1
1

ವರ್ಷಾಂತ್ಯಕ್ಕೆ ತೆರೆಗೆ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಮೇಲೆ ಭಾರೀ ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಚಿತ್ರ ಗಮನ. ಸೆಳೆದಿದೆ. ಡೆವಿಲ್ ಚಿತ್ರದಲ್ಲಿ ಕರಾವಳಿ ಬೆಡಗಿ ರಚನಾ ರೈ ದರ್ಶನ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ರಚನಾ ರೈ ಈಗ ಪ್ರತಿಷ್ಠಿತ ‘ಆಭರಣ್’ ಮಳಿಗೆಯ ರಾಯಭಾರಿಯಾಗಿದ್ದಾರೆ. ನವರತ್ನ ಆಭರಣದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ ರಚನಾ ರೈ. ಈಗಾಗಲೇ ತುಳು ಚಿತ್ರಗಳಲ್ಲಿ ಅಭಿನಯದಲ್ಲಿ ಸೈ ಎನಿಸಿಕೊಂಡಿರುವ ಈಕೆ ತಮ್ಮ ಮೊದಲ ಕನ್ನಡ ಸಿನಿಮಾ ಬಿಡುಗಡೆಗೂ ಮೊದಲೇ ಪ್ರತಿಷ್ಠಿತ ಆಭರಣದ ರಾಯಭಾರಿಯಾಗಿದ್ದಾರೆ.