1
1
ಕನ್ನಡ ಸಿನಿಪ್ರಿಯರಿಗೆ ಅದರಲ್ಲೂ ಡಿ ಬಾಸ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ದಿ ಡೆವಿಲ್’ ಇದೀಗ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಡೆವಿಲ್ ಯಾವಾಗ ಒಟಿಟಿಯಲ್ಲಿ ಬರುತ್ತೋ ಎಂದು ಬಹುತೇಕ ಅಭಿಮಾನಿಗಳು ಕಾಯುತ್ತಿದ್ದರು. ಥಿಯೇಟರ್ನಲ್ಲಿ ಚಿತ್ರ ಮಿಸ್ ಮಾಡಿಕೊಂಡವರು, ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು ಎಂದು ಕಾತರದಿಂದ ಕಾಯ್ತಿದ್ದರು. ಅಂಥಾ ಅಭಿಮಾನಿಗಳಿಗೆ ಕನ್ನಡ ಜೀ 5 ಓಟಿಟಿ ಇದೀಗ ಸಿಹಿಸುದ್ದಿ ನೀಡಿದೆ.

ಮಿಲನ, ತಾರಕ್ ಖ್ಯಾತಿಯ ಪ್ರಕಾಶ್ವೀರ್ ಅವರ ನಿರ್ದೇಶನದ, ದರ್ಶನ್ ಅಭಿನಯದ “ದಿ ಡೆವಿಲï” ಸಿನಿಮಾ ಕನ್ನಡ ಜೀ 5 ನಲ್ಲಿ _ಜು.17ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವನ್ನು ಥಿಯೇಟರ್ಲ್ಲಿ ನೋಡಲು ಸಾಧ್ಯವಾಗದವರು ಈಗ ಮನೆಯಲ್ಲಿಯೇ ಕುಳಿತು “ದಿ ಡೆವಿಲ್’ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.
ಈ ಚಿತ್ರದಲ್ಲಿ ದಚ್ಚು – ಧನುಷ್ ಹಾಗೂ ಕೃಷ್ಣ ಎನ್ನುವ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಎನ್ನುವ ಪಾತ್ರದಲ್ಲಿ ದರ್ಶನ್ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಜೋಡಿಯಾಗಿ ಯುವನಟಿ ರಚನಾ ರೈ ಅಭಿನಯಿಸಿದ್ದಾರೆ.
ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಸುಧಾಕರ್.ಎಸ್.ರಾಜ್ ಅವರು ಕ್ಯಾಮರಾವರ್ಕ್ ನಿಭಾಯಿಸಿದ್ದಾರೆ, ದರ್ಶನ್, ರಚನಾ ರೈ, ಮಹೇಶ್ ಮಾಂಜ್ರೇಕರ್, ವಿನಯ್ಗೌಡ, ಅಚ್ಯುತ್ಕುಮಾರ್, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್ ಹಾಗೂ ಇತರರು ಡೆವಿಲ್ ಚಿತ್ರದ ಪ್ರಮುಖ ಪಾತ್ರ ವರ್ಗದಲ್ಲಿದ್ದಾರೆ.