್ದೆವು. ಈ ಬಾರಿ ವಿದೇಶದಲ್ಲಿ ಆಯೋಜಿಸುವ ಯೋಚನೆ ಇತ್ತು. ಆದರೆ ಈಗ ಯುದ್ದ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಬೆಂಗಳೂರಿನಲ್ಲೇ ಪಂದ್ಯಗಳನ್ನು ಆಯೋಜಿಸಲಾಗಿದೆ. ಮುಂದಿನ‌ ಬಾರಿ ವಿದೇಶದಲ್ಲಿ ಆಯೋಜಿಸುತ್ತೇವೆ. ಇನ್ನೊಂದು ವಿಶೇಷವೆಂದರೆ ಈ ಬಾರಿಯ ವಿನ್ನರ್ ತಂಡಕ್ಕೆ ಐದು ಲಕ್ಷ ಮೌಲ್ಯದ ಉಡುಗೊರೆ ಹಾಗೂ ರನ್ನರ್ ತಂಡಕ್ಕೆ ಎರಡು ಲಕ್ಷ ರೂಪಾಯಿ ಮೌಲ್ಯದ ಉಡುಗೊರೆ ನಮ್ಮ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ ನೀಡುತ್ತಿದ್ದೇವೆ ಎಂದು ಟಿ.ಎ. ಶರವಣ ತಿಳಿಸಿದರು. ಸಾ.ರಾ.ಗೋವಿಂದು ಅವರು ಸಹ ” ಅಪ್ಪು ಕಪ್ ಸೀಸನ್ 4″ ಯಶಸ್ವಿಯಾಗಲೆಂದು ಹಾರೈಸಿದರು.
ಈ ಬಾರಿಯ ವಿಶೇಷವೆಂದರೆ ಶಟಲ್ ಬ್ಯಾಡ್ಮಿಂಟನ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಗೂ ಎರಡು ಬಾರಿ ನ್ಯಾಷನಲ್ ಚಾಂಪಿಯನ್ಸ್ ಗಳಾಗಿರುವ ನಾಲ್ಕು ಜನ ಪ್ರತಿಭೆಗಳನ್ನು ಗುರುತಿಸಿ ಅವರ ಮುಂದಿನ ಕ್ರೀಡಾ ಭವಿಷ್ಯದ ಅನುಕೂಲಕ್ಕಾಗಿ “ಅಪ್ಪು ಕಪ್ ” ವತಿಯಿಂದ ಪ್ರೋತ್ಸಾಹ ಧನವನ್ನು ನೀಡಲಾಯಿತು.

ಅಪ್ಪು ಕಪ್ ಸೀಸನ್ 4 ರಲ್ಲಿ ಭಾಗವಹಿಸುತ್ತಿರುವ ತಂಡಗಳ ವಿವರ

೧) “ವೀರ ಕನ್ನಡಿಗ ಬುಲ್ಸ್” ಮಾಲೀಕರು ಮೊನೀಶ್ ಸಿ, ನಾಯಕ ದಿಗಂತ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.
೨) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ಅರ್ಜುನ್ , ಸ್ಟಾರ್ ರಾಯಭಾರಿ ರವಿಶಂಕರ್.
೩) “ಜಾಕಿ ರೈಡರ್ಸ್” ಮಾಲೀಕರು ವಿನುತ ಸುನೀಲ್, ‌ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಮೋಹನ್.
೪) “ಮೌರ್ಯ ಸುರಭಿ ಸ್ಟ್ರೈಕರ್ಸ್” ಮಾಲೀಕರು ನರಸಿಂಹಮೂರ್ತಿ, ನಾಯಕ ಹರೀಶ್ ನಾಗರಾಜ್ , ಸ್ಟಾರ್ ರಾಯಭಾರಿ ನಾಗೇಂದ್ರ ಅರಸ್.
೫)”ಯುವರತ್ನ ಚಾಂಪಿಯನ್ಸ್ ” ಮಾಲೀಕರು ಮಂಜು ಹಾಗೂ ವಿನೋದ್ ರಾಜ್ , ನಾಯಕ ಅವಿನಾಶ್ ದಳಪತಿ, ಸ್ಟಾರ್ ರಾಯಭಾರಿ ಅನಿರುದ್ಧ್ ಜತ್ಕರ್.
೬) ಪವರ್ ಪೈತಾನ್ಸ್, ಮಾಲೀಕರು ಕೆ.ವಿ.ಪ್ರಭಾಕರ್ ಹಾಗೂ ಅರ್ಜುನ್ ಸೋಮಶೇಖರ್, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಅವಿನಾಶ್ ಎಸ್.ಡಿ .
೭)ಗಂಧದಗುಡಿ ವಾರಿಯರ್ಸ್ ಮಾಲೀಕರು ವಿನಯ್ ಹಾಗೂ ಭರತ್ ಕುಮಾರ್, ನಾಯಕ ವಿಕ್ರಮ್ ರವಿಚಂದ್ರನ್, ಸ್ಟಾರ್ ರಾಯಭಾರಿ ಧರ್ಮಣ್ಣ.
೮) “ಜೇಮ್ಸ್ ಕ್ಯೂಪಿಯಲ್ ಕಿಂಗ್ಸ್ ” ಮಾಲೀಕರು ಮಹೇಶ್ ಕುಮಾರ್, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ರಾಜೇಶ್ ನಟರಂಗ.
೯)”ದೊಡ್ಮನೆ ಡ್ರಾಗನ್ಸ್” ಮಾಲೀಕರು ನಿರಂತರ ಗಣೇಶ್, ನಾಯಕ ಇಂದ್ರಜಿತ್ ಲಂಕೇಶ್, ‌ ರಾಯಭಾರಿ ಬಹದ್ದೂರ್ ಚೇತನ್ ಕುಮಾರ್.
೧೦) “ಅರಸು ಹಂಟರ್ಸ್”, ಮಾಲೀಕರು ಪಂಚಾಕ್ಷರಯ್ಯ ಹಿರೇಮಠ, ನಾಯಕ ಇಮ್ರಾನ್ ಸರ್ದಾರಿಯಾ, ಸ್ಟಾರ್ ರಾಯಭಾರಿ ಭುವನ್ ಗೌಡ .

Leave a Reply

Your email address will not be published. Required fields are marked *