Popular Posts

ಧರ್ಮ ಕೀರ್ತಿರಾಜ್ ಅಭಿನಯದ ‘ಬ್ಲಡ್ ರೋಸಸ್’ glimps ನಟ ಸುಮನ್ ರಿಲೀಸ್

ಬಿಗ್ ಬಾಸ್‌ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಇದೀಗ ಬ್ಲಡ್ ರೋಸಸ್ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ‌ ಕೊಟ್ಟಿದ್ದಾರೆ. ಪ್ರಚಾರದ ಎರಡನೇ ಹಂತವಾಗಿ ಈ ಚಿತ್ರದ ಗ್ಲಿಂಪ್ಸ್ ನ್ನು ಟಾಲಿವುಡ್ ನ ಕನ್ನಡ ಪ್ರತಿಭೆ ಸುಮನ್ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬ್ಲಡ್ ರೋಸಸ್ ಚಿತ್ರಕ್ಕೆ ಎಂ. ಗುರುರಾಜನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಟಿ.ಬಿ.ಆರ್. ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಹರೀಶ್.ಕೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಯಲ್ಲಪ್ಪ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಕೆ.ಲಕ್ಷಮ್ಮ ಮತ್ತು ಕೆ.ನಾಗಣ್ಣ ಜಂಟಿಯಾಗಿ ಬ್ಲಡ್ ರೋಸಸ್ ಚಿತ್ರವನ್ನು ಅರ್ಪಣೆ ಮಾಡಿದ್ದಾರೆ.

ಸಮಾಜದಲ್ಲಿ ನಡೆದಿರುವ ಹಾಗೂ ಪ್ರಸಕ್ತ ನಡೆಯುತ್ತಿರುವ ಒಂದಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ.
ಕ್ರೈಂ, ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಧರ್ಮ ಜತೆ ಅಪ್ಸರರಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕ್ರಾಂತಿ ಕಿಲ್ಲಿ, ಶ್ರೀಲು, ಹಿರಿಯ ನಟ ಸುಮನ್, ಘರ್ಷಣಾ ಶ್ರೀನಿವಾಸ್, ಟಾರ್ಜಾನ್, ರಾಜೇಂದ್ರ, ಜ್ಯೂ.ರೇಲಂಗಿ, ಜಗದೀಶ್ವರಿ, ಮಣಿಕುಮಾರ್, ಧ್ರುವ, ಅನಿಲ್, ಪ್ರಗ್ಯಾ, ನವಿತಾ, ವೈಷ್ಣವಿ, ಜಬರ್‌ದಸ್ತ್ ಜಿಎಂಆರ್, ಜಬರ್‌ದಸ್ತ್ ಬಾಬು, ಜಬರ್‌ದಸ್ತ್ ರಾಮು, ಈಟಿವಿ ಜೀವನ್, ಮಮತಾರೆಡ್ಡಿ ಮುಂತಾದವರು ಅಭಿನಯಿಸಿದ್ದಾರೆ.

ಬ್ಲಡ್ ರೋಸಸ್‌ ಚಿತ್ರಕ್ಕೆ ಪೆದ್ದಪಲ್ಲಿ ರೋಹಿತ್ ಅವರ ಸಂಗೀತ ಸಂಯೋಜನೆ, ಬೋಗಿರೆಡ್ಡಿ ಶಿವಕುಮಾರ್, ಅವರ ಛಾಯಾಗ್ರಹಣ, ಹನುಮಾನ್’ ಖ್ಯಾತಿಯ ನಂದು ಅವರ ಸಾಹಸ ಮತ್ತು ರಾಜೇಶ್ ಲಂಕ ಹಾಗೂ ಹುಸೇನ್ ಸಹ ಆಕ್ಷನ್ ಮಾಡಿಸಿದ್ದಾರೆ. ಮಣಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ರವಿತೇಜ್.ಸಿ.ಹೆಚ್. ಅವರ ಸಂಕಲನವಿದೆ. ಚಿತ್ರದ ವಿ.ಎಫ್‌.ಎಕ್ಸ್. ಶಿರಾ ಪ್ರೊಡಕ್ಷನ್ಸ್, ಎಸ್. ಎಫ್‌.ಎಕ್ಸ್. ಶ್ರೀನು ನಾಗಪುರಿ, ಡಿಐ ಸಂಜೀವ್ ಮಾಮಡಿ, ಕಾಸ್ಟ್ಯೂಮ್ ಡಿಸೈನರ್ ಮಂದಾತಿ ಗೀತಿಕ ಅವರದಾಗಿದೆ. ಹೈದರಬಾದ್, ರಾಮೋಜಿರಾವ್ ಸ್ಟುಡಿಯೋ ಮುಂತಾದ ಲೊಕೇಶನ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಕನ್ನಡ ಆವೃತಿಯ ವಿತರಣೆ ಮಾಡಲು ಬಯಸಿದಲ್ಲಿ ನಿರ್ದೇಶಕ ಎಂ.ಗುರುರಾಜನ್ (ಸಂ.9513111669) ಅವರನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *