Popular Posts

‘ಎ ಡೇಟ್’ ಒಂದು ದಿನದಲ್ಲಿ ಏನಾಗುತ್ತೆ ಅನ್ನೋರಿಗೆ ಉತ್ತರ

ರೇಟಿಂಗ್: 3.5
ಚಿತ್ರ: ಎ ಡೇಟ್
ನಿರ್ದೇಶನ: ವಿಮಲ್ ರಾಜ್ ಎನ್.
ತಾರಾಗಣ: ಸುಜನೀತ್ ಶೆಟ್ಟಿ, ಅಶ್ವಿನಿ‌ ಶಣೈ
ಛಾಯಾಗ್ರಹಣ: ವಡ್ಡೆ ದೇವೇಂದ್ರ,
ಸಂಗೀತ: ಮೋಕ್ಷ ಬೀಟ್ಸ್

ಕನ್ನಡದಲ್ಲಿ ಈವಾರ ಕ್ಲಾಸಿಕ್ ಚಿತ್ರವೊಂದು ಬಿಡುಗಡೆಯಾಗಿದೆ. ‘A DATE’ 132 ನಿಮಿಷ ಅವಧಿಯ ಈ ಚಿತ್ರವನ್ನು ಎರಡು ಪಾತ್ರಗಳ ಮೂಲಕ ಕೊನೆಯವರೆಗೆ ನಿರ್ದೇಶಕ ವಿಮಲ್ ರಾಜ್ ನೋಡಿಸಿಕೊಂಡು ಹೋಗಿರುವ ಪರಿ ಕುತೂಹಲಕಾರಿಯಾಗಿದೆ.
8 ವಿವಿಧ ಚಾಪ್ಟರ್ ಗಳ ಮೂಲಕ ಗಂಡು, ಹೆಣ್ಣಿನ ಮನದ ತೊಳಲಾಟ, ನೋವು, ಸಂಕಟ, ಯಾತನೆ ಸೇರಿದಂತೆ ಹಲವು ವಿಷಯಗಳನ್ನು ನೈಜವಾಗಿ ಮತ್ತು ಕಣ್ಣಿಗೆ ಕಟ್ಟುವ ಹಾಗೆ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಚಿತ್ರದ ಕಥೆಗೆ ಪೂರಕವಾಗಿ ಬರುವ ಬಿಟ್, ಹಾಡುಗಳು, ಹಿನ್ನೆಲೆ ಸಂಗೀತ ಚಿತ್ರದ ಅಂದವನ್ನು ಹೆಚ್ಚಿಸಿದೆ.
ಒಂದು ದಿನದಲ್ಲಿ ಏನಾಗುತ್ತದೆ ಎಂದುಕೊಂಡವರಿಗೆ, ನಿರ್ದೇಶಕರು ಈ ಚಿತ್ರದ ಮೂಲಕ ಉತ್ತರ ಕೊಟ್ಟಿದ್ದಾರೆ.
ಬೆ. 6 ಗಂಟೆಯಿಂದ‌ ಆರಂಭವಾದ ಡೇಟ್ ನಲ್ಲಿ ರಾತ್ರಿ 9 ಗಂಟೆಯವರೆಗೆ ಏನೇನೆಲ್ಲಾ ನಡೆದುಹೋಗಲಿದೆ ಎಂಬುದನ್ನು ಮೋನಿಶಾ ಮತ್ತು ಕಾರ್ತಿಕ್ ‌ಮೂಲಕ ತೋರಿಸಿದ್ದಾರೆ.‌ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲುಕ ಕಾರಣಗಳಿಗಾಗಿ ಗಂಡು, ಹೆಣ್ಣಿನ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತಿದೆ ಎಂಬುದನ್ನು ಈ ಚಿತ್ರ ಹೇಳಲಿದೆ.
ದೆಹಲಿಯ ಆಪೀಸ್ ನಲ್ಲಿ ಉಂಟಾದ ಸಮಸ್ಯೆ ಬಗೆಹರಿಸಲು‌ ಬೆಂಗಳೂರಿನ ಕಚೇರಿಗೆ ಬರುವ ದೆಹಲಿ ಯುವತಿ ‌ಮೋನಿಶಾ ( ಅಶ್ವಿನಿ ಶಣೈ ). ಇದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ( ಸುಜನೀತ್ ಶೆಟ್ಟಿ ) ಇಬ್ಬರ ಭೇಟಿ, ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಆಕರ್ಷಣೆ ಮತ್ತು ಸೆಳೆತ.

