1
1
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಯಶಸ್ವಿಯಾಗ ಸಾವಿರ ಕಂತುಗಳನ್ನು ಪೂರೈಸಿ ಮುನ್ನಡೆದಿದೆ. ಪುಟ್ಟಕ್ಕನ ಪಾತ್ರ ಸ್ವಂತ ಹೋಟಿಲ್ ಮಾಡುವ ಬಹುತೇಕ ಸ್ವಾವಲಂಬಿ ಮಹಿಳೆಯರಿಗೆ ಸ್ಪೂರ್ತಿಯಾಗಿದೆ, ಈಗ ಪುಟ್ಟಕ್ಕನ ಮಕ್ಕಳು ಯಶಸ್ವಿಯಾಗಿ ಸಾವಿರ ಸಂಚಿಕೆಗಳನ್ನು ಪೂರೈಸಿ ಉತ್ತಮ ಟಿ. ಆರ್ .ಪಿ ಗಳಿಸಿದೆ.

ಗಂಡನಿಂದ ವಂಚಿಳಾದ ಮಹಿಳೆಯೊಬ್ಬಳು ಜೀವನದಲ್ಲಿ ಕುಗ್ಗದೇ ತನ್ನ ಪರಿಶ್ರಮದಿಂದಲೇ ಮೇಲೆಬಂದ ಕಥಾನಕ ಇದಾಗಿದ್ದು, ಮಹಿಳೆಯಾದರೇನು ಛಲವೊಂದಿದ್ದರೆ ಸಾಕು, ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ಪುಟ್ಟಕ್ಕನ ಮಕ್ಕಳು ಸಾಬೀತುಪಡಿಸಿದೆ.
ಹಾಗೆ ನೋಡಿದರೆ ಇದು ಉಮಾಶ್ರೀ ಅವರ ಸ್ವಂತ ಜೀವನದ ಕಥೆಯನ್ನೇ ಹೋಲುತ್ತದೆ, ಅವರು ಕೂಡ ಹಾಗೇ ಕಷ್ಟದಲ್ಲೇ ಬೆಳೆದುಬಂದು ಚಿತ್ರರಂಗದಲ್ಲಿ ಭದ್ರನೆಲೆ ಕಂಡುಕೊಂಡ ಮಹಿಳೆ.

ಹೆಣ್ಣುಮಕ್ಕಳ ಹೆತ್ತೋಳು, ಎಲ್ಲ ದೇವರಿಗೂ ದೊಡ್ಡೋಳು ಎಂಬ ಶೀರ್ಷಿಕೆ ಗೀತೆಯಿಂದಲೇ ವೀಕ್ಷಕರ ಗಮನ ಸೆಳೆದಿದ್ದ, ಆರೂರು ಜಗದೀಶ್ ಅವರ ನಿರ್ದೇಶನದ ಜೆ.ಎಸ್. ಪ್ರೊಡಕ್ಷನ್ಸ್ ನ ಸ್ಮಿತಾ ಜೆ.ಶೆಟ್ಟಿ ಅವರ ನಿರ್ಮಾಣದ ಪುಟ್ಟಕ್ಕನ ಮಕ್ಕಳು ಮೊದಲ ವಾರದ ರೇಟಿಂಗ್ನಲ್ಲಿ 13.5 ಟಿ.ವಿ.ಆರ್. ಗಳಿಸುವ ಮೂಲಕ ಭಾರತದಲ್ಲೇ ಅತಿಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಾರಿಕಾ, ಗುರು ಹೆಗ್ಡೆಯಂಥ ಹಿರಿಯ ಕಲಾವಿದರ ಜೊತೆಗೆ, ಧನುಷ್, ಅಕ್ಷರ, ವಿದ್ಯಾ, ಶಿಲ್ಪ, ಅನಿರೀಶ್ರಂಥ ಯುವ ಕಲಾವಿದರ ಬಳಗವಿರೋ ಪುಟ್ಟಕ್ಕನ ಮಕ್ಕಳಿಂದ ಸ್ಫೂರ್ತಿಗೊಂಡು ಅನೇಕ ಮಹಿಳೆಯರು ತಾವೂ ಸಹ ಹೊಟೇಲ್ ಶುರು ಮಾಡಿದ ಅನೇಕ ಘಟನೆಗಳು ರಾಜ್ಯದಲ್ಲಿ ನಡೆದ ಉದಾಹರಣೆಗಳಿವೆ.
