1
1
ಚಿತ್ರ: ಶ್ರೀಕೃಷ್ಣ
ನಿರ್ಮಾಣ: ಬೃಹಸ್ಪತಿ ಕ್ರಿಯೇಷನ್ಸ್
ನಿರ್ದೇಶನ: ಶಂಕರ್‌ರಾಜ ವರ್ಮಾ
ಸಂಗೀತ: ಎಂ.ಎಸ್. ತ್ಯಾಗರಾಜ್
ಛಾಯಾಗ್ರಹಣ: ಅನಿರುದ್ದ
ತಾರಾಗಣ: ಶಂಕರ್‌ರಾಜ ವರ್ಮಾ, ಚೈತ್ರಾ ತೋಟದ, ಸ್ನೇಹಾ, ಪ್ರದೀಪ್ ಪೂಜಾರಿ, ಭುವನ್ ಗೌಡ, ಈಶ್ವರ್ ಶೆಟ್ಟಿ ಹಾಗೂ ಇತರರು.

ಇನ್ನು ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದ ಶಂಕರ್, ಆತನ ಗೆಳೆಯರ ಜೀವನದಲ್ಲಿ ಕಹಿ ಘಟನೆಯೊಂದು ನಡೆಯುತ್ತದೆ. ಅದರಿಂದ ಅವರು ಕೊಲೆ ಆರೋಪ ಹೊತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಗುತ್ತದೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದ ಅವರು ಹೇಗೆ ತಪ್ಪು ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುತ್ತಾರೆ ಎಂಬುದನ್ನು ನಿರ್ದೇಶಕರು ಕಾಡುವ ಕಥೆಯ ಮೂಲಕ ಹೇಳಿದ್ದಾರೆ. ಸಮಾಜದಲ್ಲಿ ಅನಾಥರಿಗೆ ಎದುರಾಗುವ ಕಷ್ಟಗಳು, ಅವರನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತೆ ಎಂಬುದನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕ ಶಂಕರ್ ರಾಜ ವರ್ಮ ಅವರು ಯಾವುದೇ ಗೊಂದಲಗಳಿಲ್ಲದೆ ಸರಳವಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ. ಕ್ಲೈಮ್ಯಾಕ್ಸ್ ಪರಿಣಾಮಕಾರಿಯಾಗಿದೆ. ಅಂದಹಾಗೆ, ಇದು ಹೊಸಬರ ಸಿನಿಮಾ. ನಿರ್ದೇಶಕ ಶಂಕರ್‌ರಾಜ ವರ್ಮಾ ಅವರ ಎರಡನೇ ಚಿತ್ರ. ಏನು ಹೇಳಬೇಕೋ, ಅದನ್ನು ಯಾವುದೇ ಗೊಂದಲವಿಲ್ಲದಂತೆ ಹೇಳುವ ಮೂಲಕ ಭರವಸೆ ಮೂಡಿಸಿದ್ದಾರೆ. ನಿರ್ದೇಶನದ ಜೊತೆ ಅವರು ನಾಯಕರಾಗಿಯೂ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಸರಸ್ವತಿ ಪಾತ್ರಕ್ಕೆ ಚೈತ್ರ ತೋಟದ ಜೀವ ತುಂಬಿದ್ದಾರೆ. ಕಷ್ಟವಾದರೂ ಸತ್ಯ ಹೇಳುವ ವಿದ್ಯಾರ್ಥಿನಿ ವನಜಾಳ ಪಾತ್ರ ನೋಡುಗರನ್ನು ಕಾಡುತ್ತದೆ. ಉಳಿದಂತೆ ಪ್ರದೀಪ್ ಪೂಜಾರಿ, ಭುವನ್ ಗೌಡ, ಈಶ್ವರ್‌ಶೆಟ್ಟಿ ಕಥೆಗೆ ತಕ್ಕಂತೆ ನಟಿಸಿದ್ದಾರೆ.
ಬೃಹಸ್ಪತಿ ಕ್ರಿಯೇಷನ್ಸ್ ಮೂಲಕ ಶಂಕರ್ ರಾಜ ವರ್ಮ ಮತ್ತು ಅಜಯ್ ಕುಮಾರ್ ಪಿ.ಎಂ. ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಎಂ.ಎಸ್. ತ್ಯಾಗರಾಜ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಅನಿರುದ್ಧ್ ಅವರ ಕ್ಯಾಮೆರಾ ವರ್ಕ್ ಚೆನ್ನಾಗಿದೆ. ಒಮ್ಮೆ ಕುಟುಂಬಸಮೇತ ಹೋಗಿ ನೋಡಬಹುದು.