Popular Posts

ದೇಶಾದ್ಯಂತ ಭರ್ಜರಿ ಓಪನಿಂಗ್ ಪಡೆದ ಜನ ನಾಯಗನ್ !

ತಮಿಳುನಾಡು ಸಿಎಂ ದಳಪತಿ ಜೋಸೆಫ್ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’‌ ಈ ಚಿತ್ರವು ದೇಶಾದ್ಯಂತ ಗುರುವಾರವೇ ತೆರೆಕಂಡಿದ್ದು,ಬೆಳಗಿನ ಪ್ರದರ್ಶನದಿಂದಲೇ ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬುಕ್ ಮೈ ಶೋನಲ್ಲಿ ಗಂಟೆಗೆ ೨೫ ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಐತಿಹಾಸಿಕ ದಾಖಲೆ ಬರೆಯುವ ಹಾದಿಯಲ್ಲಿದೆ.

ಬ್ರ‍್ಯಾಂಡ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ದಳಪತಿ ವಿಜಯ್ ಅವರ ಆ್ಯಕ್ಷನ್ ಹಾಗೂ ಮಾಸ್ ಜಾನರ್ ಚಿತ್ರ ಇದಾಗಿದ್ದು, ವಿಜಯ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಎಚ್. ವಿನೋದ್ ಅವರ ನಿರ್ದೇಶನ ಮತ್ತು ಅನಿರುದ್ಧ ರವಿಚಂದರ್ ಅವರ ಹಿನ್ನೆಲೆ ಸಂಗೀತ ಜನನಾಯಗನ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಕೇವಲ ತಮಿಳು ನಾಡಿನಲ್ಲಿ ಮಾತ್ರವಲ್ಲದೆ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಈ ಅದ್ಭುತ ಯಶಸ್ಸಿನ ಮೂಲಕ ನಿರ್ಮಾಪಕ ಕೆ.ವೆಂಕಟ್ ನಾರಾಯಣ್ ಅವರ ‘ಕೆವಿಎನ್ ಪ್ರೊಡಕ್ಷನ್ಸ್’ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆಯಿಟ್ಟಿದೆ. ‘ಬಾಲನ್ ದಿ ಬಾಯï’ ಹಿಟ್ ಚಿತ್ರದ ನಂತರ, ಈ ಸಂಸ್ಥೆಯು ‘ಜನನಾಯಗನ್’ ಮೂಲಕ ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.

ಪ್ರಸ್ತುತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಬತ್ತಳಿಕೆಯಲ್ಲಿ ವಿವಿಧ ಭಾಷೆಗಳ ಬಹುನಿರೀಕ್ಷಿತ ಸಿನಿಮಾಗಳಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್, ಮೆಗಾಸ್ಟಾರ್ ಚಿರಂಜೀವಿ ನಟನೆಯ ಮೆಗಾ ೧೫೮ ಸಿನಿಮಾ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಬೇಲ್ ಈ ಎಲ್ಲಾ ಚಿತ್ರಗಳು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಿಂದಲೇ ಹೊರಬರಲಿವೆ.

ಭಾರತದ ವಿವಿಧ ಚಿತ್ರರಂಗಗಳಲ್ಲಿ ಸಾಲು ಸಾಲು ಬೃಹತ್ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್, ಜನನಾಯಗನ್ ಚಿತ್ರದ ಯಶಸ್ಸಿನಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡಮಟ್ಟದ ಬಾಕ್ಸ್ ಆಫೀಸ್ ಗಳಿಕೆಯ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *