Popular Posts

“ರೌಶಾಭಿ” ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ

ಚಿತ್ರರಂಗದಲ್ಲಿ ಇದೇ ಮೊದಲಬಾಗಿಗೆ ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ ಒಳಗೊಂಡ ’ರೌಶಾಬಿ’ ಎಂಬ ಚಿತ್ರ ನಿರ್ಮಾಣವಾಗಿ ತೆರೆಗೆ ಬರಲು ಸಿದ್ದವಾಗಿದೆ. ಸ್ಪೂರ್ತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಹಾವೇರಿ ಮೂಲದ ಉದ್ಯಮಿ ಶರಣಪ್ಪ ಅಂಗಡಿ ಅವರ ನಿರ್ಮಾಣದ ಈ ಚಿತ್ರಕ್ಕೆ ನಟ ಎಸ್.ಆರ್.ಪ್ರಮೋದ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಆರನೇ ಚಿತ್ರವಾಗಿದೆ.
ಇತ್ತೀಚೆಗೆ ರೌಶಾಭಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಡುಡಿಯೋದಲ್ಲಿ ನಡೆಯಿತು. ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಅವರ ಶಿಷ್ಯ ಆಯೂರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಾಯಕನಾಗಿ ಅಭಿನಯಿಸಿದ್ದಾರೆ. ಮಂಜು ಪ್ರೀತಿ, ರೇಖಾ ರಮೇಶ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಎಸ್.ಆರ್.ಪ್ರಮೋದ್ ಮತ್ತೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೈಸೂರು ಸೋಮು ಅವರ ಛಾಯಾಗ್ರಹಣ, ಕೆವಿನ್ ಅವರ ಹಿನ್ನೆಲೆ ಸಂಗೀತವಿದ್ದು, ಡಿಐ ಕಿಶೋರ್ ಕುಮಾರ್ ಅಕ್ಕನ, ಸ್ಟುಡಿಯೋ ಅನಿಲ್.ಸಿ.ಆರ್ ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪ್ರಮೋದ್, ಕಥೆಯಲ್ಲಿ ಒಂಬತ್ತು ರಸಗಳು ಇರುವುದರಿಂದ, ಪ್ರತಿಯೊಂದರಿಂದ ಒಂದು ಅಕ್ಷರ ತೆಗೆದುಕೊಂಡು ಚಿತ್ರದ ಶೀರ್ಷಿಕೆ ಇಡಬೇಕೆಂದುಕೊಂಡಿದ್ದೆವು. ಆದರದು ತುಂಬಾ ಉದ್ದ ಆದ ಕಾರಣ ಸಿನಿಮಾದ ಮೂರು ಪ್ರಮುಖ ಪಾತ್ರಗಳ ಮೊದಲ ಅಕ್ಷರವನ್ನು ಬಳಸಿಕೊಂಡು “ರೌಶಾಭಿ” ಎಂಬ ಟೈಟಲ್ ಇಟ್ಟಿದ್ದೇವೆ.

ರೌಡಿ ಪಾತ್ರಕ್ಕೆ ರೌದ್ರ ಅಂತಲೂ, ಶಾಲಿನಿ ಹೆಸರನ್ನು ಶಾಂತ ಎಂದು, ಹಾಗೆಯೇ ಬಿಂದು ಪಾತ್ರವನ್ನು ಭೀಬತ್ಸ್ಸ. ಈ ಮೂರು ಅಕ್ಷರ ಸೇರಿಸಿದರೆ ರೌಶಾಭಿ ಎಂದಾಗುತ್ತದೆ. ಇದಕ್ಕೆ ಬೇರೆ ಅರ್ಥ ಏನಿಲ್ಲ. ಮೈಸೂರು ಅಲ್ಲದೆ ನೆಲಮಂಗಲದ ರೆಸಾರ್ಟ್‌ವೊಂದರಲ್ಲಿ ಇಪ್ಪತ್ತು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಕಲಾವಿದರು, ತಂತ್ರಜ್ಞರು ಸಹಕಾರ ನೀಡಿದ್ದರಿಂದಲೇ ಚಿತ್ರ ಅಂದುಕೊಂಡ ಹಾಗೆ ಮೂಡಿಬಂದಿದೆ, ಚಿತ್ರವನ್ನು ಕಳೆದ ವರ್ಷ ಶುರು ಮಾಡಿದ್ದೆವು. ಇದೇ ತಿಂಗಳು ರಿಲೀಸ್ ಮಾಡುವ ಪ್ಲಾನಿದೆ ಎಂದು ಮಾಹಿತಿ ನೀಡಿದರು.
ನಂತರ ಎನ್ನಾರ್ಕೆ ವಿಶ್ವನಾಥ್ ಮಾತನಾಡುತ್ತ ಪ್ರಮೋದ್ ನಟನಾಗಲು ಬಂದವರು ನಿರ್ದೇಶಕರಾಗಿದ್ದಾರೆ. ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಅಂದ ಹಾಗೆ ರೌಶಾಭಿ ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *