Popular Posts

Chandan Sheety

ಮೇ 9ಕ್ಕೆ ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್‌ ಅವರು ನಿರ್ಮಿಸಿರುವ,‌ ಕಿರಣ್ ಕುಮಾರ್ ಅವರ ನಿರ್ದೇಶನದ, ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ “ಸೂತ್ರಧಾರಿ” ಸರಣಿ ಸಾವುಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಮೇ 9 ರಂದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ ಸೂತ್ರಧಾರಿ ಚಿತ್ರತಂಡ ಮಾಧ್ಯಗಳ‌ ಜತೆ ಮಾಹಿತಿ ಹಂಚಿಕೊಂಡಿತು.

ಪತ್ರಿಕಾ ಗೋಷ್ಟಿಯಲ್ಲಿ ನಿರ್ಮಾಪಕ ನವರಸನ್ ಮಾತನಾಡುತ್ತ ನಮ್ಮ ಸಂಸ್ಥೆಯಿಂದ ಈವರೆಗೂ ಸಾಕಷ್ಟು ಇವೆಂಟ್ ಅಲ್ಲದೆ ಸಿನಿಮಾ ಕೂಡ ಮಾಡಿದ್ದೇವೆ. ಮೇ 9 ರಂದು ಬಿಡುಗಡೆಯಾಗಲಿರುವ ನಮ್ಮ “ಸೂತ್ರಧಾರಿ” ಚಿತ್ರದ ಮೂಲಕ ನಾಯಕ‌ನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ‌. ನಾಯಕಿಯಾಗಿ ರವಿಚಂದ್ರನ್ ಅವರ ಚಿತ್ರದ ಮೂಲಕ ಪರಿಚಯವಾದ ಸೌಂದರ್ಯ ಅವರು ನಟಿಸಿದ್ದಾರೆ. ನಟಿ ಸಂಜನಾ ಆನಂದ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ಚಿತ್ರದ ಟ್ರೇಲರ್ ಈಗಾಗಲೇ ಎಲ್ಲಾ ಕಡೆ ವೈರಲ್ ಆಗಿ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ‌. ಕಲಾವಿದರ, ತಂತ್ರಜ್ಞರ ಸಹಕಾರದಿಂದ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಾಯಕ ನಟ ಚಂದನ್ ಶೆಟ್ಟಿ ಮಾತನಾಡುತ್ತ, ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು. ಕಳೆದವಾರ ನಟ ಧ್ರುವ ಸರ್ಜಾ ಅವರು
ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಶುಭ ಹಾರೈಸಿದ್ದಾರೆ.

ಮೊದಲ ಚಿತ್ರದಲ್ಲೇ ನಾನು ಒಬ್ಬ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ಈ ಚಿತ್ರದ ಕಥೆಯೇ ತುಂಬಾ ಇಂಟರೆಸ್ಟಿಂಗ್ ಆಗಿದೆ. ನಗರದಲ್ಲಿ‌ ಆಗುತ್ತಿರುವ ಅಸ್ವಾಭಾವಿಕ ಸಾವುಗಳು ಪೂರ್ವನಿಯೋಜಿತ ಕೊಲೆಯೋ ಅಥವಾ ಸಹಜ ಸಾವೇ, ಆ ಎಲ್ಲ ಸಾವುಗಳ ಹಿಂದಿರುವ ಸೂತ್ರಧಾರ ಯಾರು ಎಂಬುದನ್ನು ನಾನು ಹೇಗೆ ಪತ್ತೆ ಹಚ್ಚುತ್ತೇನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ನಾನು ನಾಯಕನಾಗಲೂ ನಿರ್ಮಾಪಕ ನವರಸನ್ ಅವರೆ ಪ್ರಮುಖ ಕಾರಣ ಎಂದು ಹೇಳಿದರು.

ನಿರ್ದೇಶಕ ಕಿರಣ್ ಕುಮಾರ್ ಒಂದು ಕುತೂಹಲಕರವಾದ ಮರ್ಡರ್ ಮಿಸ್ಟ್ರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಚಿತ್ರ ಆರಂಭವಾದಾಗಿನಿಂದ ಮುಂದೇನಾಗುತ್ತೆ ಅಂತ ಕುತೂಹಲ‌ ಕೆರಳಿಸುತ್ತಲೇ ಸಾಗುತ್ತದೆ. ತಬಲಾನಾಣಿ ಅವರ ಪಾತ್ರ ತುಂಬಾ ಚೆನ್ನಾಗಿದೆ. ವಿಶೇಷವಾಗಿ ನಿರ್ಮಾಪಕ ನವರಸನ್ ಅವರೂ ಸಹ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಪೂರ್ವ, ಸಂಜನಾ ಆನಂದ್ , ನಟನ ಪ್ರಶಾಂತ್ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ ಎಂದರು.

ಚಿತ್ರದ ಹಾಡುಗಳಿಗೆ ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಕೆಜಿಎಫ್ ಖ್ಯಾತಿಯ ಕಿನ್ನಾಳ್ ರಾಜ್‌ ಸಾಹಿತ್ಯ ಬರೆದಿದ್ದಾರೆ.

Leave a Reply

Your email address will not be published. Required fields are marked *