Popular Posts

ಗಂಡುಮೆಟ್ಟಿದ ನಾಡಲ್ಲಿ ಆಯೋಗ್ಯ-2 ಚಿತ್ರದ ಮೂರನೇ ಹಾಡು

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ಸೂಪರ್ ಹಿಟ್ ಅಯೊಗ್ಯ ಚಿತ್ರದ ಸೀಕ್ವೇಲ್ ಆದ ‘ಅಯೋಗ್ಯ 2’ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ಚಿತ್ರದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ರಿಲೀಸಾಗಿದ್ದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಹಾಗೂ ಅಣ್ಣಾ ಬಂದ್ರೆ ಜೋಶ್ ಬತ್ತದೆ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ‘ಹುಡ್ಗೀರ್ ಡೇಂಜರಸ್’ ಎಂಬ ಹಾಡನ್ನು ರಿಲೀಸ್ ಮಾಡಿದೆ. ಮಹೇಶ್ ಕುಮಾರ್ ಅವರ ನಿರ್ದೇಶನದ ಈ ಚಿತ್ರ ಆಗಸ್ಟ್ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯ ಈ ಹಾಡಿಗೆ ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ವಿಜಯ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಂತೋಷ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ.ಮುನೇಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಾಯಕ ನೀನಾಸಂ ಸತೀಶ್ ಮಾತನಾಡುತ್ತ ‘ಅಯೋಗ್ಯ ಚಿತ್ರವನ್ನು ಸೂಪರ್ ಹಿಟ್ ಆಗಿಸಿದ ಕನ್ನಡ ಪ್ರೇಕ್ಷಕರಿಗೆ ನಾವು ಸದಾ ಚಿರಋಣಿ. ನಿರ್ದೇಶಕ ಮಹೇಶ್ ಕುಮಾರ್ ಮಂಡ್ಯದ ಒಂದು ಹಳ್ಳಿ ರಾಜಕೀಯದ ಕಥೆಯ ಮೂಲಕ ಜನರನ್ನು ರಂಜಿಸಿದ್ದರು. ಇದೀಗ ಆಯೋಗ್ಯ-2 ಕೇವಲ ಒಂದು ಹಳ್ಳಿಯ ಕಥೆಯಾಗಿರದೇ ರಾಜ್ಯದ ಪ್ರತಿಹಳ್ಳಿಗು ತಲುಪುವಂತಹ ಸಬ್ಜೆಕ್ಟ್ ಆಗಿದೆ ಎಂದರು.

ನಾಯಕಿ ರಚಿತಾರಾಮ್ ಮಾತನಾಡಿ ನಾನು ಆಯೋಗ್ಯ ಹಾಗೂ ಆಯೋಗ್ಯ 2 ಎರಡು ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟು , ಕಥೆಯನ್ನು ಎಂಜಾಯ್ ಮಾಡುತ್ತ ಅಭಿನಯಿಸಿದ್ದೇನೆ. ಈ ಸಿನಿಮಾವನ್ನು ನಮ್ಮ ವಿಐಪಿಗಳೊಂದಿಗೆ (ಪ್ರೇಕ್ಷಕರು) ಚಿತ್ರಮಂದಿರದಲ್ಲಿಯೇ ನೋಡಲು ಕಾಯುತ್ತಿದ್ದೇನೆ ಎಂದರು.

ನಿರ್ದೇಶಕ ಮಹೇಶ್ ಕಮಾರ್ ಮಾತನಾಡುತ್ತ ನಾನು ಡಿ ಬಾಸ್ ಅಪ್ಪಟ ಅಭಿಮಾನಿ. ಡಿ ಬಾಸ್ ಯಾವಾಗಲೂ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟೀಸ್ ಎಂದೇ ಪ್ರೀತಿಸುತ್ತಾರೆ. ನಮ್ಮ ಆಯೋಗ್ಯ 2 ಚಿತ್ರತಂಡ ಹುಬ್ಬಳ್ಳಿ ಭಾಗದ ಪ್ರೇಕ್ಷಕರ ಎದುರು ಮೂರನೇ ಹಾಡನ್ನು ರಿಲೀಸ್ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ತಾರಾಗಣದಲ್ಲಿದ್ದಾರೆ. ಮಾಸ್ತಿ ಉಪ್ಪಾರಳ್ಳಿ ಅವರ ಸಂಭಾಷಣೆ, ವಿಶ್ವಜಿತ್ ರಾವ್ ಅವರ ಕ್ಯಾಮೆರಾವರ್ಕ್. ಸುರೇಶ್ ಆರ್ಮುಗಂ ಅವರ ಸಂಕಲನ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *