Popular Posts

ಹಿರಿಯನಟಿ ಶೃತಿ ಕೃಷ್ಣ ‘ಫಸ್ಟ್ ಸ್ಯಾಲರಿ’ 3500 ರೂ…!

ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ಅವರ ನಿರ್ಮಾಣದ ಕಿರುಚಿತ್ರ ಫಸ್ಟ್ ಸ್ಯಾಲರಿ. ಈ ಕಿರುಚಿತ್ರದ ಪ್ರಥಮ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆಯಿತು, ಈ ಚಿತ್ರಕ್ಕೆ ವೆಂಕಟೇಶ್ ಅವರ ಪುತ್ರ ಪವನ್ ವೆಂಕಟೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟಿ ಶ್ರುತಿ ಕೃಷ್ಣ ಹಾಗೂ ಕಮಲಾಕರ್ ಗುರೂಜಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ರಾಕ್‌ಲೈನ್ ವೆಂಕಟೇಶ್ ಮಾತನಾಡುತ್ತ ಡಿವಿ. ಸುಧೀಂದ್ರ ನನಗೆ ಬಹಳ ಆತ್ಮೀಯರು. ಈಗ ಅವರ ಮೊಮ್ಮಗ ಪವನ್ ವೆಂಕಟೇಶ್ , ಕಿರುಚಿತ್ರ ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಡೈರೆಕ್ಟರ್ ಆಗಿ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರಕ್ಜೆ ಆಯ್ಕೆ ಮಾಡಿಕೊಂಡಿರುವ ಕಥೆ ಮನ ಮುಟ್ಟುವಂತಿದೆ, ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ, ಮುದಿನ ದಿನಗಳಲ್ಲಿ ಆತನಿಗೆ ಒಳ್ಳೆಯ ಭವಿಷ್ಯವಿದೆ ಎಂದರು.

ನಟಿ ಶ್ರುತಿ ಕೃಷ್ಣ ಮಾತನಾಡುತ್ತ ಈ ಚಿತ್ರ ನೋಡುತ್ತಿರುವಾಗಲೇ ನನ್ನ ಮೊದಲ ಸಂಬಳ ಎಷ್ಟು ಅಂತ ಅಪ್ಪನಿಗೆ ಕಾಲ್‌ ಮಾಡಿ ಕೇಳಿದೆ, ಅವರು 3500 ರೂ. ಅಂದರು. ಅಲ್ಲದೆ ಸುಧೀಂದ್ರ ಅವರ ನಿರ್ಮಾಣದ ನಗುನಗುತಾ ನಲಿ ಚಿತ್ರದಲ್ಲೂ ನಾನು ಅಭಿನಯಿಸಿದ್ದೆ. ಈಗ ಅವರ ಮೊಮ್ಮಗ ನಿರ್ದೇಶಕನಾಗಿದ್ದಾನೆ. ತಾಯಿ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ನನ್ನ ಮನಸಿಗೆ ಹತ್ತಿರವಾಯಿತು. ಕಣ್ಣಂಚಲಿ ನೀರು ತರಿಸಿತು ಎಂದರು.
ಮಗನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿರುವ ತಂದೆ ಸುಧೀಂದ್ರ ವೆಂಕಟೇಶ್ ಮಾತನಾಡುತ್ತ ನನ್ನ ಮೊದಲ ಸ್ಯಾಲರಿ ಕೊಟ್ಟವರು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಮ್ಮ ಮೊದಲ ಚಿತ್ರದಲ್ಲಿ ನಟಿಸಿದವರು ಶೃತಿ ಮೇಡಂ. ಹಾಗಾಗಿ ಇವರ ಸಮ್ಮುಖದಲ್ಲೇ ನನ್ನ ಮಗನ ಚಿತ್ರವನ್ನು ಲಾಂಚ್ ಮಾಡಿಸಬೇಕೆಂದು ಅವರನ್ನು ಕರೆಸಿದೆ. ನಮ್ಮ ಚಿಕ್ಕಪ್ಪ ಡಿ.ವಿ.ಸುಧೀಂದ್ರ ಅವರು ಆರು ಚಿತ್ರಗಳನ್ನು ನಿರ್ಮಿಸಿದ್ದರು. ನಾನು ಮೊದಲಬಾರಿಗೆ ಈ ಕಿರುಚಿತ್ರ ನಿರ್ಮಿಸಿದ್ದೇನೆ. ಮಗ ಪವನ್ ಹಾಗೂ ಸ್ನೇಹಿತರು ಈ ಚಿತ್ರಕ್ಕಾಗಿ ತುಂಬಾ ಶ್ರಮ ಪಟ್ಟಿದ್ದಾರೆ ಎಂದರು.

ನಿರ್ದೇಶಕ ಪವನ್ ಮಾತನಾಡುತ್ತ ನನ್ನ ಗೆಳೆಯ ವಿಜಯ್ ಶಿವಕುಮಾರ್ ಈ ಕಥೆ ಬರೆದು ಚಿತ್ರದ ನಾಯಕನ ಪಾತ್ರದಲ್ಲೂ ಅಭಿನಯಿಸಿದ್ದಾರೆ. ನಾನು ನಿರ್ದೇಶಕನಾಗಬೇಕೆಂಬ ಕನಸನ್ನು ನನ್ನ ತಂದೆ ನನಸು ಮಾಡಿದ್ದಾರೆ. ರಾಕ್ ಲೈನ್ ಸರ್, ಶೃತಿ ಮೇಡಂರಂಥ ಹಿರಿಯರೆಲ್ಲ ಬಂದು ನಮಗೆ ಶುಭ ಹಾರೈಸಿದ್ದು ನನಗೆ ಇನ್ನಷ್ಟು ಸ್ಪೂರ್ತಿ ನೀಡಿದೆ. ಮುಂದೆ ಇನ್ನೂ ಒಳ್ಳೆಯ ಸಿನಿಮಾ ಮಾಡುವ ಹುಮ್ಮಸ್ಸು ತಂದುಕೊಟ್ಟಿದೆ ಎಂದರು. ನಾಯಕನ ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ರಕ್ಷಿತ್ ಕೂಡ ಚುತ್ರದಲ್ಲಿ ನಟಿಸಿದ್ಸಾರೆ. ವಿಜಯ್ ಹರಿತ್ಸ ಅವರ ಸಂಗೀತ, ರಿಚರ್ಡ್ ಡ್ಯಾನಿಯಲ್ ಅವರ ಛಾಯಾಗ್ರಹಣ ಹಾಗೂ ಸಂಕಲನ, ಮನೋಜ್‌ಕುಮಾರ್, ರವಿ ಸಾಸನೂರ್ ಅವರ ಸಹ ನಿರ್ದೇಶನ ಫಸ್ಟ್ ಸ್ಯಾಲರಿ ಚಿತ್ರಕ್ಕಿದೆ.

Leave a Reply

Your email address will not be published. Required fields are marked *