Popular Posts

Bande Saheb film pressmeet

ನೈಜಘಟನೆ ಆಧಾರಿತ ‘ಬಂಡೆ ಸಾಹೇಬ್’ ಮೇ 16ಕ್ಕೆ ತೆರೆಗೆ

ಕೆಲ ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾ ಎಂಬುವನನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಶೂಟೌಟ್‌ಗೆ ಬಲಿಯಾದ ದಕ್ಷ ಪೊಲೀಸ್ ಅಧಿಕಾರಿ(ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಅವರ ಸಾಹಸ ಜೀವನದ ಕಥೆಯನ್ನು ಆಧರಿಸಿ ಮಾಡಿದ ಚಿತ್ರ ಬಂಡೆ ಸಾಹೇಬ್. ಇದೇ ತಿಂಗಳ 16ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿನ್ಮಯ್‌ ರಾಮ್ ಅವರ ನಿರ್ದೇಶನದಲ್ಲಿ ಮೂಡಿಬರದಿರುವ ಈ ಚಿತ್ರವನ್ನು ಗೋಪಣ್ಣ ದೊಡ್ಡನಿ, ಕಮಲಾ ಜಿ. ದೊಡ್ಡನಿ ಹಾಗೂ ಮಾಲಾ ವಿ.ಕೊರಳ್ಳಿ ನಿರ್ಮಾಣ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಚಿನ್ಮಯ್‌ ರಾಮ್ ಇದು ನನ್ನ ನಿರ್ದೇಶನದ ೩ ನೇ ಚಿತ್ರ. ಯುವಕರಿಗೆ ಸ್ಪೂರ್ತಿದಾಯಕ ಕಥೆಯಿದು. ಗುಲ್ಬರ್ಗದ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಜೀವನದ ನೈಜಘಟನೆ ಆಧರಿಸಿ ಮಾಡಿದ ಚಿತ್ರ, ಚಿತ್ರವನ್ನು ಎರಡು ಭಾಗಗಳಲ್ಲಿ ಶೂಟ್ ಮಾಡಿದ್ದೇವೆ. ಇದು ಈ ಭಾಗದಲ್ಲಿ ನಡೆದ ಕಥೆ ಆಗಿರೋದ್ರಿಂದ ಕಲಬುರ್ಗಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಿದ್ದೇವೆ. 2 ದಿನ ಶಿವಮೊಗ್ಗದಲ್ಲಿ, 5 ದಿನ ಬೆಂಗಳೂರಲ್ಲಿ . ಒಟ್ಟು 35 ದಿನ ಚಿತ್ರದ ಶೂಟಿಂಗ್ ಮಾಡಿದ್ದೇವೆ. ಅವರ ವ್ಯಕ್ತಿತ್ವ ಹೇಗಿತ್ತು ಅಂತ ಹೇಳೋ ಪ್ರಯತ್ನ. ಮೇ 16ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದ್ದ, ಚಿತ್ರದ ಬಗ್ಗೆ ಮಾಹಿತಿಯನ್ನು ತಮ್ಮ ಘನ ಮಾಧ್ಯಮಗಳ ಮೂಲಕ ಪ್ರಕಟಿಸಿ ಸಹಕಾರ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.

ನಿರ್ಮಾಪಕ ಗೋಪಣ್ಣ ದೊಡ್ಡನಿ ಅವರ ಪುತ್ರಿ ಗೀತಾ ಮಾತನಾಡಿ, ನಾವೆಲ್ಲ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬದವರನ್ನು ತುಂಬಾ ಹತ್ತಿರದಿಂದ ನೋಡಿದ್ದೇವೆ. ಹುತಾತ್ಮ ಪಿ.ಎಸ್.ಐ. ಮಲ್ಲಿಕಾರ್ಜುನ ಬಂಡ ಅವರ ಕರ್ತವ್ಯ ನಿಷ್ಠೆಯನ್ನು ಎಲ್ಲರಿಗೂ ತಿಳಿಸುವ ಸಲುವಾಗಿ ನಮ್ಮ ತಂದೆ ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.

ಮಲ್ಲಿಕಾರ್ಜುನ ಬಂಡೆ ಅವರ ಪಾತ್ರ ಮಾಡಿರುವ ನಾಯಕ ಸಂತೋಷ್ ರಾಮ್ ಮಾತನಾಡುತ್ತ ನಾನು ಹಾಗೂ ವೀರಣ್ಣ ಕೊರಳ್ಳಿ ಗುಲ್ಬರ್ಗದಲ್ಲೇ ಎರಡು ತಿಂಗಳ ಕಾಲ ಇದ್ದು, ಮಲ್ಲಿಕಾರ್ಜುನ ಬಂಡೆ ಅವರ ಒಡನಾಡಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದೆವು, ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ನಾನು ಈ ಚಿತ್ರದಲ್ಲಿ, ಮಲ್ಲಿಕಾರ್ಜುನ ಬಂಡೆ ಅವರ ಪಾತ್ರವನ್ನು ನಿರ್ವಹಿಸಿದ್ದೇನೆ ಎಂದರು. ನಾಯಕಿ ಕಾವ್ಯ ಭಾರದ್ವಾಜ್ ಮಾತನಾಡಿ ಬಂಡೆ ಅವರ ಪತ್ನಿಯಾಗಿ ಅವರ ಕರ್ತವ್ಯಕ್ಕೆ ಹೆಗಲಾಗಿ ನಿಲ್ಲುವ, ಪತಿಗೆ ಮೋಟಿವೇಟ್ ಮಾಡುವ ಪಾತ್ರ ಮಾಡಿದ್ದೇನೆ ಎಂದರು. ಚಿತ್ರದ 4 ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ ನೀಡಿದ್ದಾರೆ. ಮುಂಜಾನೆ ಮಂಜು ಛಾಯಾಗ್ರಾಹಕರಾಗಿದ್ದು, ಹಿನ್ನೆಲೆ ಸಂಗೀತವನ್ನು ಅಲೆಕ್ಸಾ ನೀಡಿದ್ದಾರೆ. ಮಲ್ಲಿಗೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಗೋಪಣ್ಣ ದೊಡ್ಡನಿ, ಕಮಲ ದೊಡ್ಡನಿ ಹಾಗೂ ಮಾಲ ವಿ. ಕೊರಳ್ಳಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ವೀರಣ್ಣ ಕೊರಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

Leave a Reply

Your email address will not be published. Required fields are marked *