Popular Posts

“ಲಾಕ್ ಡೌನ್ 21 ಡೇಸ್” 21 ದಿನಗಳಲ್ಲಿ ಅರಳಿದ ಪ್ರೇಮಕಥೆ

ಕರೊನಾ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿತ್ತು, ಆ 21 ದಿನಗಳ ಲಾಕ್ಡೌನ್ ಪ್ರತಿಯೊಬ್ಬರ ಜೀವನದಲ್ಲೂ ದೊಡ್ಡ ಆರ್ಥಿಕ ಹೊಡೆತ ಹಾಗೂ ಗೊಂದಲಗಳನ್ನು ಸೃಷ್ಟಿಸಿತ್ತು. ಸಾಮಾನ್ಯ ಜನರ ಬದುಕು-ಬವಣೆ ಹಾಗೂ ಅವರು ಎದುರಿಸಿದ ಸವಾಲುಗಳನ್ನಿಟ್ಟುಕೊಂಡು ನಿರ್ದೇಶಕರಾದ ಮಧುಮೋಹನ್ ಮತ್ತು ಮಾಚಯ್ಯ ಚಿತ್ರಕಥೆಯೊಂದನ್ನು ರೆಡಿ ಮಾಡಿದ್ದಾರೆ, ‘ಲಾಕ್ಡೌನ್ 21 ಡೇಸ್’ ಎಂಬ ಶೀರ್ಷಿಕೆಯಡಿ ಅದನ್ನು ತೆರೆಮೇಲೆ ತರಲು ತರಲುದ್ದಾರೆ,

ಇತ್ತೀಚೆಗೆ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ನಮ್‌ಗಣಿ ಖ್ಯಾತಿಯ ಅಭಿಷೇಕ್ ಶೆಟ್ಟಿ ಮುಹೂರ್ತ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಈ ಹಿಂದೆ ಕೆಲ ಕಿರುಚಿತ್ರಗಳನ್ನು ಮಾಡಿದ್ದ ಮಧು ಮೋಹನ್ ಮತ್ತು ಭುವನ್ ಮಾಚಯ್ಯ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಅನಿಲ್ ಸಿಕೆ, ಪ್ರಿಯಾಂಕಾ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ,

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರು ಸಿನಿಮಾ ನಿರ್ದೇಶನ ನನ್ನ ಕನಸು. ಲಾಕ್‌ಡೌನ್ ವೇಳ ನಡೆದ ಹಲವಾರು ಕೌತುಕ ಘಟನೆಗಳನ್ನು ಇಟ್ಟುಕೊಂಡು ಈ ಪ್ರೇಮಕಥೆ ಹೆಣೆದಿದ್ದೇನೆ ಎಂದು ಹೇಳಿದರು, ನಾಯಕ ಅನಿಲ್ ಮಾತನಾಡಿ ಲಾಕ್‌ಡೌನ್ ಟೈಮಲ್ಲಿ ಏನೆಲ್ಲ ಅವಾಂತರ ಆಯಿತು, ಅಗ ಒಂದು ಪ್ರೀತಿ ಹೇಗೆ ಹುಟ್ಟಿತು ಎಂಬುದನ್ನು 12ರಿಂದ 15 ಪಾತ್ರಗಳ ಮೂಲಕ ಹೇಳಹೊರಟಿದ್ದೇವೆ, 70% ಕಥೆ ಒಂದು ಮನೆಯಲ್ಲೇ ನಡೆದರೆ, ಮೈಸೂರು ಟು ಮಂಗಳೂರು ಜರ್ನಿಯಲ್ಲಿ 30% ಕಥೆ ನಡೆಯುತ್ತದೆ ಎಂದು ಹೇಳಿದರು, ಇಡೀ ದೇಶವೇ ಸ್ತಬ್ಧವಾಗಿದ್ದ 21 ದಿನಗಳ ಕಠಿಣ ಲಾಕ್ಡೌನ್ ಸಮಯದಲ್ಲಿ ಅರಳುವ ಒಂದು ಸುಂದರ ಪ್ರೇಮಕಥೆ ಹಾಗೂ ಮಾನವ ಸಂಬಂಧಗಳ ಗಟ್ಟಿತನದ ಕಥೆಯನ್ನು ಈ ಚಿತ್ರಕ್ಕಾಗಿ ನಿರ್ದೇಶಕದ್ವಯರು ಹೆಣೆದಿದ್ದಾರೆ. ಅರುಣಾ ಯಾದವ್ ಫಿಲಂಹೌಸ್ ಬ್ಯಾನರ್ ಅಡಿಯಲ್ಲಿ ಮೈಸೂರಿನ ಅರುಣಾ ಯಾದವ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅನಿಲ್ ಸಿ.ಕೆ, ಅರುಣ ಯಾದವ್, ಪ್ರಿಯಾಂಕಾ, ಮಂಜು ನಂಜನಗೂಡು, ಎಂ.ಕೆ.ಮಠ ಹಾಗೂ ಚಂದನ್‌ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

Leave a Reply

Your email address will not be published. Required fields are marked *