Popular Posts

ಹೊಸ ಕಂಟೆಂಟ್ ಗಳೊಂದಿಗೆ ZEE 5 ಮನರಂಜನೆಯ ಮಹಾಪೂರ

ಬಹುನಿರೀಕ್ಷಿತ ಸಿನಿಮಾ, ಹೊಸ ರೀತಿಯ ಒರಿಜಿನಲ್ಸ್ ಹಾಗೂ ಲೈವ್ ಸ್ಪೋರ್ಟ್ಸ್ ಒಳಗೊಂಡ ಬೃಹತ್ ಕಂಟೆಂಟ್ ಪಟ್ಟಿ

ಕನ್ನಡ ಒಟಿಟಿ ಲೋಕದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ‘ಕನ್ನಡ ZEE 5’ ಬಹುನಿರೀಕ್ಷಿತ ಸಿನಿಮಾಗಳು, ವಿಭಿನ್ನ ಒರಿಜಿನಲ್ ವೆಬ್ ಸರಣಿಗಳು, ರಿಯಾಲಿಟಿ ಶೋಗಳು ಮತ್ತು ಲೈವ್ ಸ್ಪೋರ್ಟ್ಸ್ ಒಳಗೊಂಡ ಬೃಹತ್ ಕಂಟೆಂಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸ್ಥಳೀಯ ಕಥೆಗಳಿಗೆ ಜಾಗತಿಕ ಸ್ಪರ್ಶ ನೀಡುವ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಲು ಹೊರಟಿದೆ. ಓಟಿಟಿ ವೇದಿಕೆಗಳಲ್ಲಿ ಕನ್ನಡ ಕಂಟೆಂಟ್ ಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರುವುದು zee 5 ಮಾತ್ರ ಎನ್ನುವುದು ವಿಶೇಷ. ಜೊತೆಗೆ ಅನೇಕ ಮೊದಲುಗಳಿಗೆ Zee 5 ನಾಂದಿ ಹಾಡುತ್ತಿದೆ.

ಪ್ರಮುಖ ಸಿನಿಮಾಗಳು ಮತ್ತು ವೆಬ್ ಸರಣಿಗಳು:
ಕರಾವಳಿ: ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ತ ಗಾಣಿಗ ಅವರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ.

ಕಾರ್ಪೊರೇಟ್ ಲವ್ ಸ್ಟೋರಿ: ಕನ್ನಡದ ಮೊದಲ ಲಾಂಗ್-ಫಾರ್ಮ್ಯಾಟ್ ಒರಿಜಿನಲ್ ವೆಬ್ ಸರಣಿ, ಪನ್ನಗಾಭರಣ ಅವರ ನಿರ್ದೇಶನದ ಈ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಉಪೇಂದ್ರ, ಸಂಜನಾ ದಾಸ್ ಹಾಗೂ ಪ್ರಣವ್ ಶ್ರೀಧರ್ ನಟಿಸಿದ್ದಾರೆ.

ಮಲ್ಲಿಕಾ: ಭಾರತದ ಮೊದಲ ಮಹಿಳಾ ಸೀರಿಯಲ್ ಕಿಲ್ಲರ್ ಮಲ್ಲಿಕಾ. ಈಕೆಯ ಕಥೆಯಿಂದ ಪ್ರೇರಿತವಾದ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ರೋಶನಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಕುಡ್ಲ ಕಪ್: ಕರಾವಳಿ ಹಿನ್ನೆಲೆಯ ಕ್ರೀಡಾ ಲೋಕವನ್ನು ತೆರೆದಿಡುವ ಸ್ಪೋರ್ಟ್ಸ್ ಡ್ರಾಮಾದಲ್ಲಿ ಪೃಥ್ವಿ ಅಂಬಾರ್ ಮತ್ತು ಅರ್ಜುನ್ ಕಾಪಿಕಾಡ್ ನಟಿಸಿದ್ದಾರೆ.

ಅಯ್ಯನ ಮನೆ 2: ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ
ಅಯ್ಯನ ಮನೆ ವೆಬ್ ಸರಣಿಯ ಮುಂದುವರಿದ ಭಾಗ. ರಮೇಶ್ ಇಂದಿರಾ ನಿರ್ದೇಶನದ ಈ ಸರಣಿಯಲ್ಲಿ ಖುಷಿ ರವಿ ಮತ್ತು ಅಕ್ಷಯ್ ನಾಯಕ್ ನಟಿಸಿದ್ದಾರೆ.
ಇತರ ಪ್ರಮುಖ ಶೋಗಳು: ನಿಶ್ವಿಕಾ ನಾಯ್ಡು ನಟನೆಯ ‘ಆಪರೇಷನ್ ಬಂಗಾರ’, ಎಂಡಮಾಲ್ ಶೈನ್ ಇಂಡಿಯಾ ನಿರ್ಮಾಣದ ‘ಕೂಲ್ ಮಾಮ್ಸ್’ ಮತ್ತು ಕೋರ್ಟ್‌ ರೂಮ್ ಡ್ರಾಮಾ ‘ವಕಾಲತ್’.

