Popular Posts

“ರಕ್ಕಿ” ಚಿತ್ರದ ಟ್ರೈಲರ್ ಬಿಡುಗಡೆ

ಕನ್ನಡದ ಬಹುನಿರೀಕ್ಷಿತ “ರಕ್ಕಿ” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಚಿತ್ರದ ಹಾಡುಗಳು PRK Audio ಯೂ ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.‌
ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ರಕ್ಕಿ ಚಿತ್ರದಲ್ಲಿ ಯುವನಟ ರಕ್ಕಿ ಸುರೇಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ‌. ಪಲ್ಲವಿ ಮಂಜುನಾಥ್ ಹಾಗೂ ಆಶಿಕಾ ಸೋಮಶೇಖರ್ ಇಬ್ಬರು ನಾಯಕಿಯರು.

ಮೊದಲಬಾರಿಗೆ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್ , ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಪರ್ಫಾರ್ಮನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಜುಲೈ 10 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಪ್ರಚಾರ ಕಾರ್ಯವೂ ಜೋರಾಗಿ ನಡೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಕಿ ಸುರೇಶ್ ಇದೊಂದು ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್. ರಕ್ಕಿ ಒಂದೊಳ್ಳೆ ಸಿನಿಮಾ ಆಗಿದ್ದು, ಪ್ರೇಕ್ಷಕರನ್ನು 100% ರಂಜಿಸುತ್ತೆ. ಅಶ್ವಿನಿ ಮೇಡಂ ಅವರು ಮುಹೂರ್ತಕ್ಕೆ ಬಂದಿದ್ದರು. ಇವತ್ತು ಟ್ರೈಲರ್ ಲಾಂಚ್ ಮಾಡಿಕೊಡುವ ಮೂಲಕ ನಮಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಇಲ್ಲಿ ನಾನೊಬ್ಬ ಗ್ಯಾಂಗ್ ಸ್ಟರ್ ಪಾತ್ರ ಮಾಡಿದ್ದೇನೆ. ಆತ ಸ್ಟೈಲಿಶ್ ಗ್ಯಾಂಗ್ ಸ್ಟರ್, ಅದೇ ಚಿತ್ರದ ಹೈಲೈಟ್. ಈ ಚಿತ್ರವನ್ನು ಕಾನ್ಫಿಡೆಂಟ್ ಆಗಿ ಮಾಡಲು ತುಂಬಾ ಜನ ಸಪೋರ್ಟ್ ಮಾಡಿದ್ದಾರೆ. ರಕ್ಕಿ ಟೀಂ ಹೋಗಿ ಫ್ಯಾಮಿಟಿ ಟೀಂ ಆಗಿದೆ. ನಾನು ಕನ್ನಡನಾಡಲ್ಲೇ ಹುಟ್ಟಿದರೂ ಜರ್ಮನ್ ನಲ್ಲಿ ಓದಿ ಬೆಳೆದದ್ದು. 2-3 ತಿಂಗಳು ವರ್ಕ್ ಷಾಪ್ ನಡೆಸಿ ಕ್ಯಾಮೆರಾ ಫೇಸ್ ಮಾಡಿದ್ದೇವೆ ಎಂದರು.

‌ ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ ಒಂದೂವರೆ ವರ್ಷದ ಹಿಂದೆ ರಕ್ಕಿ ಒಂದು ವಿಡಿಯೋ ಸಾಂಗ್ ಮಾಡಿದ್ದರು. ಅದನ್ನು ನೋಡಿ ಇವರ ಜತೆ ಯಾಕೆ ಸಿನಿಮಾ ಮಾಡಬಾರದು ಎನಿಸಿ ಕೇಳಿದೆ. ಆಗವರು ತಮ್ಮ ತಂದೆಯನ್ನು ಮೀಟ್ ಮಾಡಿಸಿದರು. ನಂತರ ಅಶ್ವಿನಿ ಮೇಡಂ ಒಪ್ಪಿದ ಕಥೆಯೇ ರಕ್ಕಿ ಆಗಿದೆ. ಅಕ್ಟೋಬರ್ ನಲ್ಲಿ ಆರಂಭಿಸಿ 35 ದಿನ ಚಿತ್ರೀಕರಣ ಮಾಡಿದ್ದೇವೆ. ನಾಯಕಿಯರಾಗಲು 50ಕ್ಕೂ ಹೆಚ್ಚು ಜನ ಬಂದಿದ್ದರು‌. ಅದರಲ್ಲಿ ಇಬ್ಬರನ್ನು ಆಯ್ಕೆ ಮಾಡಿದೆವು. ಸುರೇಶ್, ಸಂಪತ್ ಮೈತ್ರೇಯ, ಬಲ ರಾಜವಾಡಿ, ರಮೇಶ್ ಪಂಡಿತ್ ಎಲ್ಲ ಕಲಾವಿದರು ಬೆಸ್ಟ್ ಪರ್ಫಾರ್ಮನ್ಸ್ ನೀಡಿದ್ದಾರೆ.‌ ಜುಲೈ 10ಕ್ಕೆ ನಮ್ಮ ಚಿತ್ರ ರಿಲೀಸಾಗುತ್ತಿದೆ ಎಂದರು.

ನಿರ್ಮಾಪಕ ಸುರೇಶ್ ಸಾಲಿಗ್ರಾಮ‌ ಮಾತನಾಡಿ ನಮ್ಮ ತಂದೆ ರಾಜ್ ಕುಮಾರ್ ಅಭಿನಯದ ಹೊಸಬೆಳಕು ಚಿತ್ರ ನಿರ್ಮಿಸಿದ್ದರು. ಇದೀಗ ನನ್ನ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆಯಿದೆ, ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ, ಮುಂದೆ ಇನ್ನಷ್ಟು ಚಿತ್ರಗಳನ್ನ ಮಾಡುವ ಉದ್ದೇಶವೂ ನಮಗಿದೆ ಎಂದು ಹೇಳಿದರು. ಬಿ.ಸುರೇಶ್, ನಾಯಕಿಯರಾದ ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.

SNR Productions ಬ್ಯಾನರ್ ಅಡಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ “ರಕ್ಕಿ” ಭಾವನೆ, ಸಂಗೀತ, ಲವ್ ಮತ್ತು ಮಾಸ್ ಅಂಶಗಳಿಂದ ಕೂಡಿದ ಕಮರ್ಷಿಯಲ್ ಎಂಟರ್‌ಟೈನರ್. ‌ ಲೋಕಿ ತವಸ್ಯ ಅವರ ಸಂಗೀತ ಮತ್ತು ಸಾಹಿತ್ಯ, ಐ ಸಾಕ್ ಪ್ರಭಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ,

Leave a Reply

Your email address will not be published. Required fields are marked *