1
1
ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ಮಾಪಕ, ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಸಂಜಯ್ ಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡಿದರು. ಸಂಜಯ್ ಗೌಡ ಅವರ ಹುಟ್ಟುಹಬ್ಬಕ್ಕೆ ಪರಮಪೂಜ್ಯ ನಂಜಾವಧೂತ ಸ್ವಾಮಿಗಳುವ ಆಗಮಿಸಿ ಆಶೀರ್ವದಿಸಿದರು. ಮಾಜಿ ಸಂಸದ ಶಿವರಾಮೇಗೌಡ, ಕ.ರ.ವೇ. ರಾಜ್ಯಾಧ್ಯಕ್ಷ ನಾರಾಯಣ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜು, ನಿರ್ಮಾಪಕ ರಮೇಶ್ ರೆಡ್ಡಿ, ನಟ ಧರ್ಮ, ಕಬ್ಬಡಿ ಬಾಬು, ಚಾಂದ್ ಪಾಷಾ ಅವರು ಸೇರಿದಂತೆ ಅನೇಕರು ಹುಟ್ಟುಹಬ್ಬದ ಆಗಮಿಸಿ ಅವರಿಗೆ ಶುಭ ಕೋರಿದರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿದ ಸಂಜಯ್ ಗೌಡ ಅವರು, ಪೂಜ್ಯ ನಂಜಾವಧೂತ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತಿದ್ದು, ಶ್ರೀಗಳು ನನ್ನ ಗುರುಗಳು ಎಂದು ಹೇಳಲು ಇಷ್ಟ ಪಡುತ್ತೇನೆ. ಅದೇ ರೀತಿ ಇವತ್ತು ನನ್ನ ಹುಟ್ಟುಹಬ್ಬಕ್ಕೆ ಕನ್ನಡ ಪರ ಹೋರಾಟಗಾರ ನಾರಾಯಣಗೌಡರು ಆಗಮಿಸಿದ್ದಾರೆ. ಅವರು ಯಾವಾಗಲೂ ನಮ್ಮ ಜೊತೆ ಅಣ್ಣನಾಗಿ ಇರುತ್ತಾರೆ. ಹಿರಿಯರಾದ ಶಿವರಾಮೇಗೌಡ ಸೇರಿದಂತೆ ಆಗಮಿಸಿದ ಎಲ್ಲಾ ಗಣ್ಯರುಗಣಲಿಗೆ ಧನ್ಯವದಗಳು. ಸದ್ಯದಲ್ಲೇ ನಾನು ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಚಿತ್ರ ಮಾಡುತ್ತಿದ್ದೇನೆ. ಬೇಗನೇ ನಿಮಗೆಲ್ಲಾ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತೇನೆ. ಕನ್ನಡಿಗ ಯಾವ ಮಟ್ಟಕ್ಕೆ ಸಿನಿಮಾ ಮಾಡಬಹುದು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿಕೊಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಸದಾ ನನ್ನ ಮೇಲಿರಲಿ’ ಎಂದರು.