Popular Posts

ಶಿವಣ್ಣ ಈಗ ಒರಿಜಿನ್ ಮಾಸ್ ಸ್ಡರ್

ಆರ್. ಚಂದ್ರು- ಆನಂದ್ ಪಂಡಿತ್ ಜೋಡಿಯ ಪ್ಯಾನ್ ಇಂಡಿಯಾ ಚಿತ್ರ. ಮುಂಬೈನಲ್ಲಿ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ

ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ಈಗ ನಿರ್ಮಾಪಕರಾಗಿ ಬಾಲಿವುಡ್ ಗೂ ಅಡಿಯಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆನಂದ್ ಪಂಡಿತ್ ಅವರ ಜತೆ ಸೇರಿ ನೂತನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಡರ್ ಬಿಡುಗಡೆ ಸಮಾರಂಭ ಮುಂಬೈನಲ್ಲಿ ನಡೆಯಿತು.

ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದು, ಹಿಂದಿ, ತಮಿಳು ಹಾಗೂ ಮಲಯಾಳಂ ನಲ್ಲೂ‌ ಸ್ಟಾರ್ ನಟರು ನಾಯಕರಾಗಿ ನಟಿಸುತ್ತಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಎರಡೂವರೆ ವರ್ಷಗಳ ಹಿಂದೆ ಆರ್.ಚಂದ್ರು ನೂರಾರು ಕೋಟಿ ವೆಚ್ಚದಲ್ಲಿ ಆನಂದ್ ಪಂಡಿತ್ ಅವರೊಂದಿಗೆ ” ಕಬ್ಜ” ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರ ಚಂದ್ರು ಅವರಿಗೆ ದೊಡ್ಡ ಹೆಸರು ಹಾಗೂ ಹಣ ಎರಡನ್ನೂ ತಂದುಕೊಟ್ಟಿತ್ತು. ಅಲ್ಲದೆ ಪ್ರಪಂಚದಾದ್ಯಂತ ಈ ಚಿತ್ರ ದೊಡ್ಡದಾಗಿ ಸುದ್ದಿ ಮಾಡಿತ್ತು. ಈ ಚಿತ್ರದ ನಂತರ ಆರ್ ಚಂದ್ರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಆರ್. ಚಂದ್ರು ಅವರು “ಕಬ್ಜ” ನಂತರ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡು ಈ ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ನೂತನ ಪ್ಯಾನ್ ಇಂಡಿಯಾ ಚಿತ್ರದ ಪ್ರಾರಂಭೋತ್ಸವವನ್ನು ಬಾಲಿವುಡ್ ಕೇಂದ್ರ ಸ್ಥಳವಾದ ಮುಂಬೈನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದರು. ಈ ಚಿತ್ರಕ್ಕೆ “ಒರಿಜಿನಲ್ ಮಾನ್ ಸ್ಟರ್” ಎಂಬ ಯುನಿವರ್ಸಲ್ ಟೈಟಲ್ ಇಡಲಾಗಿದ್ದು, ಎಲ್ಲಾ ಭಾಷೆಗೂ ಈ ಶೀರ್ಷಿಕೆ ಹೊಂದಿಕೆಯಾಗುತ್ತದೆ. ಇದನ್ನು ಕಿರಿದಾಗಿ “OM” ಎಂದೂ ಕರೆಯಬಹುದು.‌ “OM” ಎಂದರೆ ಶಿವಣ್ಣ ಅಭಿನಯದ “ಓಂ” ಕೂಡ ನೆನಪಾಗುತ್ತದೆ. ಈ “ಒರಿಜಿನಲ್ ಮಾನ್ ಸ್ಟರ್” ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಯಶ್, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಆರ್. ಚಂದ್ರು ಅವರಂತಹ ಕನ್ನಡಿಗರು ಪ್ರಸ್ತುತ ಕನ್ನಡದ ಸಿನಿಮಾಗಳನ್ನು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಷಯ.
ಸದ್ಯ ಆರ್. ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ನಟನೆಯ “ಫಾದರ್” ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಇತ್ತೀಚೆಗೆ ಬಿಡುಗಡೆ ಯಾಗಿರುವ ಟೀಸರ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *