Popular Posts

ಕನ್ನಡಿಗರ ‘ಟಾಕೀಸ್’ ಆ್ಯಪ್ ನಲ್ಲಿ ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳು

ಡಿಜಿಟಲ್‌ ಮನೋರಂಜನೆಯಲ್ಲಿ ಟಾಕೀಸ್ ಆ್ಯಪ್ ಓಟಿಟಿ ಹೊಸ ಅಧ್ಯಾಯ ಬರೆದಿದೆ. ಇದೇ ಮೊದಲಬಾರಿಗೆ ಹಾಲಿವುಡ್‌ ಸಿನಿಮಾಗಳನ್ನು ತುಳು ಹಾಗೂ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೂ ಪ್ರಸಾರ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಈ ಕಾರ್ಯವನ್ನು ಟಾಕೀಸ್ ಆ್ಯಪ್ – ಸೋನಿ ಪಿಕ್ಚರ್ಸ್ ಫಿಲಂಸ್ ಸಹಯೋಗದಲ್ಲಿ ಮುನ್ನಡೆಸುತ್ತಿದೆ. ತಮ್ಮ ಮಾತೃ ಭಾಷೆಯಲ್ಲಿ ಹಾಲಿವುಡ್ ಸಿನಿಮಾಗಳನ್ನು ನೋಡಬೇಕೆನ್ನುವವರಿಗೆ ಇದು ಸಿಹಿ‌ ಸುದ್ದಿ .
ಭಾರತದಲ್ಲಿ ಆಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಜೀಯೋ ಹಾಟ್ ಸ್ಟಾರ್ ನಂತರ ನಾಲ್ಕನೇ ಒಟಿಟಿಯಾಗಿ, ಹಾಲಿವುಡ್‌ ಚಿತ್ರಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರದರ್ಶಿಸುವಲ್ಲಿ ಟಾಕೀಸ್ ಆ್ಯಪ್ ಹೆಸರಾಗಿದೆ. ಪ್ರಥಮ ಬಾರಿಗೆ ತುಳು ಮತ್ತು ಜವಾರಿ ಭಾಷೆಗಳಲ್ಲಿ ಪ್ರಸಾರ ಮಾಡುತ್ತಿದೆ.

ಇವರ ಈ ಪ್ರಯತ್ನಕ್ಕೆ ತುಳುನಲ್ಲಿ ಅಸ್ತ್ರ ಪ್ರೋಡಕ್ಷನ್ ಹಾಗೂ ಸಿಟಡೆಲ್ ಡೆವಲಪರ್ಸ್ ಜೊತೆಯಾದರೆ, ಜವಾರಿ ಭಾಷೆಗೆ ಮಂಗಳಂ ಪೈಪ್ಸ್ ಜೊತೆಯಾಗಿದ್ದಾರೆ. ಸ್ಪೈಡರ್ ಮ್ಯಾನ್, ಗಾಡ್ಜಿಲ್ಲ, ಕರಾಟೆ ಕಿಡ್, ಅನಕೊಂಡ, ಮೆನ್ ಇನ್ ಬ್ಲಾಕ್ ಸೇರಿದಂತೆ ಹಲವು ಸಿನಿಮಾಗಳು ದೇಸಿ ಭಾಷೆಯಲ್ಲಿ ಲಭ್ಯವಾಗಲಿದೆ.

ಡಾ. ಶಿವರಾಜ್ ಕುಮಾರ್ ಅವರಿಂದ ಲೋಕಾರ್ಪಣೆಗೊಂಡ ಟಾಕೀಸ್ ಆ್ಯಪ್ ಕರಾವಳಿಯ, ಕನ್ನಡದ ಮತ್ತು ಇತರೆ ಪ್ರಾದೇಶಿಕ ಕಲಾವಿದರಿಗೊಂದು ಡಿಜಿಟಲ್ ವೇದಿಕೆಯಾಗಿ ಅವಕಾಶ ಕಲ್ಪಿಸಿದೆ. ಸಿನಿಮಾಗಳು, ವೆಬ್‌ ಸೀರಿಸ್‌, ಕಿರುಚಿತ್ರಗಳು, ಕಾರ್ಟೂನ್ ಶೋಗಳು, ಕಾಮಿಡಿ, ಡ್ರಾಮಾ ರಿಯಾಲಿಟಿ ಶೋಗಳು ಮತ್ತು ಟಾಕೀಸ್ ಕಿಚನ್ ನಂಥ ವಿಭಿನ್ನ ಕಾರ್ಯಕ್ರಮಗಳ ಜತೆಗೆ ಈಗ ವಿಶ್ವ ಸಿನಿಮಾವನ್ನು ‘ಸ್ವಂತ ಭಾಷೆಯಲ್ಲಿ’ ನೋಡಬಹುದಾದ ವೇದಿಕೆ ಒದಗಿಸಿದೆ ಟಾಕೀಸ್ ಆ್ಯಪ್.

ಪ್ರಾದೇಶಿಕ ಭಾಷೆಗಳನ್ನು ಜಾಗತಿಕ ತಾಣಕ್ಕೆ ತಲುಪಿಸುವಲ್ಲಿ ಇದು ಕೇವಲ ತಂತ್ರಜ್ಞಾನ ಪ್ರಗತಿ ಅಲ್ಲ, ಸಂಸ್ಕೃತಿ ಸಂರಕ್ಷಣೆಯ ಮೌಲ್ಯಯುತ ಹೆಜ್ಜೆ. “ಭಾಷೆ ಬದುಕಿದಾಗ ಸಂಸ್ಕೃತಿ ಬಾಳುತ್ತದೆ” ಎಂಬ ನಂಬಿಕೆಗೆ ಟಾಕೀಸ್ ಆ್ಯಪ್ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *