Popular Posts

ಪರಿಸರ ಪ್ರೇಮಿಗಳ ಕಥೆ “ಸೋಲ್‌ಮೇಟ್ಸ್”

ಪರಿಸರ ರಕ್ಷಣೆಯ ಕಾನ್ಸೆಪ್ಟ್ ಒಳಗೊಂಡ, ಪಿ.ವಿ. ಶಂಕರ್ ಮೊಲದಬಾರಿಗೆ ನಿರ್ದೇಶನ ಮಾಡಿದಂಥ ಚಿತ್ರ ಸೋಲ್‌ಮೇಟ್ಸ್.
ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಪ್ರಥಮ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ನಾದಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಹಂಸಲೇಖ ಅವರೇ ರಚಿಸಿರುವ ಕಿಲ ಕಿಲ ಎಂಬ ಹಾಡಿಗೆ ಅನಿರುದ್ ಶಾಸ್ತಿ ಹಾಗೂ ಅಂಕಿತಾ ಕುಂಡು ದನಿಯಾಗಿದ್ದಾರೆ. ಪರಿಸರಪ್ರೇಮಿ ಎಂಬ ಟ್ಯಾಗ್‌ಲೈನ್ ಹೊಂದಿರೋ ಸೋಲ್‌ಮೇಟ್ಸ್ ಚಿತ್ರದಲ್ಲಿ ಶ್ರೀಜಿತ್ ಸೂರ್ಯ ಹಾಗೂ ಪ್ರಸನ್ನ ಶೆಟ್ಟಿ ನಾಯಕರಾಗಿ ನಟಿಸಿದ್ದು, ಯಶ್ವಿಕಾ ನಿಷ್ಕಲ ಹಾಗೂ ರಜನಿ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ, ನಿರ್ದೇಶಕ ಶಂಕರ್ ಹಾಗೂ ಜಿ.ಆರ್.ಅರ್ಚನಾ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಹಾಡನ್ನು ಬಿಡುಗಡೆ ಮಾಡಿದ ಫಿಲಂ ಚೇಂಬರ್ ಅಧ್ಯಕ್ಷ ಆರ್.ನರಸಿಂಹಲು ಮಾತನಾಡುತ್ತ ಸಿನಿಮಾ ನಿರ್ಮಿಸಿ, ಯಾರೂ ಸಹ ಹಣ ಕಳೆದುಕೊಳ್ಳಬಾರದು, ಚಿತ್ರನಿರ್ಮಾಣ ಮಾಡುವ ಪ್ರತಿಯೊಬ್ಬರನ್ನು ನಾನು ಪ್ರೋತ್ಸಾಹಿಸುತ್ತೇನೆ ಎನ್ನುತ್ತಾ ಚಿತ್ರಕ್ಕೆ ಶುಭ ಹಾರೈಸಿದರು. ಉತ್ತಮ ಶೀರ್ಷಿಕೆಯ ಸೋಲ್‌ಮೇಟ್ಸ್ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿ, ಉತ್ತಮ ಚಿತ್ರಗಳ ಸಾಲಿಗೆ ಇದೂ ಕೂಡ ಸೇರಲಿ ಎಂದು ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಶುಭ ಹಾರೈಸಿದರು.

ನಿರ್ದೇಶಕ ಶಂಕರ್ ಮಾತನಾಡುತ್ತ ನನಗೆ ಚಿಕ್ಕ ವಯಸ್ಸಿನಿಂದಲೇ ಸಿನಿಮಾ ನೋಡುವ ಹವ್ತಾಸ, ನಾನು ಮೊದಲು ನೋಡಿದ ಚಿತ್ರವೇ ಪುಟ್ನಂಜ, ಅಲ್ಲಿಂದಲೇ ನನಗೆ ಹಂಸಲೇಖಾರ ಸಂಗೀತದ ಮೇಲೆ ಪ್ರೀತಿ ಬೆಳೆಯಿತು, ಅದು ನನ್ನ ಮೊದಲ ಸಿನಿಮಾಕ್ಕೆ ಸಂಗೀತ ಸಂಯೋಜನ ಮಾಡಿಸುವವರೆಗೂ ಬಂದಿದೆ. ಅವರ ಕೈಲೇ ಮ್ಯೂಸಿಕ್ ಮಾಡಿಸಿದ್ದೇನೆ. ನಮ್ಮ ಚಿತ್ರದಲ್ಲಿ ಐದು ಸುಂದರ ಹಾಡುಗಳನ್ನು ಅವರು ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಒಬ್ಬ ಹುಡುಗ, ಹುಡುಗಿ ತಮ್ಮ ಸುತ್ತಲಿನ ಪರಿಸರವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಕುರಿತಾದ ಕಥೆಯನ್ನು ಹೇಳಿದ್ದೇವೆ, ಅದು ಈಗಿನ ಸಮಾಜಕ್ಕೆ ತುಂಬಾನೇ ಅವಶ್ಯಕವಾಗಿದೆ.

