1
1
ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ನಿಂದ ಗಮನ ಸೆಳೆದಿದ್ದ “ಕಮಲ್ ಶ್ರೀದೇವಿ” ಚಿತ್ರತಂಡ ಇದೀಗ ಸಿನಿಮಾದ ಟ್ರೈಲರ್ ನ್ನು ಬಿಡುಗಡೆ ಮಾಡಿದೆ. ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಪೋಸ್ಟರ್, ಟೀಸರ್ ಹಾಗೂ ಹಾಡು ಎಷ್ಟು ನಿರೀಕ್ಷೆ ಹುಟ್ಟಿಸಿದ್ವೋ ಅದಕ್ಕೆ ಹತ್ತಪಟ್ಟು ಹೆಚ್ಚು ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ ಈ ಟ್ರೈಲರ್. ತಾಂತ್ರಿಕ ಗುಣಮಟ್ಟ, ಪಾತ್ರಗಳ ವಿಶೇಷತೆ ಕಮಲ್ ಶ್ರೀದೇವಿ ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿಸೋ ಸೂಚನೆ ಕೊಟ್ಟಿದೆ.

ಕಮಲ್ ಶ್ರೀದೇವಿ ಎನ್. ಚಲುವರಾಯ ಸ್ವಾಮಿ ಅರ್ಪಿಸಿ, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ ಧನಲಕ್ಷ್ಮೀ ಅವರು ನಿರ್ಮಿಸಿರುವ Barnswallow companyಯ ರಾಜವರ್ಧನ್ ಅವರ ಸಹ ನಿರ್ಮಾಣವಿರೋ ಚಿತ್ರ. ಈ ಚಿತ್ರದಲ್ಲಿ ಸಚಿನ್ ಚಲುವರಾಯಸ್ವಾಮಿ ನಾಯಕನಾಗಿ ಅಭಿನಯಿಸಿದ್ದಾರೆ. ಸಂಗೀತ ಭಟ್ ಚಿತ್ರದ ನಾಯಕಿ. ಕಿಶೋರ್, ರಮೇಶ್ ಇಂದಿರ, ಮಿತ್ರ ಸೇರಿದಂತೆ ಅನೇಕ ಪ್ರತಿಭಾವಂತರ ಕಲಾವಿದರ ಬಳಗವಿರೋ ಈ ಚಿತ್ರವನ್ನ ವಿ.ಎ. ಸುನೀಲ್ ಕುಮಾರ್ ಅವರು ನಿರ್ದೇಶಿಸಿದ್ದು, ಕ್ರಿಯೇಟಿವ್ ಹೆಡ್ ಆಗಿ ನಟ ರಾಜವರ್ಧನ್ ಕಾರ್ಯ ನಿರ್ವಹಿಸಿದ್ದಾರೆ.
ಟ್ರೈಲರ್ ಬಿಡುಗಡೆ ನಂತರ ಮಾತನಾಡಿದ ಸಹ ನಿರ್ಮಾಪಕ ರಾಜವರ್ಧನ್ ನಾಯಕಿ ಸಂಗೀತಾ ಭಟ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಎಲ್ಲಾ ಪ್ರಶಸ್ತಿಗಳು ಇವ್ರಿಗೆ ಸಲ್ಲಬೇಕು ಅಷ್ಟು ಚನ್ನಾಗಿ ಆಕ್ಟ್ ಮಾಡಿದ್ದಾರೆ ಎಂದರು. ‘ಸಂಗೀತಾ ಭಟ್’ ಅವರ ಪಾತ್ರವನ್ನು ಇದುವರೆಗೂ ರಿವೀಲ್ ಮಾಡಿದ್ದಿಲ್ಲ. ಅವರಿಲ್ಲಿ ಒಬ್ಬ ಪ್ರಾಸ್ಟಿಟ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ದಿಟ್ಟ ಕಲಾಸ್ಫೂರ್ತಿಗೆ ಒಂದು ಸಲಾಂ, ಎಲ್ಲಾ ಪ್ರಶಸ್ತಿಗಳಿಗೂ ಅರ್ಹರು.
-ಕಾರ್ಯಕಾರಿ ನಿರ್ಮಾಪಕ ರಾಜವರ್ಧನ್

ಚಿತ್ರದಲ್ಲಿ ನಾನೊಬ್ಬ ಫೇಲ್ಯೂರ್ ‘ಡೈರೆಕ್ಟರ್’ ಪಾತ್ರ ಮಾಡಿದ್ದೇನೆ. ಇದು ಗೆಲ್ಲೋ, ನಿಲ್ಲೋ ಕಂಟೆಂಟ್ . ಕಾಡುವ ಪಾತ್ರಗಳು ಜತೆಗೆ ಎಲ್ಲರನ್ನೂ ಸೆಳೆಯುವ ಕ್ವಾಲಿಟಿ ಸಿನ್ಮ.
-ನಾಯಕ ಸಚಿನ್ ಚಲುವರಾಯ ಸ್ವಾಮಿ
