Popular Posts

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 40,21,039 ಎನ್ಯೂಮರೇಷನ್ ಫಾರ್ಮ್ ವಿತರಣೆ: ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜು ಪಿ.ಎಸ್

ಬೆಂಗಳೂರು ನಗರ ಜಿಲ್ಲೆ ಆಗಸ್ಟ್ 04 (ಕರ್ನಾಟಕ ವಾರ್ತೆ) : ಬೆಂಗಳೂರು ನಗರ ಜಿಲ್ಲೆಯಲ್ಲಿ ಆಗಸ್ಟ್ 04 ರಂದು ನಡೆದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ -2026 ಪ್ರಕ್ರಿಯೆ ಚುರಿಕಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಒಟ್ಟು 40,21,039 ಮತದಾರರು ಇದ್ದು, ಇದ್ದುವರೆಗೂ ಜಿಲ್ಲೆಯಾದ್ಯಂತ ಒಟ್ಟು 40,21,039 ಮತದಾರರ ಎನ್ಯೂಮರೇಷನ್ ಫಾರ್ಮ್ ಳನ್ನು ವಿತರಿಸಲಾಗಿದ್ದು, 21,94.630 ಎನ್ಯೂಮರೇಷನ್ ಫಾರ್ಮ್ ಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಾಂತರಾಜು ಪಿ,ಎಸ್ ತಿಳಿಸಿದ್ದಾರೆ.

ಈವರೆಗೆ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಮತದಾರರು ಸ್ವತಃ ಆನ್ ಲೈನ್ ಮೂಲಕ 1,89,108 ಅರ್ಜಿಗಳನ್ನು ಸಲ್ಲಿಸಿದ್ದಾರೆ. 2,44,182 ಮಂದಿ ಮತದಾರರು ಮನೆಯಲ್ಲಿ ಗೈರು ಹಾಜರಿದ್ದು, 13,34,496 ಮಂದಿ ಶಾಶ್ವತ ವಲಸೆ ಹಾಗೂ 1,03,290 ಮಂದಿ ಮೃತಪಟ್ಟಿರುವುದು ವರದಿಯಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *