1
1
ತಂದೆ, ತಾಯಿ ಮಗನ ಸುತ್ತ ನಡೆಯುವ ಎಮೋಷನಲ್ ಜರ್ನಿ…
ಹೊಂದಿಸಿ ಬರೆಯಿರಿ ಚಿತ್ರದ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರೀಗ ಎಮೋಷನಲ್ ಕಥೆಯನ್ನು ತೀರ್ಥರೂಪ ತಂದೆಯವರಿಗೆ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಜನವರಿ 1 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಸುಂದರ ಕುಟುಂಬದಲ್ಲಿ ನಡೆದ ಒಂದು ಘಟನೆ ಆ ಕುಟುಂಬವನ್ನು ಎಷ್ಟು ದೂರದವರೆಗೆ ಕೊಂಡೊಯ್ಯುತ್ತದೆ. ಸಂಬಂಧಗಳನ್ನು ಛಿದ್ರ ಛಿದ್ರ ಮಾಡುತ್ತದೆ, ಅದು ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಜೊತೆಗೆ ತಂದೆ ತಾಯಿಯ ಮೌಲ್ಯವನ್ನು ಸಾರುವ ಕಂಟೆಂಟ್ ಚಿತ್ರದಲ್ಲಿದೆ. ಕಥೆಗೆ ಚಿತ್ರಕ್ಕೆ ತೀರ್ಥರೂಪ ತಂದೆಯವರಿಗೆ ಟೈಟಲ್ಇಟ್ಟಿದ್ದಾರೆ.
ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಸಿತಾರಾ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ನನ್ನ ಪಾತ್ರ ಇಷ್ಟವಾಗುತ್ತದೆ. ಕಥೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ನಾನು ನನ್ನ ಕನಸು ಆದಮೇಲೆ ರಾಜೇಶ್ ನಟರಂಗ ಅವರ ಜೊತೆ ನಟಿಸಿದ್ದೇನೆ ಎಂದು ಹೇಳಿದ್ದಾರೆ.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ ಥಿಯೇಟರ್ ಗೆ ಪ್ರೇಕ್ಷಕರನ್ನು ಆಕರ್ಷಿಸಲು ಟೈಟಲ್ ಬಹಳ ಮುಖ್ಯ ಅಲ್ಲದೆ ಜನರಿಗೆ ಹತ್ತಿರವಾಗಿರಬೇಕು, ಹಾಗೂ ಕಥೆಗೆ ಹೊಂದಿಕೊಳ್ಳುವಂತಿರಬೇಕು ಎಂಬ ಕಾರಣಕ್ಕೆ ಇದೇ ಟೈಟಲ್ ಇಟ್ಟಿದ್ದೇವೆ. ನಾಯಕನ ಹುಡುಕಾಟದಲ್ಲಿ ಕೊನೆಗೆ ಏನು ಸಿಗಲಿದೆ ಎನ್ನುವುದು ಚಿತ್ರದ ಆಶಯ. ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಎಲ್ಲಾ ಪಾತ್ರಗಳು ಸಹಜವಾಗಿ, ಉತ್ತಮವಾಗಿ ಮೂಡಿಬಂದಿದೆ ಎಂದರು.
ಚಿತ್ರದ ನಾಯಕ ನಿಹಾರ್ ಮುಖೇಶ್, ಮೂಲತಃ ಮೈಸೂರು ಪ್ರತಿಭೆ. ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪರಿಚಯ. ತುಂಬಾ ಎಮೋಷನ್ ಇರುವ ನಾಯಕ ಪೃಥ್ವಿಯ ಪಾತ್ರ ಅವರದು. ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ರಾಜೇಶ್ ನಟರಂಗ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ. ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ರಾಮೇನಹಳ್ಳಿ ಜಗನ್ನಾಥ್ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ನಿರ್ಮಿಸಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ರವಿಚಂದ್ರ ಎ.ಜೆ ಈ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ.

‘ತೀರ್ಥರೂಪ ತಂದೆಯವರಿಗೆ’ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ ತೆಲುಗು ಆವೃತ್ತಿಯು ‘ಪ್ರಿಯಮೈನ್ ನಾನಾಕು’ ಎಂಬ ಶೀರ್ಷಿಕೆಯೊಂದಿಗೆ ರಿಲೀಸ್ ಆಗಲಿದೆ. ಚಿತ್ರಕ್ಕೆ ದೀಪಕ್ ಯರಗೇರಾ ಅವರ ಛಾಯಾಗ್ರಹಣ, ಜೋ ಕಾಸ್ಟ್ ಸಂಗೀತ ಸಂಯೋಜನೆ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಜನವರಿ 1ರಂದು ಚಿತ್ರ ಬಿಡುಗಡೆ
ತೀರ್ಥರೂಪ ತಂದೆಯವರಿಗೆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜನವರಿ 1ರಂದು ಸಿನಿಮಾವನ್ನು ಚಿತ್ರಮಂದಿರಗಳಿಗೆ ತರಲು ಚಿತ್ರತಂಡ ಸಜ್ಜಾಗಿದೆ. ಇಡೀ ಕುಟುಂಬ ಕುಳಿತು ನೋಡುವ ಕಾಡುವ ಕಥೆಯನ್ನು ರಾಮೇನಹಳ್ಳಿ ಜಗನ್ನಾಥ್ ತೀರ್ಥರೂಪ ತಂದೆಯವರಿಗೆ ಚಿತ್ರದ ಮೂಲಕ ಹೇಳಲಿದ್ದಾರೆ. ಹೊಸ ವರ್ಷವನ್ನು ಹೊಸ ಕಥೆಯೊಂದಿಗೆ ಪ್ರೇಕ್ಷಕರು ಸ್ವಾಗತ ಮಾಡಲಿದ್ದಾರೆ.