Popular Posts

175ನೇ ಚಿತ್ರದಲ್ಲಿ “ಮದರ್” ಆದ ಶೃತಿ

ಹಿರಿಯನಟಿ ಶೃತಿ ಅಭಿನಯದ 175ನೇ ಚಿತ್ರ ಮದರ್. ರಾಕೇಶ್ ಅವರ ನಿರ್ದೇಶನದ ಈ ಚಿತ್ರಕ್ಕೆ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಾಲನೆ ದೊರೆತಿದೆ, ಮಹೂರ್ತ ದೃಶ್ಯಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕ್ಲಾಪ್ ಮಾಡಿದರೆ, ನಟ ವಿನೋದ್ ಪ್ರಭಾಕರ್ ಶುಭ ಹಾರೈಸಿದರು. ರಾಕೇಶ್ ಸೋಮಣ್ಣ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಂಡ್ಯದ ಅನಕ್ಷರಸ್ಥ ಮಹಿಳೆಯೊಬ್ಬಳು ತನ್ನ ಸಂಸಾರವನ್ನು ಕಾಪಾಡುವುದಕ್ಕಾಗಿ ನಡೆಸುವ ಹೋರಾಟದ ಕಥನವೇ ಮದರ್, ಶೃತಿ ಅವರು ರಗಡ್ ಲುಕ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋ ಈ ಚಿತ್ರಕ್ಕೆ ಮಂಡ್ಯ ಸುತ್ತಮುತ 35 ದಿನಗಳವರೆಗೆ ಚಿತ್ರೀಕರಣ ನಡೆಸಲಾಗುವುದು. ಈ ವೇಳೆ ಮಾತನಾಡಿದ ವಿನೋದ್ ಪ್ರಭಾಕರ್, ಶೃತಿ ಅಮ್ಮನನ್ನು ನಾನು ಅಮ್ಮ ಅಂತಾನೇ ಕರಿತೀನಿ. ಮಾದೇವ ಸೈಲೆಂಟ್ ಆದಾಗೆಲ್ಲ ಶೃತಿ ಅಮ್ಮ ವೈಲೆಂಟ್ ಆಗ್ತಾ ಇದ್ದರು. ಅವರು ಸೈಲೆಂಟ್ ಆದಾಗ ನಾನು ವೈಲೆಂಟ್ ಆಗ್ತಿದೆ. ಆ ಕಾಂಬಿನೇಷನ್ ಸಖತ್ ವರ್ಕ್ ಆಗಿತ್ತು. ನಾನು ಇಲ್ಲಿಗೆ ಬರೋದಕ್ಕೆ ಕಾರಣ ಇದು ಶೃತಿ ಅಮ್ಮನವರ 175ನೇ ಸಿನಿಮಾ. ಆಗಿರೋದು. 175 ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಲ್ಲ. ಇವರಿಗೆ ರಿಪ್ಲೇಸ್ಮೆಂಟ್ ಇಲ್ವೇ ಇಲ್ಲ ಎಂದು ಹೇಳಿದರು.

ತನ್ನ ಪಾತ್ರದ ಕುರಿತು ಮಾತನಾಡಿದ ಶೃತಿ, ಬೇರೆಲ್ಲ ಸಿನಿಮಾಗಳಿಗಿಂತ ಈ ಚಿತ್ರ ನನಗೆ ವಿಶೇಷ. ನಾನು ಇಷ್ಟು ವರ್ಷ ನಾನು ಇಂಡಸ್ಟ್ರಿಯಲ್ಲಿ ಉಳಿದಿದ್ದೀನಿ ಅಂದ್ರೆ ದ್ವಾರಕೀಶ್ ಅಣ್ಣ ಮಾಡಿದ ಆ ಶೃತಿ ಚಿತ್ರವೇ ಕಾರಣ. ಮದರ್ ಟೀಂ ಕಥೆ ಕೇಳುವಾಗ ಇಂಟರೆಸ್ಟಿಂಗ್ ಅನ್ನಿಸ್ತು. ಏನಾದರೂ ಹೊಸತನ ಮಾಡಬೇಕು ಎಂಬ ತುಡಿತ ಅವರಲ್ಲಿತ್ತು. ನಿಮ್ಮ 175ನೇ ಸಿನಿಮಾಗೆ ಚ್ಯುತಿ ಬರದಂತೆ ಮಾಡ್ತೀನಿ ಅಂದರು. ನನಗೆ ಇಷ್ಟುವರ್ಷ ಇಂಡಸ್ಟ್ರಿಯಲ್ಲಿ ಕೆಲಸ ಸಿಗ್ತಾ ಇದೆ ಅಂದ್ರೆ ಅದಕ್ಕೆ ಕಾರಣ ನಿರ್ಮಾಪಕರು.

ಇಷ್ಟು ವರ್ಷದಲ್ಲಿ ನಾನು ಯಾವ ಸಿನಿಮಾಗೂ ವರ್ಕ್ ಷಾಪ್ ಮಾಡಿರಲಿಲ್ಲ. ಆದರೆ ಈ ಸಿನಿಮಾಗೆ ವರ್ಕ ಷಾಪ್ ಮಾಡುವಂತೆ ಕೇಳಿಕೊಂಡೆ ಎಂದರು. ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿರಂಜೀವಿ ಮಾತನಾಡಿ, ಈ ಚಿತ್ರದಲ್ಲಿ ನಾನು ಶೃತಿ ಅವರ ಮಗನಾಗಿ ನಟಿಸುತ್ತಿದ್ದೇನೆ. ಒಂಥರಾ ರಫ್ ಅಂಡ್ ರಗಡ್ ಕ್ಯಾರೆಕ್ಟರ್. ನಮ್ಮ ಅನ್ನದಾತ ನಿರ್ಮಾಪಕರು ಎಲ್ಲದಕ್ಕೂ ಸಪೋರ್ಟ್ ಮಾಡುತ್ತಿದ್ದಾರೆ ಎಂದರು. ನಿರ್ಮಾಪಕ ಕೆ.ಸತೀಶ್‌ಚಂದ್ರ ಮಾತನಾಡುತ್ತಾ, ಮೈಸೂರಲ್ಲಿ
ಪ್ರೊಡಕ್ಷನ್ ನಂಬರ್ ಒನ್ ಅಂತ ಮೊದಲ ಸಿನಿಮಾ ಶುರು ಮಾಡಿದ್ದೇವೆ. ಇಲ್ಲಿ ಮದರ್ ಅನ್ನೋ ಎರಡನೇ ಚಿತ್ರವನ್ನು ಲಾಂಚ್ ಮಾಡಿದ್ದೇವೆ ಎಂದರು.

ಶಾಂತ್ವು ಬ್ಯಾನರ್ ಅಡಿ ಆರತಿ ಹಾಗೂ ಸತೀಶ್‌ಚಂದ್ರ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಟಿ ಶೃತಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉಳಿದಂತೆ ಚಿರಂಜೀವಿ, ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ, ಹಿಮಶ್ರೀ ಸೇರಿದಂತೆ ಹಲವರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಅಂಜನ್ ಅವರ ಮ್ಯೂಸಿಕ್, ಯು.ಅಶ್ವಿನ್ ಅವರ ಛಾಯಾಗ್ರಹಣ, ವಸಂತ್ ಅವರ ಸಂಕಲನ, ನಾಗಾರ್ಜುನ ಶರ್ಮಾ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *