Popular Posts

ಉತ್ತರ ಕರ್ನಾಟಕದ ಜನಮನ ಗೆದ್ದ “ಬಾಯ್ಸ್ ನೆವರ್ ಕಾಂಪ್ರಮೈಸ್”

ಈ ಹಿಂದೆ ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು ಮೊದಲಬಾರಿಗೆ ನಿರ್ದೇಶನ ಮಾಡಿರುವ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರ ಈ ಶುಕ್ರವಾರ (ಜುಲೈ 10ಕ್ಕೆ ) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಕಿಚ್ಚ ಸುದೀಪ್ ಅರ್ಪಿಸುವ ಈ ಚಿತ್ರವನ್ನು ಮಾರಿ ಗೋಲ್ಡ್ ಸ್ಡುಡಿಯೋಸ್ ಹಾಗೂ ಯುನಿವರ್ಸಲ್ ಹ್ತಾಟ್ರಿಕ್ ಕಂಬೈನ್ಸ್ ಅಡಿ ಡಾ. ಉಜ್ವಲ ಎನ್. ಜಗದಾಳೆ ಅವರು ನಿರ್ಮಿಸಿದ್ದಾರೆ.

ಹರೀಶ್ ಜಲಗೆರೆ ಅವರ ಹಿಂದಿನ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಕೋಲಾರ ಸೀನು ಅವರು ಈ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಹಾರರ್, ಕಾಮಿಡಿ ಕಥಾಹಂದರ ಒಳಗೊಂಡ ಈ ಚಿತ್ರದ ಪ್ರಥಮ ಪ್ರೀಮಿಯರ್ ಪ್ರದರ್ಶನ ಉತ್ತರ ಕರ್ನಾಕದ ಹುಬ್ಬಳ್ಳಿಯ ಸುಧಾ ಚಿತ್ರಮಂದಿರದಲ್ಲಿ ನಡೆಯಿತು. ಈ ವೇಳೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ಚಿತ್ರ ಸಖತ್ ನಗುವಿನ‌ ಕಿಕ್ ನೀಡುತ್ತದೆ. ಹಾರರ್ ಫೀಲ್ ಕೂಡ ಇದೆ. ತುಂಬಾ ಇಷ್ಟವಾಯ್ತು ಎಂದು ಖುಷಿಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬಾಯ್ಸ್ ನೆವರ್ ಕಾಂಪ್ರಮೈಸ್’ ಹಾರರ್ ಕಾಮಿಡಿ ಜಾನರ್ ಚಿತ್ರ. ಜಾಲಿ ಟ್ರಿಪ್ ಹೊರಟ ಹತ್ತು ಜನ ಹುಡುಗರು ತರ್ಲೆ ತುಂಟಾಟ ಮಾಡಲು ಹೋಗಿ ದೆವ್ವದ ಜತೆ ಹೇಗೆ ಕನೆಕ್ಟ್ ಆಗ್ತಾರೆ ಎಂಬುದೇ ಈ ಚಿತ್ರದ ಕಾನ್ಸೆಪ್ಟ್. ಕಾಮಿಡಿ ಜತೆಗೊಂದು ಮೆಸೇಜ್ ಕೂಡ ಚಿತ್ರದಲ್ಲಿದೆ. ಹುಡುಗರಲ್ಲೂ ಕೆಲವು ರಿಕ್ವೈರ್ ಮೆಂಟ್ ಗಳಿರುತ್ತವೆ. ಅದರಲ್ಲಿ ಕೆಲವರು ಕಾಂಪ್ರಮೈಸ್ ಆದರೆ, ಕೆಲವರು ಆಗಲ್ಲ, ಆಗದಿದ್ದರೆ ಏನಾಗುತ್ತದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.

ಈ ಚಿತ್ರದಲ್ಲಿ ಸಾಮ್ರಾಟ್, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಯುವ ಪ್ರತಿಭೆಗಳೇ ನಟಿಸಿದ್ದಾರೆ. ನಟ ರಾಜೀವ್ ರೆಡ್ಡಿ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದು, ಮಾಡೆಲ್ ಹಾಗೂ ನಟಿ ನಕ್ಷತ್ರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲೋಕಿ ತವಸ್ಯ ಅವರ ಸಂಗೀತ, ಎಂ.ಎಸ್. ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಕಾರ್ತೀಕ್ ಈಶ್ವರಚಾರಿ ಅವರ ಸಂಕಲನ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರಕ್ಕಿದೆ.

Leave a Reply

Your email address will not be published. Required fields are marked *