ಈಗಾಗಲೇ ನೇಚರ್‌ಲವ್ ಎಂಬ ಮತ್ತೊಂದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವನ್ನೂ ಮಾಡಿದ್ದು, ಅದನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡಲಿದ್ದೇವೆ ಎಂದು ಹೇಳಿದರು, ನಾಯಕ ಶ್ರೀಜಿತ್ ಶೆಟ್ಟಿ ಮಾತನಾಡುತ್ತ ಈ ಚಿತ್ರದಲ್ಲಿ ನಾನು ಸತ್ಯ ಎಂಬ ನೇಚರ್ ಲವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಹೆಸರಿಗೆ ತಕ್ಕಂತೆ ಆತ ಸತ್ಯವಂತ, ಅಲ್ಲದೆ ಮಹಾನ್ ಪರಿಸರಪ್ರೇಮಿ. ಸೋಲ್‌ಮೇಟ್ಸ್ ಅಂದ್ರೆ ಪರಿಸರ ಮತ್ತು ಅವನ ಹುಡುಗಿ, ಇಬ್ಬರೂ ಸೋಲ್ ಮೇಟ್ಸï‌ಗಳಾಗಿರುತ್ತಾರೆ ಎಂದು ಹೇಳಿದರು. ನಾಯಕಿ ನಿಷ್ಕಲ ಶೆಟ್ಟಿ ಮಾತನಾಡುತ್ತ ಮೃದು ಮನಸಿನ ಭೂಮಿ ಎಂಬ ಹುಡುಗಿಯಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಂಸಲೇಖಾ ಅವರ ಸಂಗೀತದ ಹಾಡುಗಳಲ್ಲಿ ನಾನು ಅಭಿನಯಿಸಿದ್ದು ನನ್ನ ಅದೃಷ್ಟ ಎಂದು ಹೇಳಿದರು.

ಮತ್ತೊಬ್ಬ ನಾಯಕ ನಟ ಪ್ರಸನ್ನ ಶೆಟ್ಟಿ ಮಾತನಾಡಿ ಮೂಲತ: ನಾನೊಬ್ಬ ರಂಗಭೂಮಿ ಕಲಾವಿದ, ಇದು ನನ್ನ ಎರಡನೇ ಸಿನಿಮಾ. ಚಿತ್ರದಲ್ಲಿ ನಾನು ಗೋಪಿ ಎಂಬ ಮುಗ್ಧ ಹಳ್ಳಿ ಹುಡುಗನ ಪಾತ್ರವನ್ನು ಮಾಡಿದ್ದೇನೆ ಎಂದು ಪಾತ್ರದ ಬಗ್ಗೆ ವಿವರಿಸಿದರು. ರವಿವರ್ಮ(ಗಂಗು) ಅವರ ಛಾಯಾಗ್ರಹಣ, ರಾಜೇಶ್‌ಭಗ್ನ ಅವರ ಸಂಭಾಷಣೆ ಈ ಚಿತ್ರಕ್ಕಿದೆ, ಸೋಲ್‌ಮೇಟ್ಸ್ ಚಿತ್ರದ ಉಳಿದ ತಾರಾಗಣದಲ್ಲಿ ಅಲ್ಮಾಸ್, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್‌ರಾವ್, ಅರುಣಾ ಬಾಲರಾಜï, ಅರಸು ಮಹಾರಾಜï, ಪ್ರಶಾಂತ್ ನಟನ, ಗೌತಮï, ತಾರಖ್ ಹಾಗೂ ನವೀನ್ ಡಿ.ಪಡೀಲ್ ಮುಂತಾದವರು ನಟಿಸಿದ್ದಾರೆ.

Leave a Reply

Your email address will not be published. Required fields are marked *