1
1
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ವಿಭಿನ್ನ ಕತೆಯ ಚಿತ್ರ ಲೈಫ್ ಟುಡೇ, ಹೊಥರದ ಪ್ರೇಮಕಥಾನಕ ಇರುವ ಈ ಚಿತ್ರವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕೆ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಕಾಂತ ಕನ್ನಲ್ಲಿ ಕಥೆ ಚುತ್ರಕಥೆ ಬರೆದು ಆಕ್ಷನ್ ಕಟ್ಹೇಳಿದ್ದಾರೆ. ನಟ ಕಿರಣ್ ಆದಿತ್ಯ ಚಿತ್ರದ ನಾಯಕನಾಗಿ ನಟಿಸಿದ್ದು, ನಾಯಕಿ ಪಾತ್ರದಲ್ಲಿ ಲೇಖಾ ಚಂದ್ರ ಅವರು ಅಭಿನಯಿಸಿದ್ದಾರೆ. ತಮಿಳು ವರ್ಷನ್ ಹಾಡಿಗೆ ಜೀವಿ ಪ್ರಕಾಶ್ ಅವರು ದನಿಯಾಗಿದ್ದು, ಅದೇ ಹಾಡಿನ ಕನ್ನಡ ಅವತರಣಿಕೆ ಸಿಕ್ಕರೇ.. ಸಿಕ್ಕರೇ… ಒಳ್ಳೆ ಹುಡುಗ್ರು ಸಿಕ್ಕರೇ… ಸಾಂಗನ್ನು ನಿರ್ದೇಶಕ ಜೋಗಿ ಪ್ರೇಮ್ ಅವರು ಹಾಡಿದ್ದಾರೆ. ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ಸಂಯೋಜನೆ, ರಾಮ್ ನಾರಾಯಣ್ ಅವರ ಸಾಹಿತ್ಯವಿರೋ ಈ ಹಾಡನ್ನ ಪ್ರೇಮ್ ಅದ್ಭುತವಾಗಿ ಹಾಡಿದ್ದಾರೆ. ಈ ಹಾಡು ಕೇಳಿದ ಪ್ರೇಮ್, ಇದು ಖಂಡಿತ ಸೂಪರ್ ಹಿಟ್ ಸಾಂಗ್ ಆಗುತ್ತೆ ಎಂದು ಅಭಿಪ್ರಾಯಿಸಿದ್ದರು.
ಇತ್ತೀಚೆಗೆ ಪ್ರೇಮ್, ಹಾಡೋದಕ್ಕೆ 5 ಲಕ್ಷ ತಗೋತಾರೆ ಅನ್ನೋ ಸುದ್ದಿ ಹರಡಿತ್ತು. ಅದರ ಬೆನ್ನಲ್ಲೇ ಲೈಫ್ ಟುಡೇ ಚಿತ್ರಕ್ಕೆ ಹಾಡಿರುವ ಪ್ರೇಮ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ ನಾನು ಹಾಡಲು 10 ಲಕ್ಷನೂ ಕೇಳ್ತೀನಿ.. ಮುಂಬೈಯವರಿಗಾದ್ರೆ ಕೊಡ್ತೀರಿ, ಕನ್ನಡಿಗರಿಗೆ ಯಾಕೆ ಕೊಡಲ್ಲ ಎಂದು ಪ್ರಶ್ನಿಸಿ, ಜೊತೆಗೆ ನಾನು ಹಾಡೋ ಹಾಡಿನ ಸಂಭಾವನೆ ಒಂದು ಟ್ರಸ್ಟ್ ಗೆ ಸೇರುತ್ತೆ. ಅಮ್ಮನ ಟ್ರಸ್ಟ್ ಮೂಲಕ ಅದು ಅನೇಕ ಸಾಮಾಜಿಕ ಸೇವೆಗಳಿಗೆ ಬಳಕೆಯಾಗುತ್ತೆ ಎಂದು ಸಮರ್ಥನೆ ಮಾಡಿಕೊಂಡರು.

ನಂತರ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮಾತನಾಡುತ್ತ ಜೋಗಿ ಪ್ರೇಮ್ ಅವರು ನಮ್ಮ ಸಾಂಗ್ ಹಾಡೋಕೆ ಸಿಕ್ಕೊರೋದೇ ನಮ್ಮ ಪುಣ್ಯ, ನಾನು ಅವರ ಬಹುದೊಡ್ಡ ಅಭಿಮಾನಿ. ಅವರ ದನಿಯಲ್ಲಿರೋ ಮುಗ್ಧತೆ ಮತ್ತು ನೋವಿನ ಗಾಢತೆ. ಈ ಹಾಡಿಗೆ ಬೇಕಿತ್ತು, ಅದು ಈಗ ಸಿಕ್ಕಿದೆ. ಖಂಡಿತ ಲೈಫ್ ಟುಡೇ ಆಲ್ಪಂ ದೊಡ್ಡ ಹಿಟ್ ಆಗುತ್ತೆ ಅನ್ನೋ ಭರವಸೆಯಿದೆ ಎಂದರು.
ನಂತರ ಚಿತ್ರದ ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು. ನಿರ್ಮಾಪಕ ಪ್ರದೀಪ್, ನಾಯಕ ಕಿರಣ್ ಆದಿತ್ಯ ಎಲ್ಲರೂ ಚಿತ್ರದ ವಿಶೇಷತೆಗಳ ಕುರಿತಂತೆ ಮಾಹಿತಿ ನೀಡಿದರು. ಹಾಗೇ ಈ ಚಿತ್ರವು ಈಗಿನ ಜನರೇಷನ್ ಮೆಚ್ಚುವಂತಹ ಯೂಥ್ ಫುಲ್ ಕಂಟೆಂಟ್ ಮತ್ತು ಎಂಟರ್ ಟೈನ್ಮೆಂಟ್ ಅಂಶಗಳನ್ನು ಒಳಗೊಂಡಿದೆ ಎಂದರು.
ಲೈಫ್ ಟುಡೇ ಚಿತ್ರದಲ್ಲಿ ಕಿರಣ್ ಆದಿತ್ಯ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ಲೇಖಚಂದ್ರ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಥರ್ವ, ತಬಲನಾಣಿ, ಅಪೂರ್ವ, ಕಾಕ್ರೋಚ್ ಸುಧಿ ಮತ್ತು ಜಗ್ಗಪ್ಪ ಇತರೆ ತಾರಾಗಣದಲ್ಲಿದ್ದಾರೆ. ಗುರುಪ್ರಸಾದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರೇಮ್ ಅವರ ಹಾಡಿನೊಂದಿಗೆ ಪ್ರಚಾರಕ್ಕೆ ಚಾಲನೆ ಕೊಟ್ಟಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳನ್ನು ಒಂದೊಂದಾಗಿ ಹಂಚಿಕೊಳ್ಳುವ ಜೊತೆಗೆ ಚಿತ್ರದ ರಿಲೀಸ್ ಸಿದ್ದತೆಗಳನ್ನೂ ಸಹ ಮಾಡಿಕೊಳ್ಳಲಿದೆ.