1
1
ನೀವು ಬಿಟ್ಟುಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ನೂತನ ಸಿಎಂಗೆ ಟ್ವೀಟ್ ಮಾಡಿದ ರಮೇಶ್ ಅರವಿಂದ್
ಬುಧವಾರ ಸಂಜೆ ನಡೆದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ಹಲವು ಗಣ್ಯರುಗಳು ಶುಭ ಹಾರೈಸಿದ್ದಾರೆ. ಇದರಲ್ಲಿ ನಟ ರಮೇಶ್ ಅರವಿಂದ್ ಅವರು ಶುಭ ಕೋರಿರುವುದು ಜಾಲತಾಣಗಳಲ್ಲಿವ ವೈರಲ್ ಆಗುತ್ತಿದೆ.

“ನಿಮಗೆ ಈಗ ಸಿಕ್ಕಿರುವ ಕರ್ನಾಟಕಕ್ಕಿಂತಲೂ ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ” ಎಂದು ರಮೇಶ್ ಅರವಿಂದ್ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ. ರಮೇಶ್ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಹಲವು ಕನಸುಗಳನ್ನು ಹಂಚಿಕೊಂಡಿದ್ದರು. ಆ ಕನಸುಗಳು ನನಸಾಗಲಿ ಎಂದು ಆಶಿಸುತ್ತೇನೆ. ರಾಜನಿಗೆ ಸಮಸ್ಯೆಗಳಿಗೆ ಕೊನೆ ಎನ್ನುವುದೇ ಇಲ್ಲ, ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅವುಗಳನ್ನು ಪರಿಹರಿಸುತ್ತಿರಬೇಕು ಎಂದು ಆ ವೇದಿಕೆಯಲ್ಲಿ ಡಿಕೆಶಿ ಅವರು ಹೇಳಿದ್ದರು. ಇತಿಹಾಸ ಮೆಚ್ಚುವಂಥ ಸರ್ಕಾರವನ್ನು ಡಿ.ಕೆ. ಶಿವಕುಮಾರ್ ಅವರು ಕೊಡಲಿ. ಈಗ ಇರುವ ಪೀಳಿಗೆಗೆ ಮಾತ್ರವಲ್ಲ, ಮುಂದಿನ ಪೀಳಿಗೆಯೂ ಸಹ ಡಿ.ಕೆ. ಶಿವಕುಮಾರ್ ಹಾಗೂ ಅವರ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ಮಾತನಾಡುವಂತಾಗಲಿ ಎಂದು ರಮೇಶ್
ಅವರು ಶುಭ ಹಾರೈಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ದೂರದೃಷ್ಟಿ ತುಂಬಾ ಚೆನ್ನಾಗಿದೆ. ನಾನು ಚೆನ್ನಾಗಿ ಆಡಳಿತ ಕೊಡಬೇಕು ಎನ್ನುವುದು ಡಿ.ಕೆ ಶಿವಕುಮಾರ್ ಅವರ ಕನಸು. ನಾನು ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು, ಬೆಂಗಳೂರಿಗೆ ಹೆಚ್ಚು ಜನ ವಲಸೆ ಬರುತ್ತಿದ್ದಾರೆ ಊರುಗಳಲ್ಲಿ ಶಿಕ್ಷಣ ಅಭಿವೃದ್ಧಿ ಆಗಬೇಕು ಎಂದು ಡಿಕೆಶಿ ಹೇಳಿದ್ದರು. ಇದೆಲ್ಲವೂ ಆಗಬೇಕು ಎನ್ನುವುದೇ ನಮ್ಮ ಕನಸು ಎಂದು ರಮೇಶ್ ಅವರು ಹೇಳಿದ್ದಾರೆ.