1
1

ಈ ವಾರ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಾಯ್ಸ್ ನೆವರ್ ಕಾಂಪ್ರಮೈಸ್ ಚಿತ್ರವು ಹೆಚ್ಚಾಗಿ ಯುವಜನತೆಯನ್ನೇ ಸೆಳೆಯುತ್ತಿದೆ. ಹಾರರ್ ಹಿನ್ನೆಲೆಯ ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಈಗಿನ ಝಂಜಿ ಯೂಥ್ ಗಮನದಲ್ಲಿಟ್ಟುಕೊಂಡು ನಿರ್ಮಿಸಿರುವ ಸಿನಿಮಾ. ಎಂಟು ಜನ ಸ್ನೇಹಿತರು ವೀಕೆಂಡ್ ಎಂಜಾಯ್ ಮಾಡಲೆಂದು ಊರಾಚೆಯಲ್ಲಿರೋ ಫಾರಂ ಹೌಸ್ ಗೆ ಮೋಜಿನ ಪ್ರವಾಸ ಹೊರಡುತ್ತಾರೆ. ದಾರಿಯಲ್ಲೇ ಅವರು ಅನೇಕ ಅಡೆ ತಡೆಗಳನ್ನು ಎದುರಿಸುತ್ತಾರೆ. ಸುಂದರ ಯುವತಿಗೆ ಡ್ರಾಪ್ ಕೊಡುತ್ತಾರೆ, ಎಂಟು ಜನರೂ ಕುಡಿದು ನಶೆಯ ಮತ್ತಿನಲ್ಲಿ ಸಾಕಷ್ಟು ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ, ದಾರಿಯಲ್ಲಿ ಅವರಿಗಾಗುವ ಅನುಭವಗಳು, ಅಲ್ಲಿ ನಡೆಯುವ ಚಿತ್ರವಿಚಿತ್ರ ಮತ್ತು ಅಲೌಕಿಕ ಘಟನೆಗಳು ಅವರ ಸ್ನೇಹ, ಧೈರ್ಯವನ್ನೇ ಪರೀಕ್ಷೆಗೆ ಒಳಪಡಿಸುತ್ತವೆ. ಹಾಸ್ಯ, ಹಾರರ್ ಮತ್ತು ಮಿಸ್ಟ್ರಿ ಸಂಯೋಗದೊಂದಿಗೆ ಸಾಗುವ ಚಿತ್ರಕಥೆಯಲ್ಲಿ ಕ್ಲೈಮ್ಯಾಕ್ಸ್ ಹೈಲೈಟ್ ಎನ್ನಬಹುದು. ಭಾವುಕ ಅಂತ್ಯ ನೀಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ದುಡುಕಿನಿಂದ ತೆಗೆದುಕೊಳ್ಳುವ ಒಂದು ನಿರ್ಧಾರ ಹುಡುಗರ ಜೀವನವನ್ನೇ ಹೇಗೆ ಅಂತ್ಯಗೊಳಿಸಿತು ಎಂಬುದನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಹಾರರ್ ಮತ್ತು ಕಾಮಿಡಿಯ ಸಮ್ಮಿಶ್ರಣ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಹಿಂದೆ ನಡೆದ ಒಂದು ದುರ್ಘಟನೆ ತೆರೆದುಕೊಳ್ಳುತ್ತದೆ, ಆ ಘಟನೆ ಏನು, ಅದಕ್ಕೂ ಕಾಡಲ್ಲಿ ನಡೆಯುವ ಹಾರರ್ ಗೂ ಏನು ಸಂಬಧ, ಆ ದೆವ್ವಗಳಿಗೆ ಈ ಹುಡುಗರೇ ಏಕೆ ಟಾರ್ಗೆಟ್ ಆಗಿರ್ತಾರೆ, ಚಿತ್ರದ ಕೊನೆಯಲ್ಲಿ ನಿರ್ದೇಶಕರು ಆ ಸಮಸ್ಯೆಗಳಿಗೆ ಹೇಗೆ ಪರಿಹಾರ ನೀಡುತ್ತಾರೆ ಈ ಎಲ್ಲ ಪ್ರಶ್ನೆಗಳೂ ನಿಮ್ಮಲ್ಲಿ ಹುಟ್ಟುವುದು ಸಹಜ, ಇಂದೇ ಹತ್ತಿರದ ಚಿತ್ರಮಂದಿರಕ್ಕೆ ತೆರಳಿ ಬಾಯ್ಸ್ ನೆವರ್ ಕಾಂಪ್ರಮೈಸ್ ಚಿತ್ರ ವೀಕ್ಷಿಸಿ, ಮನರಂಜನೆಯ ಜತೆಗೆ ಸಂದೇಶವನ್ನೂ ಹೊತ್ತು ಹೊರಬನ್ನಿ. ಚಿತ್ರದಲ್ಲಿ ಬಹುತೇಕ ಯೂಟ್ಯೂಬರ್ಸ್, ಕಾಮಿಡಿ ಕಿಲಾಡಿಗಳು ಕಲಾವಿದರೇ ಅಭಿನಯಿಸಿದ್ದು ಎಲ್ಲರ ಅಭಿನಯವೂ ಸಹಜವಾಗಿ ಮೂಡಿಬಂದಿದೆ. ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಆಗಿ ರಾಜೀವ್ ರೆಡ್ಡಿ, ಕಬಾಬ್ ಆಗಿ ಸಿದ್ದು ಮಂಡ್ಯ, ಕುಳ್ಳಿ ಆಗಿ ಕೋಲಾರ ಸೀನು ಹೀಗೆ ಎಲ್ಲರ ಅಭಿನಯ ಸಹಜವಾಗಿ ಮೂಡಿಬಂದಿದೆ.
ಎರಡನೇ ಭಾಗದಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಕಂಟೆಂಟ್ ಪ್ರಧಾನವಾಗಿದ್ದು, ಪ್ರೆಂಡ್ ಶಿಪ್, ಮನರಂಜನೆ ಮತ್ತು ಥ್ರಿಲ್ಲಿಂಗ್ ಕಂಟೆಂಡ್ ಇಷ್ಟಪಡೋರಿಗೆ ಬಾಯ್ಸ್ ನೆವರ್ ಕಾಂಪ್ರಮೈಸ್ ಒಂದು ಉತ್ತಮ ಆಯ್ಕೆ. ಲೋಕಿ ತವಸ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ಟೈಟಲ್ ಸಾಂಗ್ ಸದಾ ಗುನಗುವಂತಿದೆ, ವಿಶೇಷವಾಗಿ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೂ ಒಂದು ಪಾತ್ರವಾಗಿ ಸಾಗುತ್ತದೆ. ಎಂ.ಎಸ್.ತ್ಯಾಗರಾಜ್ ಅವರ ಬ್ಯಾಕ್‌ಗ್ರೌಂಡ್ ಸ್ಕೋರ್ ಚಿತ್ರಕಥೆಗೆ ಹೊಸ ರೂಪವನ್ನೇ ನೀಡಿದೆ, ಜತೆಗೆ ಚಿತ್ರದ ಛಾಯಾಗ್ರಹಣ ಕೂಡ ಅಷ್ಟೇ ಅದ್ಭುತವಾಗಿದೆ, ಮಡಿಕೇರಿ, ಸೋಮವಾರ ಪೇಟೆ ಸುತ್ತಮುತ್ತಲಿನ ನಿಸರ್ಗ ಸೌಂರ‍್ಯವನ್ನು ಛಾಯಾಗ್ರಾಹಕ ಪ್ರಮೋದ್ ಭಾರತೀಯ ಅವರು ಅದ್ಭುತವಾಗಿ ಸೆರೆಹಿಡಿದಿದ್ದಾರೆ.