ರಿಯಾಲಿಟಿ ಶೋಗಳು ಮತ್ತು ಎಐ-ಚಾಲಿತ ಕಂಟೆಂಟ್,
ನಾನ್-ಫಿಕ್ಷನ್ ವಿಭಾಗದಲ್ಲಿ ಅಕುಲ್ ಬಾಲಾಜಿ ನಿರೂಪಣೆಯ ‘ವೆಲ್ಕಮ್ ಟು ದ ಜಂಗಲ್’ ಮತ್ತು ‘ಹಳ್ಳಿ ಪವರ್’ ಶೋಗಳಿವೆ. ಇದರೊಂದಿಗೆ ಗರುಡ, ವಿಕ್ರಮ್ ವೇತಾಳ, ಶಿವ ಸತಿ, ಚಂದ್ರಕಾಂತ, ತಿರುಪತಿ ಬಾಲಾಜಿ, ಬರ್ಬರಿಕ್ ನರ್ಮದಾ ಹಾಗೂ ರಾಮ್ ಆಂಜನೇಯ ಯುದ್ಧ ಮುಂತಾದ ಕಥೆಗಳನ್ನು ಎಐ-ತಂತ್ರಜ್ಞಾನದ (AI-powered) ಮೂಲಕ ಪ್ರಸ್ತುತಪಡಿಸಲಾಗುತ್ತಿದೆ. ಮಕ್ಕಳಿಗಾಗಿ ‘ಕುಂದಕ ಮಂದಕ್ಕ’ ಅನಿಮೇಷನ್ ಕೂಡ ಲಭ್ಯವಿದೆ.

ಕ್ರೀಡಾ ಪ್ರೇಮಿಗಳಿಗೆ ನೇರ ಪ್ರಸಾರ
2034ರ ವರೆಗೆ ಫಿಫಾ (FIFA) ಜೊತೆಗಿನ ಪಾಲುದಾರಿಕೆಯ ಭಾಗವಾಗಿ ‘FIFA World Cup 2026’ ಮತ್ತು 2030ರ ವಿಶ್ವಕಪ್ ಪಂದ್ಯಾವಳಿಗಳು ಕನ್ನಡದಲ್ಲೂ ಲಭ್ಯವಾಗಲಿವೆ. ಇದರ ಜೊತೆಗೆ ಬುಂಡೆಸ್‌ಲಿಗಾ, ಕೊಪ್ಪಾ ಇಟಾಲಿಯಾ ಮತ್ತು ಸೂಪರ್‌ಕೊಪ್ಪಾ ಇಟಾಲಿಯಾನಾ ಪಂದ್ಯಗಳ ನೇರ ಪ್ರಸಾರವನ್ನು ಕ್ರೀಡಾಭಿಮಾನಿಗಳು ವೀಕ್ಷಿಸಬಹುದಾಗಿದೆ.

ದೊಡ್ಡ ಮಟ್ಟದ ಕ್ರಿಯೇಟಿವ್ ಸಹಯೋಗ
ಕೆವಿಎನ್ ಪ್ರೊಡಕ್ಷನ್ಸ್ , ಡಾಲಿ ಪಿಕ್ಚರ್ಸ್, ಶ್ರುತಿ ನಾಯ್ಡು ಪ್ರೊಡಕ್ಷನ್ಸ್, ಸ್ಟ್ರೀಟ್‌ಲ್ಯಾಂಪ್ ಮೀಡಿಯಾ, ದೇವರಾಜ್ ಪೂಜಾರಿ ಪ್ರೊಡಕ್ಷನ್ಸ್, ಫಿಲ್ಮಿ ಫೆಲೋ ಸ್ಟುಡಿಯೋಸ್ ಮತ್ತು ಶೈವ್ ಸ್ಟುಡಿಯೋಸ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ zee5 ಕೈಜೋಡಿಸಿದೆ.

ಝೀ ಕನ್ನಡದ ಚೀಫ್ ಚಾನೆಲ್ ಆಫೀಸರ್ ಹಾಗೂ ಕನ್ನಡ Zee5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, “ಕಳೆದ ವರ್ಷ ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲ ನಮಗೆ ಹೊಸ ಉತ್ಸಾಹ ತುಂಬಿದೆ. ‘ಕಾರ್ಪೊರೇಟ್ ಲವ್ ಸ್ಟೋರಿ’ಯಂತಹ ಲಾಂಗ್-ಫಾರ್ಮ್ಯಾಟ್ ಸರಣಿ ಹಾಗೂ ‘ಕರಾವಳಿ’ಯಂತಹ ಸಿನಿಮಾಗಳ ಮೂಲಕ Zee 5 ಕನ್ನಡದಲ್ಲಿ
ವೈವಿಧ್ಯಮಯ ಮನರಂಜನೆ ನೀಡುವ ಮುಂಚೂಣಿಯ ಒಟಿಟಿ ತಾಣವಾಗಿದೆ ಎಂದು ಹೇಳಿದ್ದಾರೆ.‌

Leave a Reply

Your email address will not be published. Required fields are marked *