Popular Posts

“ಕೇಕೆ” ಗುಂಟೂರು ಅಮ್ಮಾಯಿ ಹಾಡು ಬಿಡುಗಡೆ

ಕೇಕೆ… ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸೆಟ್ಟೇರಿದ್ದ, ಇದೀಗ ರಿಲೀಸ್ ಹಂತಕ್ಕೂ ಬಂದಿರುವ ಚಿತ್ರ. ಈ ಚಿತ್ರದ ವಿಶೇಷ ಐಟಂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಸೋಮಶೇಖರ್ ಜಿ.ಕೆ‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಬಹುತೇಖ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಬಳ್ಳಾರಿ ಹೊಸಪೇಟೆ ಮೂಲದ ರಮಾಲಿ ನಾಯ್ಕ್ ಮತ್ತು ಕಲ್ಯಾಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಭರತ್ ಇಂಡಿಯಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕೇಕೆ ಚಿತ್ರಕ್ಕೆ ಐ ಲವ್ ಯೂ ಚಿತ್ರ ಖ್ಯಾತಿಯ ಕಿರಣ್ ತೋಟಂಬೈಲ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈಗ ಬಿಡುಗಡೆಯಾಗಿರೋ ಗುಂಟೂರು ಅಮ್ಮಾಯಿ ಹಾಡಿಗೆ ಸಂಗೀತದ ಜೊತೆ ಕಿರಣ್ ಅವರೇ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಐಶ್ವರ್ಯ ರಂಗರಾಜನ್ ದನಿಯಾಗಿದ್ದಾರೆ.

ಆಲಾಪಾನ ಆಡಿಯೋ ಮೂಲಕ ಈ ಹಾಡು ರಿಲೀಸಾಗಿದೆ.‌ ಗುಂಟೂರು ಅಮ್ಮಾಯಿ… ಹಾಟು ಘಾಟು ಬೀಟ್ಸ್ ಇರೋ ತೆಲುಗು ಮಿಶ್ರಿತ ಕನ್ನಡ ಹಾಡು. ಕೇಳೋದಕ್ಕೆ ರಸವತ್ತಾಗಿರೋ ಈ ಹಾಡು ನೋಡಲೂ ಸಹ ಅಷ್ಟೇ ರಂಗುರಂಗಾಗಿ ಮೂಡಿ ಬಂದಿದೆ. ಸೋಷಿಯಲ್ ಮಿಡಿಯಾದಲ್ಲಿ ಹಲವು ವಿಚಾರಗಳಿಗೆ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ಹಾಡಿಗೆ ಹೆಜ್ಜೆ ಹಾಕಿರೋದು ವಿಶೇಷ.

ಇದೇ ಮೊದಲಬಾರಿಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿರೋ‌ ಸೋನು ಶ್ರೀನಿವಾಸ್ ಗೌಡ ಫಸ್ಟ್ ಮೂವೀ ಟೈಮ್ ಕ್ಯಾಮೆರಾ ಎದುರಿಸಿದ ಅನುಭವವನ್ನ ಬಿಚ್ಚಿಟ್ಟರು,
ಅಂದ್ಹಾಗೆ ಗುಂಟೂರು ಅಮ್ಮಾಯಿ ಹಾಡಿನ‌ ಬಿಡುಗಡೆಯ ಜೊತೆಗೆ ಸೋನು‌ ಅವರ ಹುಟ್ಟುಹಬ್ಬವನ್ನೂ ಚಿತ್ರತಂಡ ಆಚರಿಸಿದ್ದು ವಿಶೇಷ. ಸದ್ಯ ಕೇಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದ್ದು, ಸದ್ಯದಲ್ಲೇ ಚಿತ್ರದ ಇನ್ನಿತರ ವಿಚಾರಗಳನ್ನ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿದೆ.

Leave a Reply

Your email address will not be published. Required fields are marked *