1
1
400 ವರ್ಷಗಳ ಹಿಂದೆ ನಡೆದಂಥ ಕಾಲ್ಪನಿಕ ಕಥೆಯೊಂದನ್ನು ಈಗಿನ ಜನರೇಶನ್‌ಗೆ ಲಿಂಕ್ ಮಾಡಿ ಚಿತ್ರಕಥೆ ಹೆಣೆದಿರುವ ನಿರ್ದೇಶಕ ಬಿ.ಎಸ್. ಸಂಜಯ್ ಅವರು “ಮದನಿಕಾ” ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಬೆಡಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದರೆ ರಾಜರ ಕಾಲದ ಮದನಾರಿಯಾಗಿ ತೆರೆಮೇಲೆ ಮಿಂಚಿದ್ದಾರೆ, ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು,
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಂಜಯ್, ನಾನು ಹಾಗೂ ಸ್ನೇಹಿತ ದೇವಾನಂದ್ ಸೇರಿ 400 ವರ್ಷಗಳ ಹಿಂದೆ
ನಡೆದ ಕಥೆಯನ್ನು ಫ್ಲ್ಯಾಷ್‌ಬ್ಯಾಕ್ ಆಗಿಟ್ಟುಕೊಂಡು ಒಂದು ಅದ್ಭುತವಾದ ಪ್ರೇಮ ಕಥೆಯನ್ನು ರೆಡಿ ಮಾಡಿಕೊಂಡೆವು.
ನನಗೆ ಗೊತ್ತಿಲ್ಲದಂತೆ ಈ ಸಿನಿಮಾ ಮಾಡುವಾಗ ಒಂದಷ್ಟು ಘಟನೆಗಳು ನಡೆದವು. 25ರಿಂದ 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಿದೆವು, ರಾಗಿಣಿ ಅವರು ಈ ಕಥೆ ಕೇಳಿ ಇಷ್ಟಪಟ್ಟು ಅದ್ಭುತವಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದಿಂದ ಅವರನ್ನು ಕ್ಲಾಸಿಕಲ್ ಕ್ವೀನ್
ಅಂತ ಕರೆಯಬಹುದು. ಮದನಿಕಾ ಸಿನಿಮಾದಲ್ಲಿ ಹತ್ತು ಹಾಡುಗಳಿವೆ. ಜತೆಗೆ ಒಂದೊಳ್ಳೇ ಅದ್ಭುತವಾದ ಎಮೋಷನ್ಸ್ ಕ್ಯಾರಿ ಆಗುತ್ತದೆ, ರಾಜರ ಕಾಲದ ಕಥೆಯಲ್ಲಿ ಹಳಗನ್ನಡ ಭಾಷೆಯನ್ನು ಬಳಸಿದ್ದೇದ್ದೇವೆ, ನಟಿ ರಾಗಿಣಿ ಅವರು ಮದನಿಕಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ ಎಂದರು.

ನಂತರ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ನಾನು ಈ ಥರದ ಪಾತ್ರ ಮಾಡಿರುವುದು ಇದೇ ಮೊದಲು. ಈ ಸಿನಿಮಾ ಮೇಲೆ ನನಗೆ ತುಂಬಾ
ನಿರೀಕ್ಷೆಯಿದೆ. ಸುಮಾರು ಎರಡೂವರೆ ವರ್ಷದ ಜರ್ನಿಯಿದು. ಈಗಿನ ಟೆಕ್ನಾಲಜಿ, ಮೇಕಿಂಗ್, ಮ್ಯೂಸಿಕ್ ಎಲ್ಲವೂ ಬದಲಾಗಿದೆ. ಆದರೆ ನಮ್ಮ ಭಾವನೆಗಳು ಮಾತ್ರ ಬದಲಾಗಿಲ್ಲ. ಮಿಕ್ಸ್ಡ್ ಎಮೋಶನ್ಸ್ ಒಳಗೊಂಡಂಥ ಚಿತ್ರವಿದು. ಅದ್ಭುತವಾದ ಆ್ಯಕ್ಷನ್ ಸೀಕ್ವೆನ್ಸ್, ಮ್ಯೂಸಿಕ್ ಎಲ್ಲವೂ ಈ
ಚಿತ್ರದಲ್ಲಿ ವಿಶೇಷವಾಗಿದೆ ಎಂದು ಮದನಿಕಾ ಚಿತ್ರದಲ್ಲಿ ತನ್ನ ಪಾತ್ರ ಹಾಗೂ ವಿಶೇಷತೆಗಳನ್ನು ವಿವರಿಸಿದರು.
ಸಂಗೀತ ನಿರ್ದೇಶಕ ಸಲಾಂ ಮಾತನಾಡಿ ಈ ಹಿಂದೆ ನಾನು ಮೂರು ಸಿನಿಮಾಗಳನ್ನು ಮಾಡಿದ್ದೆ. ನನ್ನ ಜೀವನದ ಬೆಸ್ಟ್ ಮ್ಯೂಸಿಕ್ ಆಲ್ಬಂ ಇದು ಎನ್ನಬಹುದು. ನನ್ನ ಯೋಚನೆಯಲ್ಲಿ ಜನರಲ್ ಮ್ಯೂಸಿಕ್ ಅಂತಾನೆ ಇತ್ತು. ಆದರೆ ನಿರ್ದೇಶಕರನ್ನು ಭೇಟಿ ಮಾಡಿದ ಮೇಲೆ ಕ್ಲಾಸಿಕಲ್ ಮ್ಯೂಸಿಕ್ ಇರಲಿ ಅಂತ ಹೇಳಿದ್ರು ಎಂದರು.
ಎಸ್ ಪಿ ಆರ್ ಪ್ರೊಡಕ್ಷನ್ ಹಾಗೂ ಸಖರ್ಥ್ ಡಿಜಿಟಲ್ ಹೌಸ್ ಬ್ಯಾನರ್ ನಡಿ ಸುಜಾತ ಲಕ್ಷ್ಮೀ ಹಾಗೂ ಕುಮಾರಸ್ವಾಮಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್, ರಾಜ್ವಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಆರ್. ಗಿರಿ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಇದೇ ಜೂನ್ ತಿಂಗಳ ವೇಳೆಗೆ ಮದನಿಕಾ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ನಿರ್ದೇಶಕ ಸಂಜಯ್ ಅವರಿಗಿದೆ.