1
1
ಕಲಾವಿದರ ಬದುಕು, ಅವರ ಕಷ್ಟಗಳು, ಅವರನ್ನು ಸಮಾಜ ನೋಡುವ ರೀತಿ, ಎದುರಿಸುವ ಸವಾಲುಗಳು, ಇಂಥ ಅನೇಕ ವಿಷಯಗಳನ್ನು ಈವಾರ ತೆರೆಕಂಡಿರುವ ಟಾಸ್ ಚಿತ್ರದ ಮೂಲಕ ನಿರ್ದೆಶಕ ಅರ್ಜುನ್ ದೇವ್ ಹೇಳಲು ಪ್ರಯತ್ನಿಸಿದ್ದಾರೆ.
ಅಪ್ಪನಿಗೆ ಯಾರಾದರೂ ತೊಂದರೆ ಕೊಟ್ಟರೆ ಬಿಡಬೇಡ ಮಗಾ’ ಎಂದು ಅಮ್ಮ ಹೇಳಿದ ಮಾತನ್ನು ಅಕ್ಷರಶಃ ಪಾಲಿಸುವ ಮಗನ ಕಥೆ. ರಂಗಭೂಮಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕಲಾವಿದನ ಕುಟುಂಬದ ಕಥೆಯೂ ಹೌದು. ರಂಗಭೂಮಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪಕ್ಕಾ ಮಾಸ್, ಆಕ್ಷನ್ ಕಥೆಯನ್ನು ಪರಿಣಾಮಕಾರಿಯಾಗಿ ಅರ್ಜುನ್ ದೇವ್ ತೆರೆಯ ಮೇಲೆ ತಂದಿದ್ದಾರೆ,

ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೆಲ್ಲಾ ಅಂಶಗಳು ಬೇಕೋ ಅವನ್ನೆಲ್ಲಾ ಅತ್ಯಂತ ಶ್ರದ್ದೆಯಿಂದ ನಿರ್ದೇಶಕ ಅರ್ಜುನ್ ದೇವ್
ಪೋಣಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನವೀನ್ ಡಿ. ಪಡೀಲ್ ಭಾವನಾತ್ಮಕವಾಗಿ ನಟಿಸಿ ವೀಕ್ಷಕರ ಹೃದಯ ಗೆಲ್ಲುತ್ತಾರೆ.
ಮಂಗಳೂರು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಥೆಯಿದಾಗಿದ್ದು, ದಕ್ಷಿಣ ಕನ್ನಡ ಭಾಷೆಯನ್ನು ನೈಜವಾಗಿ ಬಳಸಿದ್ದಾರೆ. ರಂಗಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ರಂಗಕರ್ಮಿ ಆನಂದ್ ಮಾಸ್ಟರ್(ನವೀನ್ ಡಿ ಪಡೀಲ್), ಆತನ ಮಗ ಶಿವ(ಅರ್ಜುನ್‌ದೇವ್)ನಿಗೆ ಚಿಕ್ಕವನಿದ್ದಾಗಿಂದಲೇ ಮೂಗಿನ ತುದಿಯಲ್ಲಿ ಕೋಪ, ಆತನಿಗೆ ಸಿಟ್ಟು ಬಂದರೆ ಮನುಷ್ಯನೇ ಅಲ್ಲ, ತನ್ನ ತಂದೆ, ಆತನ ವೃತ್ತಿಯನ್ನು ಯಾರೇ ಹೀಯಾಳಿಸಿದರೂ ಅದಕ್ಕೆ ಶಿವ ಅಲ್ಲೇ ತಕ್ಕ ಉತ್ತರ ಕೊಡುತ್ತಾನೆ.
ಅಕ್ಕನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದ ಕಲಾವಿದ ಗುಣಕರ ಸ್ನೇಹಿತ ಚೇತನ್ ಜತೆ ನಾಟಕ ಮುಗಿಸಿಕೊಂಡು ರಾತ್ರಿ ಬೈಕಲ್ಲಿ ಮರಳುತ್ತಿದ್ದಾಗ ಶ್ರೀಮಂತ ಉದ್ಯಮಿ ಅಣ್ಣಾಜಿ (ಗರುಡಾರಾಮ್) ಸಹೋದರ ರೋಷನ್ ಕುಡಿದ ಮತ್ತಿನಲ್ಲಿ ಆತನ ಬೈಕ್ ಮೇಲೆ ಕಾರ್ ಹರಿಸಿದಾಗ ಗುಣಕರ ಸ್ಥಳದಲ್ಲೇ ಅಸುನೀಗುತ್ತಾನೆ, ಸ್ನೇಹಿತನ ಸಾವನ್ನು ವಿರೋಧಿಸಿ ಅಣ್ಣಾಜಿ ವಿರುದ್ದ ಪ್ರತಿಭಟನೆ ಮಾಡಿದ ಚೇತನ್ ಕೂಡ ಕೊಲೆಯಾಗುತ್ತಾನೆ, ತನ್ನ ಇಬ್ಬರೂ ಶಿಶ್ಯಂದಿರ ಕೊಲೆಯಾದಾಗ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಆನಂದ್ ಮಾಸ್ಟರನ್ನು ಅಣ್ಣಾಜಿ ಮನೆಗೆ ಕರೆಸಿಕೊಂಡು ಅವಮಾನಿಸಿ ಕಳಿಸುತ್ತಾನೆ, ಆಗ ಶಿವ ಊರಲ್ಲಿರುವುದೇ ಇಷ್ಟೆಲ್ಲ ದುರಂತಗಳಿಗೆ ಕಾರಣವಾಗುತ್ತದೆ. ವಿಷಯ ತಿಳಿದ ಶಿವ ಅಣ್ಣಾಜಿಯ ಮೇಲೆ ಹೇಗೆ ತನ್ನ ಸೇಡು ತೀರಿಸಿಕೊಳ್ಳುತ್ತಾನೆ, ಅಣ್ಣಾಜಿಯ ತಮ್ಮ ರೋಷನ್ ಕಥೆ ಏನಾಯಿತು, ಡಾ.ಸ್ವರ್ಣ(ಸುತೇಜ್ ಶೆಟ್ಟಿ)ಳನ್ನು ಲವ್ ಮಾಡಿದ ಶಿವ ಆಕೆಯನ್ನು ಮದುವೆಯಾದನೇ ಈ ಎಲ್ಲ ಪ್ರಶ್ನೆಗಳಿಗೆ ಟಾಸ್ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಉತ್ತರವಿದೆ, ಮಣಿಕಾಂತ ಕದ್ರಿ ಅವರ ಸಂಗೀತ ಈ ಚಿತ್ರದ ಹೈಲೈಟ್ ಎನ್ನಬಹುದು, ಅಪ್ಪಟ ಕರಾವಳಿ ಕುವರ ಅರ್ಜುನ್‌ದೇವ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಂದು ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ, ಸಾಹಸ ದೃಶ್ಯಗಳಲ್ಲಿ ಕನ್ನಡದ ಯಾವ ಸ್ಟಾರ್‌ಗೂ ಕಮ್ಮಿಯಿಲ್ಲದಂತೆ ಅಭಿನಯಿಸಿದ್ದಾರೆ, ಹಾಡುಗಳು ಮನಸಿಗೆ ಮುದ ನೀಡಿದರೆ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹೊಸ ರೂಪವನ್ನೇ ನೀಡಿದೆ.