1
1
ರೀಡರ್ಸ್ ಚಾಯ್ಸ್ ಪ್ರಶಸ್ತಿ ವಿಜೇತೆ ಶರ್ಮಿಳಾ ಮಾಂಡ್ರೆ ಅವರಿಂದ ಸದ್ಯದಲ್ಲೇ ಕನ್ನಡ ಚಿತ್ರ ಘೋಷಣೆ.
ಶರ್ಮಿಳಾ ಮಾಂಡ್ರೆ ಎಂದೊಡನೆ ನಮಗೆಲ್ಲ ನೆನಪಾಗುವುದೇ ಕಣ್ ಕಣ್ಣ ಸಲಿಗೇ ಹಾಡು. ನವಗ್ರಹ ರಿಲೀಸಾಗಿ 15 ವರ್ಷಗಳೇ ಕಳೆದಿದ್ದರೂ, ಇವತ್ತಿಗೂ ಆ ಹಾಡು ಜನಜನಿತ. ಅದರಲ್ಲಿದ್ದ ಮುದ್ದಾದ ಜೋಡಿ ಧರ್ಮ ಕೀರ್ತಿರಾಜ್ ಹಾಗೂ ಶರ್ಮಿಳಾರನ್ನು ಯಾರೂ ಮರೆತಿಲ್ಲ. ಅಂದಿನಿAದ ಇಂದಿನವರೆಗೆ ನಾಯಕಿಯ ಪಟ್ಟ ಉಳಿಸಿಕೊಂಡ ಅಪರೂಪದ ನಟಿಯರಲ್ಲಿ ಶರ್ಮಿಳಾ ಮಾಂಡ್ರೆ ಕೂಡ ಒಬ್ಬರು. ಇದೀಗ ಶರ್ಮಿಳಾ ಮಾಂಡ್ರೆ ಅವರಿಗೆ ಚಿತ್ತಾರ ಪತ್ರಿಕೆ ನೀಡುವ ಓದುಗರ ಮೆಚ್ಚಿನ ಆಯ್ಕೆಯಾದ ರೀಡರ್ಸ್ ಚಾಯ್ಸ ಪ್ರಶಸ್ತಿ ಲಭಿಸಿದೆ.

ಮೂಲತಃ ಬೆಂಗಳೂರಿನವರೇ ಆದ ಶರ್ಮಿಳಾ ಮಾಂಡ್ರೆ ಕುಟುಂಬದಲ್ಲಿ ಈಕೆಯೇ ಪ್ರಥಮ ಕಲಾವಿದೆ. ಆದರೆ ಸಿನಿಮಾರಂಗ ಇವರಿಗೆ ಹೊಸದೇನೂ ಅಲ್ಲ. ತಂದೆ ದಯಾನಂದ ಮಾಂಡ್ರೆ ಒಬ್ಬ ಬಿಜಿನೆಸ್‌ಮ್ಯಾನ್. ಆದರೆ ತಾತ ನಾರಾಯಣರಾವ್ ಮಾಂಡ್ರೆ ನಿರ್ಮಾಪಕರು, ವಿತರಕರು ಹಾಗೂ ಬೆಂಗಳೂರಿನ ಸಂಗಮ್ ಚಿತ್ರಮಂದಿರದ ಮಾಲೀಕರೂ ಹೌದು. ಇವರ ಸಹೋದರತ್ತೆ ಸುನಂದಾ ಮುರಳೀಮನೋಹರ್ ಕೂಡ ನಿರ್ಮಾಣದಲ್ಲಿ ಹೆಸರು ಮಾಡಿದ್ದರು. ೨೦೦೭ರಲ್ಲಿ ತೆರೆಕಂಡ ಸಜಿನಿ ಶರ್ಮಳಾ ಮಾಂಡ್ರೆ ಅಭಿನಯದ ಪ್ರಥಮ ಚಿತ್ರ. ಮೊದಲ ಚಿತ್ರದ¯್ಲೆ ಲೆಜೆಂಟರಿ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ ಸಂಗೀತದ ಹಾಡುಗಳಿದ್ದವು, ರಮೇಶ್ ಅರವಿಂದ್ ನಿರ್ದೇಶನದ ವೆಂಕಟ ಇನ್ ಸಂಕಟ, ಅಲ್ಲರಿ ನರೇಶ್ ನಟನೆಯ ಕೆವ್ವು ಕೇಕ ಸಿನಿಮಾದಲ್ಲೂ ಇವರು ನಟಿಸಿದರು. ಚೊಚ್ಚಲ ಚಿತ್ರದಲ್ಲೇ ಸೈಮಾ ಅವಾರ್ಡ್ ಪಡೆದಿದ್ದ ಶರ್ಮಿಳಾ ಮಾಂಡ್ರೆ ಈಗ ಮತ್ತೊಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ, 2017ರಲ್ಲಿ ತೆರೆಕಂಡ ಆಕೆ ಚಿತ್ರದಲ್ಲಿ ಶರ್ಮಿಳಾ ಸಿಂಗಲ್‌ಮದರ್ ಪಾತ್ರ ನಿರ್ವಹಿಸಿದ್ದರು. ಮೂಲ ಚಿತ್ರದಲ್ಲಿ ನಯನತಾರಾ ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಅದಕ್ಕಿಂತಲೂ ಚೆನ್ನಾಗಿ ನಿರ್ವಹಿಸಿದ ಶರ್ಮಿಳಾ ಮಾಂಡ್ರೆ ವಿಮರ್ಶಕರ ಮನ ಗೆದ್ದಿದ್ದರು.
