Popular Posts

ಸಂಕ್ರಾಂತಿಗೆ “ಮಹಾನ್” ಕೊಡುಗೆ ವಿಜಯ ರಾಘವೇಂದ್ರ ಫಸ್ಟ್ ಲುಕ್

ರೋಮಿಯೋ, ರಾಗ, ಸ್ಟೈಲ್ ಕಿಂಗ್ ಖ್ಯಾತಿಯ ಪಿ.ಸಿ. ಶೇಖರ್ ಅವರ ನಿರ್ದೇಶನದ ನೂತನ ಚಿತ್ರ ಮಹಾನ್, ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಒಬ್ಬ ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿಗೂ ರೈತರಿಗೂ ಅವಿನಾಭಾವ ಸಂಬಂಧ. ಈ ಹಬ್ಬವನ್ನು ಕೃಷಿಕರು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ. ಅಂತಹ ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ “ಮಹಾನ್”.

ಆಕಾಶ್ ಪಿಕ್ಚರ್ಸ್ ಮೂಲಕ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ನಟ ವಿಜಯ ರಾಘವೇಂದ್ರ ನಟಿಸುತ್ತಿದ್ದಾರೆ. ರೈತರ ಕುರಿತಾದ ಕಥೆ ಇರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ರೈತನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ಅನ್ನು ” ಮಹಾನ್ ” ಚಿತ್ರತಂಡ ಬಿಡುಗಡೆ ಮಾಡಿದೆ.

ನನ್ನ ವೃತ್ತಿ ಜೀವನದಲ್ಲೇ “ಮಹಾನ್” ಒಂದು ಮಹಾನ್ ಚಿತ್ರವಾಗಲಿದೆ ಎಂದಿರುವ ನಿರ್ದೇಶಕ ಪಿ.ಸಿ.ಶೇಖರ್, ನಮ್ಮ ಚಿತ್ರದಲ್ಲಿ “ಮಹಾನ್” ಎಂದರೆ ರೈತ. ಇದು ರೈತರ ಬದುಕಿನ ಬವಣೆಗಳನ್ನು ತಿಳಿಸುವ ಚಿತ್ರ. ನಮಗ ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೊ, ಅದೇ ರೀತಿ ಅನ್ನ ಕೊಡುವ ರೈತರು ಕೂಡ ಬಹುಮುಖ್ಯ. ಇಂತಹ ರೈತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ರೈತರ ಪರ ಧ್ವನಿ ಎತ್ತುವ ರೈತನ ಪಾತ್ರದಲ್ಲಿ ನಟ ವಿಜಯ ರಾಘವೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿ ರೈತರ ಹಬ್ಬ. ಹಾಗಾಗಿ ಈ ಸಂದರ್ಭದಲ್ಲೇ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದೇವೆ. ನಾನು ಈ ಕಥೆ ಬರೆಯಬೇಕಾದರೆ, ವಿಜಯ ರಾಘವೇಂದ್ರ ಅವರೇ ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಅಂದುಕೊಂಡು ಬರೆದೆ. ನಂತರ ಅವರಿಗೆ ಈ ಕಥೆ ಹೇಳಿದಾಗ ಸಂತೋಷದಿಂದ ನಟಿಸಲು ಒಪ್ಪಿಕೊಂಡರು. ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರ ನೋಡಿ ಹೊರಬಂದ ಮೇಲೂ, ಎಲ್ಲರ ಮನದಲ್ಲೂ ಉಳಿಯುವಂಥ ಪಾತ್ರವದು. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ಪ್ರಕಾಶ್ ಬುದ್ದೂರು ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *