Popular Posts

ಸಿಹಿಕಹಿ ಚಂದ್ರು ನಿರ್ದೇಶನದ ‘ಸಂಭ್ರಮದ ರುಚಿ ಒಂದೇ’ ಹಾಡು

ಸಿನಿತಾರೆಯರ ಸಂಗಮಕ್ಕೆ ಸಾಕ್ಷಿಯಾದ ಇಂಡಿಯಾ ಸ್ವೀಟ್ಸ್

ಸಿಹಿಕಹಿ ಚಂದ್ರು ಅವರ ನಿರ್ದೇಶನ ಮತ್ತು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿರುವ ‘ಸಂಭ್ರಮದ ರುಚಿ ಒಂದೇ’ ಎಂಬ ಅಲ್ಬಮ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಭಾರತದ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಸಿಹಿಯ ಮ‌ೂಲಕ ಬೆಸೆಯುವ ವಿಶಿಷ್ಟ ಪ್ರಯತ್ನವಾಗಿ ಈ ಹಾಡು ಮೂಡಿ ಬಂದಿದೆ. ವೈವಿದ್ಯಮಯ ಹಬ್ಬಗಳ ಸಂಭ್ರಮ ಮತ್ತು ಸಿಹಿ ಹಂಚಿಕೊಳ್ಳುವ ಸಂತೋಷವನ್ನು ಈ ಹಾಡಿನಲ್ಲಿ ಬಹು ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಹಿಕಹಿ ಚಂದ್ರು ಮಾತನಾಡಿ, ‘ಎಲ್ಲಾ ಭಾರತೀಯರ ಸಂಸ್ಕೃತಿ ಬೇರೆ ಬೇರೆ ಆಗಿದ್ದರೂ ಎಲ್ಲದಕ್ಕೂ ಸಿಹಿ ಒಂದೆ. ವಿವಿಧತೆಯಲ್ಲಿ ಏಕತೆ ತುಂಬುವ ಹಾಡು ಇದಾಗಿದೆ. ಇದಕ್ಕೆ ಪ್ರವೀಣ್ ಡಿ. ರಾವ್ ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಕವಿರಾಜ್ ಸುಂದರವಾದ ಸಾಹಿತ್ಯ ಬರೆದಿದ್ದಾರೆ. ಶ್ವೇತಾ ರಾಜಶೇಖರ್, ವಿಶ್ವನಾಥ ಮೂರ್ತಿ ಹಾಗೂ ನಾನು ಈ ಹಾಡನ್ನು ಮಾಡಿದ್ದೇವೆ. ಈ ಹಾಡು ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಗೀತೆಗೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ಧನು ಕುಮಾರ್ ಅವರ ನೃತ್ಯನಿರ್ದೇಶನ, ಸುರೇಶ್ ಅರಸ್ ಅವರ ಸಂಕಲನವಿದೆ. ಹಿರಿಯ ನಟ ಶ್ರೀನಾಥ್, ಸುಧಾರಾಣಿ, ಮುಖ್ಯಮಂತ್ರಿ ಚಂದ್ರು, ರವಿಶಂಕರ್ ಮತ್ತು ಪರಿಸರವಾದಿ ವಿದುಷಿ ರೇವತಿ ಕಾಮತ್ ಸೇರಿದಂತೆ ಹಲವು ಗಣ್ಯರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇದನ್ನು ನಾವೆಲ್ಲಾ ಒಂದು ತಂಡವಾಗಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಇಂಡಿಯಾ ಸ್ವೀಟ್ ಹೌಸ್ ನ ಮುಖ್ಯಸ್ಥ ವಿಶ್ವನಾಥ್ ಮೂರ್ತಿ, ‘ಇಂತಹ ಪ್ರಯತ್ನವನ್ನು ನಾವು ಮಾಡಿರಲಿಲ್ಲ. ಶೂಟಿಂಗ್ ಸಂದರ್ಭದಲ್ಲಿ ಮೂರು ದಿನ ಸಿಹಿಕಹಿ ಚಂದ್ರು ಅವರ ಜೊತೆ ಇದ್ದದ್ದೆ ಖುಷಿಯಾಗಿದೆ’ ಎಂದರು. ನಂತರ ಭರತನಾಟ್ಯ ಕಲಾವಿದೆ ಹಾಗೂ ಇಂಡಿಯಾ ಸ್ವೀಟ್ ಹೌಸ್ ನ ಪಾಲುದಾರರಾದ ಶ್ವೇತಾ ರಾಜಶೇಖರ್ ಮಾತನಾಡಿ, ‘ನಾವು ಯಾವಾಗಲೂ ಜನರ ಮನಸಲ್ಲಿ ಇರಬೇಕು ಎಂಬ ಯೋಚನೆ ಬಂದಾಗ ಒಂದು ಹಾಡಿನ ಮೂಲಕ ಪ್ರಯತ್ನಿಸಿದರೆ ಹೇಗೆ ಎಂಬ ಯೋಚನೆ ಬಂತು. ನಂತರ ಎಲ್ಲರಿಗೂ ಕನೆಕ್ಟ್ ಆಗುವ ರೀತಿಯಲ್ಲಿ ಹಲವು ಭಾಷೆ, ಸಂಸ್ಕೃತಿ, ಸಂಪ್ರದಾಯ ಇಟ್ಟುಕೊಂಡು ಈ ಸಾಂಗ್ ಮಾಡಿದ್ದೇವೆ. ನಾವಿದನ್ನು ಪ್ರಚಾರಕ್ಕಾಗಿ ಮಾಡಿಲ್ಲ. ಪ್ರತಿ ಹಬ್ಬದಲ್ಲೂ ಸಂಭ್ರಮಿಸಲು ಮಾಡಿದ್ದೇವೆ’ ಎಂದು ಹೇಳಿದರು.
ನಟಿ ಸುಧಾರಾಣಿ ಮಾತನಾಡಿ, ‘ಇದು ಶ್ವೇತಾ ಅವರ ಆಲೋಚನೆ, ಇದರಲ್ಲಿ ನಾನೂ ಒಂದು ಭಾಗವಾಗಿದ್ದು ಖುಷಿಯಾಗಿದೆ’ ಎಂದರು. ವೇದಿಕೆಯಲ್ಲಿ ಸಾಹಿತಿ ಕವಿರಾಜ್, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್, ಛಾಯಾಗ್ರಹಕ ಅದ್ವೈತ್ ಗುರುಮೂರ್ತಿ ಹಾಗೂ ಇಂಡಿಯಾ ಸ್ವೀಟ್ ಹೌಸ್ ನ ರಾಜೇಶ್ ಮೆಹ್ತಾ ತಮ್ಮ ಅನುಭವ ಹಂಚಿಕೊಂಡರು. ಈ ಗೀತೆಯನ್ನು ನಕುಲ್ ಅಭಯಂಕರ್, ಅಂಕಿತಾ ಕುಂಡು, ವಾರಿಜಾಶ್ರೀ, ಫಯಾಜ್ ಖಾನ್ ಮತ್ತು ದೀಪ್ತಿ ಭಟ್ ಹಾಡಿದ್ದಾರೆ.

Leave a Reply

Your email address will not be published. Required fields are marked *