ನಿರ್ಮಾಣ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಶರ್ಮಿಳಾ ಮಾಂಡ್ರೆ ತಮಿಳಿನಲ್ಲಿ ಇವನಕ್ಕು ಎಂಗಯೋ ಮಚ್ಚಂ ಇರುಕ್ಕ್ ಮತ್ತು ನಾನುಂ ಸಿಂಗಲ್ ತಾನ್ ಚಿತ್ರಗಳನ್ನು ನಿರ್ಮಿಸಿದರು. ಸ್ವಲ್ಪ ಗ್ಯಾಪ್ ತಗೊಂಡಿದ್ದ ಇವರು ನಂತರ ಗಾಳಿಪಟ 2 ಚಿತ್ರದಿಂದ ಮತ್ತೆ ನಾಯಕಿಯಾಗಿ ಕಾಣಿಸಿಕೊಂಡರು. 2 ವರ್ಷಗಳ ಹಿಂದೆ ತೆರೆಕಂಡ ಮಂಡಲ ಚಿತ್ರದಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿಯೂ ನಟಿಸಿದ್ದರು,
ಕಳೆದ ವರ್ಷ ತೆರೆಕಂಡ ಪೌಡರ್ ಚಿತ್ರದಲ್ಲಿ ಮತ್ತೊಮ್ಮೆ ದಿಗಂತ್ ಜೋಡಿಯಾಗಿದ್ದ ಶರ್ಮಿಳಾ, ಈ ವರ್ಷ ನೀನಾಸಂ ಸತೀಶ್ ಜತೆಗಿನ ದಸರಾ ಚಿತ್ರದಲ್ಲಿ ನಟಿಸಲು ಅಣಿಯಾಗಿದ್ದಾರೆ. ಮುಖ್ಯವಾಗಿ ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಅವರು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು. ಚಿತ್ರತಂಡ ಅದಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಅವರ ಪಾತ್ರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ಈ ವರ್ಷ ಶರ್ಮಳಾ ಮಾಂಡ್ರೆ ಅವರು ತಮ್ಮ ಹೋಮ್ ಬ್ಯಾನರ್ ಮೂಲಕ ಹೊಸ ಸಿನಿಮಾ ಮಾಡುವ ಪ್ಲಾನ್ ನಡೆಯುತ್ತಿದ್ದು, ಸದ್ಯದಲ್ಲೇ ಅವರು ಅಭಿಮಾನಿಗಳಿಗೆ ಬಿಗ್ ಸರ್ ಪ್ರೈಸ್ ನೀಡಲಿದ್ದಾರೆ, ತಾವೇ ಸ್ವತಃ ನಿರ್ಮಾಪಕರಾಗಿರುವ ಕಾರಣ ಕಥೆಗೆ ಹೆಚ್ಚು ಒತ್ತು ಕೊಟ್ಟು, ಸಿನಿಮಾ ಮಾಡುವುದಾಗಿ ಶರ್ಮಿಳಾ ಮಾಂಡ್ರೆ ಅವರು ತಿಳಿಸಿದ್ದಾರೆ.