Popular Posts

ಚಿಕ್ಕವರು ಕೋಣರಲ್ಲಟ್ರೈಲರ್ ಬಿಡುಗಡೆ

ಈ ಹಿಂದೆ ಕನ್ನಡದಲ್ಲಿ ಮಕ್ಕಳ ಸಾಹಸದ ಕಥಾಹಂದರ ಇರುವ ಚಿತ್ರಗಳು ನಿರ್ಮಾಣವಾಗಿ ಜನಮನ್ನಣೆ ಗಳಿಸಿವೆ, ಇದೀಗ ಮಕ್ಕಳ ಮತ್ತೊಂದು ಸಾಹಸಗಾಥೆ ತೆರೆಗೆ ಬರುತ್ತಿದೆ. ಆ ಚಿತ್ರದ ಹೆಸರು ಚಿಕ್ಕವರು ಕೋಣರಲ್ಲ, ಸಾಮಾನ್ಯವಾಗಿ ನಾವು ಬುದ್ದಿವಂತರಲ್ಲದ ಮಕ್ಕಳನ್ನು ಕೋಣ ಎಂದು ಕರೆಯುವುದು ರೂಢಿಯಲ್ಲಿದೆ. ಅದೇ ಮಕ್ಕಳನ್ನು, ಅವರ ಸಾಹಸವನ್ನು ಮೆಚ್ಚಿಕೊಂಡಾ ಚಿಕ್ಕವರು ಕೋಣರಲ್ಲ ಎನ್ನಬಹುದು. ಪ್ರಕಾಶ್ ಚಿನ್ನಪ್ಪ ಅವರು ಇದೇ ಕಂಟೆಂಟ್ ಇಟ್ಟುಕೊಂಡು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಜತೆಗೆ ಚಿತ್ರದ ನಿರ್ಮಾಣ‌ ಸಹ ಮಾಡಿದ್ದಾರೆ. ಈ ಹಿಂದೆ ಪ್ರಕಾಶ್ ಚಿನ್ನಪ್ಪ ಅವರು ಚೆನ್ನೆ`ನಲ್ಲಿ ಗ್ರಾಫಿಕ್ಸ್ ಅಲ್ಲದೆ ಕಂಟೆಂಟ್ ಎಡಿಟರ್ ಆಗಿಯೂ ಕೆಲಸ ಮಾಡಿದವರು.. ಬಿಡುಗಡೆಗೆ
ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಶನಿವಾರ ಸಂಜೆ ನೆರವೇರಿತು.

ಹಿರಿಯ ಕಲಾವಿದರಾದ ರಮೇಶ್ ಭಟ್ ಹಾಗೂ ಸುಂದರರಾಜ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,
ಅಲ್ಲದೆ ನಟಿ ಅನಿತಾ ಭಟ್ ಅವರೂ ವಿಶೇಷ ಪಾತ್ರ ನಿರ್ವಹಿಸಿದ್ದಾರೆ, ಸಂತೋಷ್ ಶೆಟ್ಟಿ ಅವರೊಂದಿಗೆ ಚಿಣ್ಣರುಗಳಾದ
ಸೆಹರಿ ರೆಡ್ಡಿ, ತಿಷ್ಯಾ, ಹನ್ಸಿಕಾ, ಶ್ರೀನಿವಾಸ ಮುಂತಾದವರು ನಟಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ಚಿನ್ನಪ್ಪ ಸಾಮಾನ್ಯವಾಗಿ ಮಕ್ಕಳಲ್ಲಿ 5 ರಿಂದ 11 ವರ್ಷದವರೆಗೆ ಸಾಕಷ್ಟು ಬದಲಾವಣೆಗಳಾಗುತ್ತವೆ, ಆ ವಯಸಿನಲ್ಲಿ ಮಕ್ಕಳು ತುಂಬಾ ಬ್ರಿಲಿಯಂಟ್ ಆಗಿರ‍್ತಾರೆ. ಅವರು ಚಿಂತನೆ ಮಾಡುವ ರೀತಿ, ಆಲೋಚನೆಗಳೇ ವಿಭಿನ್ನವಾಗಿರುತ್ತವೆ, ಮುಂದೆ 20 ವರ್ಷಗಳ ನಂತರ ಜಗತ್ತು ಯಾವ ರೀತಿ ಬದಲಾವಣೆಯಾಗಿರುತ್ತದೆ, ಗ್ಲೋಬಲ್ ವಾರ್ಮಿಂಗ್ ಆದಾಗ, ಮಕ್ಕಳು ತಮ್ಮ ಜಾಗವನ್ನು ಉಳಿಸಿಕೊಳ್ಳಲು ಹೇಗೆಲ್ಲ ಹೋರಾಡುತ್ತಾರೆ, ಇಬ್ಬರು ಹಿರಿಯ ಬ್ರದರ‍್ಸ್ ಮಧ್ಯೆ ನಡೆದ ಸಂಘರ್ಷವನ್ನು ಮಕ್ಕಳು ಹೇಗೆ ಸರಿಪಡಿಸಿದರು ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಸಾಗರ, ಸಿರ್ಸಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾನು ಈ ಕಥೆ ಬರೆಯುವಾಗಲೇ ಇಬ್ಬರು ಹಿರಿಯರ ಪಾತ್ರಗಳಿಗೆ ರಮೇಶ್ ಭಟ್ ಹಾಗೂ ಸುಂದರ ರಾಜ್ ಅವರೇ ಬೇಕು ಅಂದುಕೊಂಡಿದ್ದೆವು, ಜ್ಞಾನದ ಹಿಂದೆ ಬಿದ್ದರೆ ಏನಾಗುತ್ತದೆ ? ಹಣದ ಹಿಂದೆ ಬಿದ್ದರೆ ಏನಾಗತ್ತದೆ ಎನ್ನುವುದೇ ಈ ಚಿತ್ರ. ಸುಮಾರು 20 ನಿಮಿಷಗಳ ಗ್ರಾಫಿಕ್ಸ್ ಚಿತ್ರದಲ್ಲಿದ್ದು, ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ನಿಂದ ‘U’ ಪ್ರಮಾಣ ಪತ್ರ ಸಿಕ್ಕಿದೆ , ಸದ್ಯದಲ್ಲೇ ರಿಲೀಸ್ ಮಾಡುವ ಪ್ಲಾನಿದೆ ಎಂದು ಚಿತ್ರದ ಬಗ್ಗೆ ವಿವರಿಸಿದರು,