ಮೊನಿಶಾ ಈ ಮೊದಲೇ ಅರ್ಜುನ್ ಎಮಬ ಯುವಕನ್ನು ಪ್ರೀತಿಸಿ ಆತನಿಂದ ಮೋಸ ಹೋಗಿರುತ್ತಾಳೆ‌. ಆದರೆ ತನ್ನ ಪ್ರೇಮಿಯನ್ನು ಅತಿಯಾಗಿ ನಂಬಿದ್ದ ಮೊನಿಷಾ, ಅದರ ನೋವು, ಸಂಕಟದಿಂದ‌ ಹೊರಲಾಗದೆ, ಕುಡಿತದ ಚಟಕ್ಕೆ ಬಿದ್ದಿರುತ್ತಾಳೆ.‌ ಈ‌ ನಡುವೆ ಕಾರ್ತೀಕ್ ಮೊನಿಶಾಳನ್ನು ಡೇಟ್ ಗೆ ಕರೆದುಕೊಂಡ ಬರುತ್ತಾನೆ, ಅವರಿಬ್ಬರ ನಡುವ ಬೆಳಗ್ಗೆಯಿಂದ ರಾತ್ರಿಯವರೆಗೆ ಬೆಂಗಳೂರಿನ ಹಲವು ಸ್ಥಳಗಳಲ್ಲಿ ನಡೆಯು‌ವ ಘಟನೆಗಳೇನು, ಆವೇಳೆ ಕಾರ್ತೀಕ್ ಮೊನಿಶಾ ನಡುವೆ ಪ್ರೀತಿ ಅರಳಿತಾ, ಮೊನಿಶಾ ತನ್ನ ಹಳೇ ಬಾಯ್ ಫ್ರೆಂಡ್ ಮರೆತು ಕಾರ್ತೀಕ್ ಕಡೆಗೆ ಆಕರ್ಶಿತಳಾದಳೇ, ಅಷ್ಟಕ್ಕೂ ಮೊನಿಶಾ ಅರ್ಜುನ್ ಪ್ರೀತಿಗೆ ಅಡ್ಡಿಯಾದ ಅಂಶವೇನು, ಇದನ್ನೆಲ್ಲ ನಿರ್ದೇಶಕರು ತುಂಬಾ ಕುತೂಹಲಕರವಾಗಿ ತೆಗೆದುಕೊಂಡು ಹೋಗಿದ್ದು, ಚಿತ್ರಕ್ಕೆ ಅದ್ಭುತವಾದ ಕ್ಲೈಮ್ಯಾಕ್ಸ್ ನೀಡಿದ್ದಾರೆ.
ಒಂದು ದಿನದ ಈ ಸುಂದರ ಜರ್ನಿಯನ್ನು ತೆರಡಮೇಲೆ ನೋಡಿದರೇನೇ ಚೆನ್ನಾಗಿರುತ್ತೆ.
ಎರಡು ಪಾತ್ರಗಳ ಜೊತೆಗೆ ಬೆಂಗಳೂರನ್ನು ಮತ್ತಷ್ಟು ಸುಂದರವಾಗಿ‌ ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಸ್ಥಳಗಳೂ ಇಬ್ಬರ ಜೊತೆಗೆ ಪಾತ್ರವಾಗಿ ಸಂಚರಿಸಿದ್ದು, ಅವುಗಳನ್ನು ಸುಂದರವಾಗಿ ಕ್ಯಾಮರಾ ಕಣ್ಣಲ್ಲಿ ಹಿಡಿದಿಟ್ಟಿದ್ದಾರೆ ಛಾಯಾಗ್ರಾಹಕ ವಡ್ಡೆ ದೇವೇಂದ್ರ.
ಮೊದಲಾರ್ಧ ನಿಧಾನಗತಿಯಲ್ಲಿ ಸಾಗುವ ಈ ಚಿತ್ರ ದ್ವಿತೀಯಾರ್ಧದಲ್ಲಿ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಹೊಡಿ, ಬಡಿ ಚಿತ್ರಗಳ ನಡುವೆ ಕುತೂಹಲಕಾರಿ ವಿಭಿನ್ನವಾದ ಚಿತ್ರವಾಗಿ “ಎ ಡೇಟ್” ನಿಲ್ಲಲಿದೆ.
ನಾಯಕ‌ ಸುಜಿನೀತ್ ಶೆಟ್ಟಿ ಮೊದಲರ್ದದಲ್ಲಿ ಮುಗ್ಧ ನಟನೆಯ ಮೂಲಕ ಮೋಡಿ ಮಾಡಿದರೆ, ದ್ವಿತೀಯಾರ್ಧದಲ್ಲಿ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.
ನಾಯಕಿ ಅಶ್ವಿನಿ ಶೆಣೈ ಮೊನಿಶಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಚಿತ್ರರಂಗದಲ್ಲಿ ತಾವೊಬ್ಬ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ.‌ ಈಗಿನ ಕಾಲದ ಯುವಕ, ಯುವತಿಯರಿಗೆ ಉತ್ತಮ ಸಂದೇಶ ಈ ಚಿತ್ರದಲ್ಲಿದೆ.

Leave a Reply

Your email address will not be published. Required fields are marked *