Popular Posts

“ಬಾಲನ್ ದಿ ಬಾಯ್” ಸಿನಿಮಾಗೆ ವಿಶ್ವ ವೇದಿಕೆ ಕಲ್ಪಿಸಿದ ಕೆ.ವಿ.ಎನ್. ಪ್ರೊಡಕ್ಷನ್

ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಕೆವಿಎನ್. ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ್ ಅವರು ನೂರಾರು ಕೋಟಿ ರೂ. ಸುರಿದು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಕೆವಿಎನ್ ನಿರ್ಮಿಸಿರುವ ಕೆಡಿ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಸೂಪರ್ ಹಿಟ್ ಆಗಿದೆ. ಇದೀಗ ಈ ಖುಷಿಯ ನಡುವೆ ಕೆವಿಎನ್ ಸಂಸ್ಥೆ ಮತ್ತೊಂದು ಮಹತ್ತರ ಹೆಜ್ಜೆಯೊಂದನ್ನು ಇಟ್ಟಿದೆ.

ಕೆವಿಎನ್ ಕನ್ನಡ, ತೆಲುವು ಹಾಗೂ ತಮಿಳು ಚಿತ್ರಗಳನ್ನು ನಿರ್ಮಿಸುತ್ತಿದೆ. ಜೊತೆಗೆ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಈ ಸಂಸ್ಥೆ ‘ಬಾಲನ್ ದಿ ಬಾಯ್’ ಎಂಬ ಮಲಯಾಳಂ ಸಿನಿಮಾಗೆ ಬಂಡವಾಳ ಹೂಡಿದೆ. ಈ ಚಿತ್ರವನ್ನು ಇದೀಗ ವಿಶ್ವ ವೇದಿಕೆಗೆ ಕೊಂಡೊಯ್ಯುತ್ತಿದೆ.

ಕೆವಿಎನ್ ಅಡಿ ನಿರ್ಮಾಣವಾಗಿರುವ ಬಾಲನ್ ದಿ ಬಾಯ್ಸ್ ಚಿತ್ರವ ಕಾನ್ಸ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಹೌದು, ಅತ್ಯಂತ ಪ್ರತಿಷ್ಠಿತ ಚಿತ್ರೋತ್ಸವ ಎಂದು ಪರಿಗಣಿಸಲಾಗಿರುವ ಕಾನ್ಸ್​ ಸಿನಿಮೋತ್ಸವದಲ್ಲಿ ಬಾಲನ್ ದಿ ಬಾಯ್ಸ್ ಚಿತ್ರ ಪ್ರದರ್ಶನಗೊಳ್ಳಲಿದೆ.

ಇದೇ ತಿಂಗಳ 14ರಂದು ನಡೆಯುವ ಕಾನ್ಸ್ ಚಿತ್ರೋತ್ಸವದಲ್ಲಿ ದೇಶ ವಿದೇಶಗಳ ಕಲಾವಿದರು ಭಾಗವಹಿಸಲಿದ್ದಾರೆ. ಈ ಸಿನಿಮೋತ್ಸವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಬಾಲನ್ ದಿ ಬಾಯ್ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ಮಂಜುಮ್ಮೆಲ್ ಬಾಯ್ಸ್ ಚಿತ್ರ ನಿರ್ದೇಶನ ಮಾಡಿದ್ದ ಚಿದಂಬರಂ ಅವರು ಬಾಲನ್ ದಿ ಬಾಯ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

Leave a Reply

Your email address will not be published. Required fields are marked *