1
1

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಫೌಜಿ. ಸೀತಾರಾಮಂ ನಿರ್ದೇಶಕ ಹನು ರಾಘವಪುಡಿ ಅವಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಇದೀಗ ಘೋಷಣೆಯಾಗಿದೆ. ನಾಯಕ ಪ್ರಭಾಸ್ ತನ್ನ ಕೈಲಿ ಕತ್ತಿ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಡಿಸೆಂಬರ್ 3 ವಿಶ್ವಾದ್ಯಂತ ಫೌಜಿ ಚಿತ್ರ ದರ್ಶನ ಕೊಡಲಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್ ಅವರು ಟಿ-ಸೀರೀಸ್ ಫಿಲಂಸ್ ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿದ್ದಾರೆ. ಫೌಜಿಯಲ್ಲಿ ಪ್ರಭಾಸ್ ಜೋಡಿಯಾಗಿ ಇಮಾನ್ವಿ ಅಭಿನಯಿಸಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದ, ರಾಹುಲ್ ರವಿಂದ್ರನ್ ಸೇರಿದಂತೆ ದೊಡ್ಡ ತಾರಾಗಣವೇಈ ಚಿತ್ರದಲ್ಲಿದೆ.
ಫೌಜಿ ಚಿತ್ರಕ್ಕೆ ಸುದೀಪ್ ಚಟರ್ಜಿ ಅವರ ಛಾಯಾಗ್ರಹಣ, ವಿಶಾಲ್ ಚಂದ್ರಶೇಖರ್ ಅವರ ಸಂಗೀತ, ಅನಿಲ್ ವಿಲಾಸ್ ಜಾಧವ್ ಅವರ ನಿರ್ಮಾಣ ವಿನ್ಯಾಸ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ.