Popular Posts

ಸೂಪರ್‌ ಯೋಧನಾಗಿ ತೇಜ್‌ ಸಜ್ಜಾ ಎಂಟ್ರಿ! ಆಕ್ಷನ್‌ ಪ್ಯಾಕ್ಡ್‌ ʼಮಿರಾಯ್‌ʼ ಟೀಸರ್‌ ರಿಲೀಸ್!‌

ಯುವನಟ ತೇಜ್‌ ಸಜ್ಜಾ ಹನುಮಾನ್‌ ಚಿತ್ರದ ಯಶಸ್ಸಿನ ಬಳಿಕ ನಟಿಸುತ್ತಿರುವ ಮತ್ತೊಂದು ಚಿತ್ರ ʼಮಿರಾಯ್ʼ. ಹನುಮಾನ್‌ನಲ್ಲಿ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ತೇಜ್‌ ಮತ್ತೊಮ್ಮೆ ಸೂಪರ್‌ ಹೀರೋ ಆಗಿಯೇ ಅಬ್ಬರಿಸಲಿದ್ದಾರೆ. ತೇಜ್‌ ಸಜ್ಜಾ ನಟನೆಯ ಮಿರಾಯ್‌ ಚಿತ್ರದ ಟೀಸರ್‌ ಇತ್ತೀಚೆಗೆ ರಿಲೀಸ್‌ ಆಗಿ ಸದ್ದು ಮಾಡುತ್ತಿದೆ. ಆಕ್ಷನ್‌ ಪ್ಯಾಕ್ಡ್‌ ಥ್ರಿಲ್ಲಿಂಗ್‌ ಟೀಸರ್‌ ಸಿನಿರಸಿಕರಿಗೆ ಕಿಕ್‌ ಕೊಟ್ಟಿದೆ. ಈ ಚಿತ್ರದಲ್ಲಿ ಸೂಪರ್‌ ಯೋಧನಾಗಿ ತೇಜ್‌ ಅಭಿನಯಿಸಿದ್ದು, ಖಳನಾಯಕನಾಗಿ ಮನೋಚ್‌ ಮಂಚು ತೊಡೆ ತಟ್ಟಿದ್ದಾರೆ. ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಗೆ ಆಧುನಿಕ ಸಾಹಸದ ಟಚ್‌ ಕೊಟ್ಟು ಮಿರಾಯ್‌ ಚಿತ್ರದ ಟೀಸರ್‌ ಕಟ್‌ ಮಾಡಲಾಗಿದೆ.

ಮಿರಾಯ್ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ತುಂಬಿವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರವು 2D ಮತ್ತು 3D ಫಾರ್ಮ್ಯಾಟ್ ನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದೇ ವರ್ಷ ಆಗಸ್ಟ್-1 ರಂದು ಮಿರಾಯ್ ತೆಲುಗು, ಕನ್ನಡ, ತಮಿಳು ಸೇರಿದಂತೆ 8 ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಮೂಲಕ ನಾಯಕ ತೇಜ್ ಸಜ್ಜಾ ಮತ್ತೊಮ್ಮೆ ಅಭಿಮಾನಿಗಳಿಗೆ ಹೊಸ ಅನುಭವ ಕೊಡಲು ಬರ್ತಿದ್ದಾರೆ.

Tej Sajja

ಮಿರಾಯ್ ಸಿನಿಮಾದ ಮೂಲಕ ನಾಯಕ ನಟ ತೇಜ್ ಸಜ್ಜಾ ಮತ್ತೆ ಸೂಪರ್ ಹೀರೋ ಆಗಿಯೇ ಬರ್ತಿದ್ದಾರೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧಾ ಪಾತ್ರದಲ್ಲಿ ತೇಜ್ ಸಜ್ಜಾ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Leave a Reply

Your email address will not be published. Required fields are marked *