1
1
Genzee ಕಥೆ ಹೊತ್ತು ಬಂದ ಬಾದಷಾ & ಶೋಮ್ಯಾನ್
ಅಕ್ಟೋಬರ್ 20ಕ್ಕೆ ಮುಹೂರ್ತ
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಟರ್ ಶೋ ಮ್ಯಾನ್ ಪ್ರೇಮ್ ನಿರ್ದೇಶನದ 10ನೇ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿದ್ದಾರೆ. ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ಜೋಗಿ ಪ್ರೇಮ್ ಈ ಅಚ್ಚರಿಯ ಉಡುಗೊರೆಯನ್ನ ಕನ್ನಡ ಚಿತ್ರರಸಿಕರಿಗೆ ನೀಡಿದ್ದಾರೆ.
ದಿ ವಿಲನ್ ಚಿತ್ರದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಜೋಡಿ, ಇದೀಗ ಮತ್ತೆ ಒಂದಾಗಿದೆ. ಈ ಸಲ ಕಿಚ್ಚನ ಜೊತೆಗೆ ಪ್ರೇಮ್ ಹೊಸ ಇತಿಹಾಸ ಸೃಷ್ಟಿಸಹೊರಟಿದ್ದಾರೆ.
ಪ್ರೇಮ್, ಸುದೀಪ್ ಜೋಡಿ ಸಿನಿಮಾದ ಮೊದಲ ನೋಟ ಮತ್ತು ಅದರ ಸಂಗೀತದ ಸೆಳೆತ ಕುತೂಹಲ ಹುಟ್ಟಿಸುತ್ತಿದೆ.

ಅಂದ್ಹಾಗೆ ಈಸಲ ಪ್ರೇಮ್ & ಕಿಚ್ಚ ಸೀರಿಯಸ್ ಆಗಿ ಇವತ್ತಿನ ಜನರೇಷನ್ ನ ಮನೆ ಮನೆಯ ಕಥೆಯನ್ನು ಕಲರ್ ಪುಲ್ಲಾಗಿ ಹೇಳಲು ಹೊರಟಿದ್ದಾರೆ.
ಸಂಬಂಧಗಳು.. ಭಾವೆನೆಗಳ ಕಥೆಯನ್ನ ಹೆಣೆಯೋದರಲ್ಲಿ, ಮ್ಯೂಸಿಕಲಿ ಅದನ್ನ ನಿರೂಪಿಸೋದರಲ್ಲಿ ಪ್ರೇಮ್ ಅಕ್ಷರಶಃ ನಿಪುಣರು. ಇನ್ನು ಎಮೋಷನ್, ಆ್ಯಕ್ಷನ್ ಕ್ಲಾಸಿ ಲುಕ್ಕಿಗೆ ಕೇರ್ ಆಫ್ ಅಡ್ರೆಸ್ ಕಿಚ್ಚ, ಈ ಜನರೇಷನ್ ಹುಡುಗರಿಗೂ ಹಾಟ್ ಫೇವರೀಟ್ ಸುದೀಪ್ , ಈ ಎರಡೂ ಮನಸುಗಳು ಐಡಿಯಾಗಳು ಒಂದಾಗಿರೋದು ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಊಹೆಗೂ ನಿಲುಕದ ವಿಶೇಷ ಸಹಯೋಗಗಳೊಂದಿಗೆ ನಿರ್ದೇಶಕ ಪ್ರೇಮ್ ಬರ್ತಿದ್ದಾರೆ. ಅಕ್ಟೋಬರ್ 20ರಿಂದ ಹೊಸ ಅಧ್ಯಾಯಕ್ಕೆ ಕಿಚ್ಚ ಮತ್ತು ಪ್ರೇಮ್ ಮುನ್ನುಡಿ ಬರೆಯಲಿದ್ದಾರೆ.