Popular Posts

‘ಲೋ ನವೀನ’ ತಂಡಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿನಂದನೆ

ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಲೋ ನವೀನ ಸಿನಿಮಾಗೆ ಇದೀಗ ದೊಡ್ಮನೆ ಕುಟುಂಬದಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಚಿತ್ರವನ್ನು ಮೆಚ್ಚಿಕೊಂಡು ತಂಡದೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಥೆ, ಸಹಜ ಅಭಿನಯ ಹಾಗೂ ಮನರಂಜನಾತ್ಮಕ ನಿರೂಪಣೆಯ ಬಗ್ಗೆ ಮಾತನಾಡಿದ ಅವರು, “ಸರಳ ಕಥೆಯನ್ನು ಜನರ ಮನಸಿಗೆ ತಲುಪುವ ರೀತಿಯಲ್ಲಿ ನಿರೂಪಿಸಿರುವುದು ಚಿತ್ರದ ದೊಡ್ಡ ಶಕ್ತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ನವೀನ್ ಸಜ್ಜು ಹಾಗೂ ಚಿತ್ರತಂಡದ ಪರಿಶ್ರಮವನ್ನು ಶ್ಲಾಘಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮುಂದಿನ ದಿನಗಳಲ್ಲಿ ಚಿತ್ರದ ಬೆಳವಣಿಗೆ ಹೇಗಿರಬೇಕು, ಯಾವ ರೀತಿಯ ಹೆಜ್ಜೆ ಇಡಬೇಕು ಎಂಬ ಕುರಿತು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಮಂಡ್ಯ ಶೈಲಿಯ ಭಾಷೆ ಮತ್ತು ನೈಜ ಜೀವನಕ್ಕೆ ಹತ್ತಿರವಾಗಿರುವ ಪಾತ್ರಗಳು ಚಿತ್ರದ ವಿಶೇಷತೆ ಎಂದು ಹೇಳಿದ ಅವರು, “ಕನ್ನಡ ಚಿತ್ರರಂಗಕ್ಕೆ ನಿಮ್ಮಂತ ಪ್ರತಿಭಾವಂತ ಯುವ ಕಲಾವಿದರು ಅಗತ್ಯವಿದೆ” ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ.

ಲೋ‌ ನವೀನ ಬಿಡುಗಡೆಯಾದ ನಂತರ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಈ ನಡುವೆ, ದೊಡ್ಮನೆ ಕುಟುಂಬದಿಂದ ಬಂದ ಈ ಪ್ರಶಂಸೆಯ ಮಾತುಗಳು ಲೋ ನವೀನ ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸವನ್ನು ತುಂಬಿಸಿದೆ.

Leave a Reply

Your email address will not be published. Required fields are marked *