Popular Posts

“ಖೇಲೋ BSNDP” ಕ್ರಿಕೆಟ್ ಲೀಗ್ ಲೋಗೋ ಬಿಡುಗಡೆ

ರಾಜ್ಯ ಹಾಗೂ ದೇಶವೇ ಗಮನಿಸುವಂತಹ ಒಂದು ವಿಭಿನ್ನ ಕ್ರಿಕೆಟ್ ಪಂದ್ಯಾವಳಿಗಳನ್ನು “ಖೇಲೋ ಬಿಎಸ್‌ಎನ್‌ಡಿಪಿ” ಆಯೋಜಿಸಿದೆ. ಈ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಸುವರ್ಣ ಅವಕಾಶವನ್ನು ನೀಡುತ್ತಿದೆ. ಕೇರಳದ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ಈ ಖೇಲೋ ಬಿಎಸ್‌ಎನ್‌ಡಿಪಿ ಕ್ರಿಕೆಟ್ ಲೀಗ್ ಕರ್ನಾಟಕದಲ್ಲಿ ನಡೆಸಲು ಸುಮಾರು ಆರು ತಿಂಗಳು ಸತತ ಪೂರ್ವ ತಯಾರಿಯೊಂದಿಗೆ ಯುವಜನ ಸಬಲೀಕರಣ ಕ್ರೀಡಾ ತಂಡವು ಮುಂದಾಗಿದೆ.

ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಆಸಕ್ತ ಯುವಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಸದುದ್ದೇಶದಿಂದ ಈ ರಾಜ್ಯ ಮಟ್ಟದ ಕ್ರಿಕೆಟ್ ಲೀಗ್ ಆಯೋಜಿಸಲಾಗುತ್ತಿದೆ. ಈ ಖೇಲೋ ಬಿಎಸ್‌ಎನ್‌ಡಿಪಿ ಕ್ರಿಕೆಟ್ ಲೀಗ್ ಪಂದ್ಯದ ಲೋಗೋ ಬಿಡುಗಡೆ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ದೇವಿಕಾನಂದ ಶ್ರೀಗಳು, ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗಮಿಸಿ, ಲೀಗ್ ಲೋಗೋ ಅನಾವರಣ ಮಾಡುವ ಮೂಲಕ ಈ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು.

ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದೊಂದು ತಂಡ ಇರಲಿದ್ದು, ಅದಕ್ಕೂ ಮುನ್ನ 31 ಜಿಲ್ಲೆಗಳಲ್ಲಿ ಆಯಾ ಪ್ರದೇಶದ ಗಣ್ಯರ ಹೆಸರಿನಲ್ಲಿ ಕ್ರೀಡಾ ಜ್ಯೋತಿ ಯಾತ್ರೆ ನಡೆಯಲಿದೆ. ಹಾಗೆಯೇ ಒಂದೊಂದು ಜಿಲ್ಲೆಯಲ್ಲೂ ವಿಶೇಷ ಕಾರ್ಯಕ್ರಮದ ಮೂಲಕ ಈ ಕ್ರಿಕೆಟ್ ಪಂದ್ಯಾವಳಿಯ ನಡೆಯುವ ಸ್ಥಳ , ಜರ್ಸಿ ಸೇರಿದಂತೆ ಬಹಳಷ್ಟು ವಿಚಾರಗಳನ್ನು ತಿಳಿಸಿಕೊಡುವುದರ ಜೊತೆಗೆ ಕ್ರಿಕೆಟ್ ಪಂದ್ಯದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಜಾತಿ , ರಾಜಕಾರಣ ಮಾಡದೆ ಪ್ರತಿಭೆ ಇರುವಂತಹ ಉತ್ತಮ ಆಟಗಾರರ ಆಯ್ಕೆ ಮಾಡುವುದು ಈ ಪಂದ್ಯಾವಳಿಯ ಉದ್ದೇಶ. ಅದಕ್ಕಾಗಿ ಪಾರದರ್ಶಕವಾಗಿ ಕೆಲಸ ಮಾಡಲು ತಂಡ ರಚನೆಯಾಗಿದ್ದು, ಒಂದೊಂದೇ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಆಯೋಜಕರ ತಂಡ ಹಂಚಿಕೊಳ್ಳಲಿದೆ.

ಈ ಲೀಗ್ ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 25 ಲಕ್ಷ ರೂ. 5 ಲಕ್ಷ ದ್ವಿತೀಯ ಬಹುಮಾನವಾಗಿ 2.5 ಲಕ್ಷ ತೃತೀಯ ಬಹುಮಾನ ಸಿಗಲಿದೆ. ಮ್ಯಾನ್ ಆಫ್ ದಿ ಸೀರೀಸ್ ಗೆ ಇವಿ ಬೈಕ್ ಬಹುಮಾನವಾಗಿ ದೊರೆಯಲಿದೆ. ಕ್ರಿಕೆಟಿಗ ದೊಡ್ಡ ಗಣೇಶ್, ನಿರ್ಮಾಪಕರಾದ ಡಾ. ಸಂಜಯ್ ಗೌಡ್ರು, ಮೋಹನ್ ಬಾಬು, ಟಿವಿ ಬಾಬು, ಬಿ.ಸೋಮಶೇಖರ್, ಸೈದಪ್ಪ ಕೆ. ಗುತ್ತೇದಾರ್ ಇತರರು ಉಪಸ್ಥಿತರಿದ್ದರು.
ಗಣ್ಯರೆಲ್ಲ ಈ ಕ್ರಿಕೆಟ್ ಪಂದ್ಯಾವಳಿಗೆ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ ಕ್ರೀಡೆಗಾಗಿ ಇರುವ ಸರಕಾರದ ಸೌಲತ್ತುಗಳನ್ನು ಎಲ್ಲರೂ ಬಳಸಿಕೊಳ್ಳಬೇಕು, ಯುವಜನರು ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಕ್ರಿಕೆಟ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದ್ದು, ಗ್ರಾಮೀಣ ಪ್ರತಿಭೆಗಳು ಸೇರಿದಂತೆ ಆಸಕ್ತಿ ಇರುವ ಎಲ್ಲಾ ಕ್ರಿಕೆಟ್ ಆಟಗಾರರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ.

Leave a Reply

Your email address will not be published. Required fields are marked *