Popular Posts

ಅರ್ಜುನ್ ಜನ್ಯ ಚಿತ್ರದಲ್ಲಿ ಒಪೆರಾ ಹಾಡಿದ ಅನುಷ್ಕಾ

ಜೀ ಕನ್ನಡ ವಾಹಿನಿಯ ಜನಪ್ರಿಯ “ಸಾ.ರೆ.ಗ.ಮ.ಪ. 2026” ರಿಯಾಲಿಟಿ ಶೋನಲ್ಲಿ ತಮ್ಮ ಒಪೆರಾ ಗಾಯನ ಶೈಲಿಯಿಂದ ಕರ್ನಾಟಕ ಹಾಗೂ ಪ್ರಪಂಚದಾದ್ಯಂತ ಪ್ರೇಕ್ಷಕರ ಮನ ಗೆದ್ದಿರುವ ಪುಟ್ಟ ಪ್ರತಿಭೆ ಅನುಷ್ಕಾ ಸಕಲೇಶಪುರ ತಾಲ್ಲೂಕಿನ ಕಾಗಿನೆರೆ ಮೂಲದ, ಸಧ್ಯ ಬೆಂಗಳೂರಿನಲ್ಲಿ ನೆಲೆಸಿರುವ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಚಿತ್ರನಟ, ನಿರ್ಮಾಪಕ ಆದರ್ಶ್ ಗುಂಡೂರಾಜ್ ಮತ್ತು ಡಾ. ದೀಪಾಶ್ರೀ ಅವರ ಪುತ್ರಿ. ಇತ್ತೀಚೆಗಷ್ಟೇ‌ ತಮ್ಮ 12ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅನುಷ್ಕಾ ರಾಜ್ಯಾದ್ಯಂತ ನಡೆದ ಆಡಿಷನ್‌ಗಳಲ್ಲಿ ಭಾಗವಹಿಸಿ ಆಯ್ಕೆಯಾದ 19 ಸ್ಪರ್ಧಿಗಳ ಪೈಕಿ ಅತ್ಯಂತ ಕಿರಿಯ ಹಾಗೂ ಹಳೇ ಮೈಸೂರು ಭಾಗದಿಂದ ಆಯ್ಕೆಯಾದ ಏಕೈಕ ಸ್ಪರ್ಧಿಯಾಗಿದ್ದಾರೆ.

ಸುಮಾರು 2.5 ತಿಂಗಳಿಂದ ಸ್ಪರ್ಧೆಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅನುಷ್ಕಾ, ಈವರೆಗೆ 5 ಗೋಲ್ಡನ್ ಬಜರ್‌ಗಳನ್ನು ಗಳಿಸಿದ್ದು, ತಮ್ಮ ವಿಶಿಷ್ಟ ಒಪೆರಾ ಗಾಯನ ಶೈಲಿಯಿಂದ ಅಲ್ಪಾವಧಿಯಲ್ಲೇ ಮನೆ ಮಾತಾಗಿದ್ದಾರೆ. ಅನುಷ್ಕಾ ಅವರ ಪ್ರತಿಭೆಯನ್ನು ಗುರುತಿಸಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು, ಒಂದು ಸ್ಟಾರ್ ಚಿತ್ರದಲ್ಲಿ ಒಪೆರಾ ಹಾಡನ್ನು ಅವಕಾಶ ನೀಡಿದ್ದಾರೆ. ಆ ಹಾಡಿನ ಧ್ವನಿಮುದ್ರಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.

Leave a Reply

Your email address will not be published. Required fields are marked *