ಈ ಹಿಂದೆ ದ್ವಂದ್ವ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಲೋ ನವೀನಾ ಚಿತ್ರಗಳಿಗೆ ಕ್ತಾಮೆರಾ ಮ್ಯಾನ್ ಆಗಿದ್ದ ರಿಶಿಕೇಶ್ ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನದ ಜತೆಗೆ ಸಾಕಷ್ಟು ಜವಾಬ್ದಾರಿ ನಿಭಾಯಿಸಿದ್ದಾರೆ‌. ಸಿನಿಮಾ ಕುರಿತು ಮಾತನಾಡುತ್ತ ಈ ಚಿತ್ರದಲ್ಲಿ ನಟಿಸಿದ ಮಕ್ಕಳೆಲ್ಲ ಹೊಸಬರು, ಅವರನ್ನು ಪ್ರಕಾಶ್ ಅವರು ಪ್ರಿಪೇರ್ ಮಾಡಿದ್ದರು. ಒಂದಷ್ಟು ಪ್ಲಾನ್ ಮಾಡಿಕೊಂಡು ನಂತರ ಶೂಟಿಂಗ್ ನಡೆಸಿದೆವು. ಫ್ರೀಡಂ ಬಗ್ಗೆ, ಊರಿನ ಬಗ್ಗೆ ಅಲ್ಲದೆ ಎಜುಕೇಶನ್ ಬಗ್ಗೆಯೂ ಚಿತ್ರದಲ್ಲಿ ಹೇಳಿದ್ದೇವೆ ಎಂದರು. ಸಂಗೀತ ನಿರ್ದೇಶಕ ವಿವಾನ್ ಸೂರ್ಯ ಮಾತನಾಡಿ ಚಿತ್ರದಲ್ಲಿ 4 ಹಾಡುಗಳಿವೆ, ಅನಿತಾ ಭಟ್ ಅವರ ಮೂಲಕ ನನಗೀ ತಂಡದ ಪರಿಚಯವಾಯಿತು, ಈಗಿನ ಜನರೇಶನ್ ಮಕ್ಕಳಿಗೆ ಈ ಚಿತ್ರ ತುಂಬಾ ಮುಖ್ಯವಾಗಿದೆ ಎಂದು ಹೇಳಿದರು, ನಟರಾದ ರಮೇಶ್ ಭಟ್, ಸುಂದರರಾಜ್, ಅನಿತಾಭಟ್ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು, ಐವರು ಸ್ನೇಹಿತರ ಜತೆ ಪ್ರಕಾಶ್ ಚಿನ್ನಪ್ಪ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Leave a Reply

Your email address will not be published. Required fields are marked *