Popular Posts

ಜೂನಿಯರ್‌ ಓಟ ಎಲ್ಲೆಡೆ ಭರ್ಜರಿ.. ಸಾಹಸ ದೃಶ್ಯಕ್ಕಾಗಿ ಕಿರೀಟಿ ಶ್ರಮ ಬರೋಬ್ಬರಿ

ಜೂನಿಯರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಿಕ್ಕಿದ್ದಾರೆ. ಜೂನಿಯರ್ ನಲ್ಲಿ ತಮ್ಮ ಪ್ರತಿಭೆಯನ್ನು ಕಿರೀಟಿ ತೆರೆದಿಟ್ಟಿದ್ದಾರೆ. ಜೂನಿಯರ್‌ ಆದರೂ ಸೀನಿಯರ್‌ ಲೆವೆಲ್‌ನಲ್ಲಿ ನಟನಾ ಕೌಶಲ್ಯ ಪ್ರದರ್ಶಿಸಿ, ನೋಡುಗರ ಮೆಚ್ಚುಗೆ ಪಡೆದಿದ್ದಾರೆ. ಅಭಿನಯ, ನೃತ್ಯದಲ್ಲಿ ಕಿರೀಟಿ ಫುಲ್‌ ಮಾರ್ಕ್ಸ್‌ ಪಡೆದುಕೊಂಡಿದ್ದಾರೆ. ಕಳೆದ 18ರಂದು ತೆರೆಗೆ ಬಂದ ಜೂನಿಯರ್‌ ಫ್ಯಾಮಿಲಿ ಆಡಿಯನ್ಸ್ ನಿಂದ ಚಪ್ಪಾಳೆ ಪಡೆಯುತ್ತಿದೆ.

‌ರಾಧಾಕೃಷ್ಣ ರೆಡ್ಡಿ ಅವರು ಜೂನಿಯರ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಸ್ಟಂಟ್‌ ಮಾಡಿರುವ ಕಿರೀಟಿ ತೆರೆಹಿಂದೆ ಎಷ್ಟರಮಟ್ಟಿಗೆ ಶ್ರಮ ಹಾಕಿದ್ದಾರೆ ಎಂಬುದನ್ನು ತೋರಿಸೋ ವಿಡಿಯೋವೊಂದು ವೈರಲ್‌ ಆಗಿದೆ. ಕಾರು ಸ್ಟಂಟ್‌ ವೇಳೆ ಕಿರೀಟಿ ಪಟ್ಟಿರುವ ಶ್ರಮ ತೆರೆಮೇಲೆ ಅದ್ಭುತವಾಗಿ ಮೂಡಿಬಂದಿದೆ. ಟಾಪ್ ಸ್ಟಂಟ್ ಮಾಸ್ಟರ್ ಪೀಟರ್ ಹೆನ್ ಸಾಹಸ ದೃಶ್ಯಗಳನ್ನು ಕಂಪೋಸ್‌ ಮಾಡಿದ್ದಾರೆ.
ಚಿತ್ರದಲ್ಲಿ ಕಿರೀಟಿ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಯಾಬಜಾರ್ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ. ಸೆಂಥಿಲ್ ಕುಮಾರ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ರಾಕ್‌ ಸ್ಟಾರ್‌ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಜೂನಿಯರ್‌ ಪ್ರೇಕ್ಷಕರ ಪ್ರೀತಿ ಪಡೆಯುವುದರ ಜೊತೆಗೆ ಬಾಕ್ಸಾಫೀಸ್‌ನಲ್ಲಿಯೂ ಉತ್ತಮ ಗಳಿಕೆ ಮಾಡುತ್ತಿದೆ. ಕಿರೀಟಿ ಅವರ ಡ್ಯಾನ್ಸ್ , ಫೈಟ್ ಹಾಗೂ ಪರ್ಫಾರ್ಮನ್ಸ್ ಜನರಿಗೆ ಇಷ್ಟವಾಗಿದೆ.

Leave a Reply

Your email address will not be published. Required fields are marked *